ʼಗಟ್ಟಿಮೇಳ ನಿಲ್ಸಿʼ: ಗಂಡನ 2ನೇ ಮದ್ವೆಗೆ ಮೊದಲ ಹೆಂಡ್ತಿ ಎಂಟ್ರಿ, ಮುಂದೇನಾಯ್ತು?
ಅಲ್ಲಿ ನೂರಾರು ಜನ ಸಂಬಂಧಿಕರು ನೆರೆದು ಸಡಗರ ಸಂಭ್ರಮದಿಂದ ಮದುವೆ ಸಮಾರಂಭ ನಡೆಸುತ್ತಿದ್ದರು. ಆದ್ರೆ, ಅಲ್ಲಿಗೆ ಎಂಟ್ರಿ ಕೊಟ್ಟ ಮೊದಲನೇ ಹೆಂಡತಿ, ವಿಚ್ಚೇಧನ ಪಡೆಯದೆ ಎರಡನೇ ಮದುವೆ ಎಂದು ಆರೋಪಿಸಿ ಗಲಾಟೆ ಮಾಡಿದರು. ಇದ್ರಿಂದ ಎರಡು ಕಡೆಯವರು ಮದುವೆ ಮನೆಯಲ್ಲಿ ಪರಸ್ಪರ ಕೈ ಕೈ ಮಿಲಾಯಿಸಿ ಗಲಾಟೆ ಮಾಡುವಂತಾಯಿತು. ಅಷ್ಟಕ್ಕೂ ಅದೇಲ್ಲಿ ಅಂತೀರಾ? ಈ ವರದಿ ಓದಿ.
ಚಿಕ್ಕಬಳ್ಳಾಪುರ, ಆ.21: ನಗರದ ಸಿಎಸ್‌ಐ ಚರ್ಚ್ನಲ್ಲಿ ಚಿಕ್ಕಬಳ್ಳಾಪುರ(Chikkaballapur)ದ ನಿವಾಸಿಗಳಾದ ನೋಹನ್ ಕಾಂತ್ ಹಾಗೂ ಗ್ಲೋರಿ ಎಂಬಾಕೆಯ ವಿವಾಹ ನಡೆದಿತ್ತು. ಎಲ್ಲ ಸಂಬಂಧಿಕರು ಸಡಗರ ಸಂಭ್ರಮದಿಂದ ಮದುವೆಯಲ್ಲಿ ಭಾಗವಹಿಸಿ ನೂತನ ವಧು- ವರರಿಗೆ ಆರ್ಶಿವಾದ ಮಾಡಿ ಚರ್ಚನ ಫಾಧರ್ ಸಮ್ಮುಖದಲ್ಲಿ ಅಂತಿಮ ಹಂತದ ಮದುವೆ ಪ್ರಕ್ರಿಯೆಗಳನ್ನ ನಡೆಸಿದರು. ಅಷ್ಟರಲ್ಲೇ ಮದುವೆ ವಿಷಯ ತಿಳಿದ ಮೊದಲನೇ ಹೆಂಡತಿ ರಶ್ಮಿ, ಮದುವೆ ಮನೆಗೆ ನುಗ್ಗಿ ದೊಡ್ಡ ರಂಪಾಟ ಮಾಡಿದರು.
ಡೈವೊರ್ಸ್ ಪ್ರತಿ ತೋರಿಸಿದ ನೋಹನ್ ಕಾಂತ್
ಮೊದಲ ಹೆಂಡತಿ ರಶ್ಮಿ, ಗಂಡ ನೋಹನ್ ಕಾಂತ್ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿ ಕೂಗಾಟ ಮಾಡುತ್ತಿದ್ದಂತೆ ಕೆಲಕಾಲ ಪರಸ್ಪರರ ತಳ್ಳಾಟ ನೂಕಾಟ ನಡೆಯಿತು. ತನಗೆ ಡೈವೋರ್ಸ್ ಕೊಡದೆ ತನ್ನ ಗಂಡ ಎರಡನೇ ಮದುವೆಯಾಗುತ್ತಿದ್ದಾನೆ. ನನಗೆ, ನನ್ನ ಮಗುವಿಗೆ ನ್ಯಾಯ ಬೇಕು ಎಂದು ಕೂಗಾಡಿದಳು. ಆದ್ರೆ, ವರ ನೋಹನ್ ಕಾಂತ್ ಮಾತ್ರ, ಮೊದಲ ಹೆಂಡತಿ ಜೊತೆ ಡೈವೊರ್ಸ್ ಆಗಿದೆ ಎಂದು ಡೈವೊರ್ಸ್ ಪ್ರತಿ ಪ್ರದರ್ಶನ ಮಾಡಿದರು.
ಇದನ್ನೂ ಓದಿ:ನಂಬಿದವರು ಅಸಹಾಯಕ ಸ್ಥಿತಿಯಲ್ಲಿದ್ದಾಗಲೇ ಆ ಇಬ್ಬರು ವಿವಾಹಿತರ ಮಧ್ಯೆ ಪ್ರೇಮಾಂಕುರ! ಆಮೇಲೇನಾಯ್ತು?
ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ, ಬೇರೆ ಬೇರೆ ವಾಸಿಸುತ್ತಿದ್ದ ಇಬ್ಬರು
ಇನ್ನು 2018 ರಲ್ಲೇ ರಶ್ಮಿ ಹಾಗೂ ನೋಹನ್ ಕಾಂತ್ ಇದೇ ಚರ್ಚ್ನಲ್ಲಿ ವಿವಾಹವಾಗಿದ್ದರು. ಆದ್ರೆ, ಮದುವೆಯಾಗಿ ಮಗು ಆದ ನಂತರ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ಬೇರೆ ಬೇರೆಯಾಗಿ ಜೀವನ ಸಾಗಿಸುತ್ತಿದ್ದರು. ಈ ನಡುವೆ ರಶ್ಮಿ ತನಗೆ ಹಾಗೂ ತನ್ನ ಮಗಳಿಗೆ ಜೀವನಾಂಶ ಕೋರಿ ನ್ಯಾಯಾಲದಲ್ಲಿ ಪ್ರಕರಣ ದಾಖಲಿಸಿದ್ದಳು. ಆದ್ರೆ, ಇತ್ತ ನೋಹನ್‌ಕಾಂತ್ ನಾನು 2022 ರಲ್ಲೇ ವಿಚ್ಚೇಧನ ಪಡೆದಿದ್ದೇನೆ, ಕಾನೂನು ಪ್ರಕಾರವಾಗಿ ನಾನು ಎರಡನೇ ಮರು ಮದುವೆಯಾಗುತ್ತಿದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ