ಮೈಸೂರಿನಲ್ಲಿ ಬಾವಿಗೆ ಬಿದ್ದ ಚಿಪ್ಪು ಹಂದಿ ರಕ್ಷಿಸಿ ಮಾನವೀಯತೆ ಮೆರೆದ ಗ್ರಾಮಸ್ಥರು
ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿಯನ್ನು ರಕ್ಷಿಸಿ ಮೈಸೂರಿನ ಚಿಕ್ಕಾಡನಹಳ್ಳಿ ಗ್ರಾಮಸ್ಥರು ಮಾನವೀಯತೆ ಮೆರೆದಿದ್ದಾರೆ.
ಮೈಸೂರು: ಹುಣಸೂರು ತಾಲೂಕಿನ ಚಿಕ್ಕಾಡನಹಳ್ಳಿಯಲ್ಲಿ ಬಾವಿಗೆ ಬಿದ್ದಿದ್ದ ಚಿಪ್ಪು ಹಂದಿಯನ್ನು ರಕ್ಷಣೆ ಮಾಡಿದ್ದಾರೆ. ರಕ್ಷಿಸಿದ ಚಿಪ್ಪು ಹಂದಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಡರಾತ್ರಿ ಗ್ರಾಮದ ಬಾವಿಗೆ ಚಿಪ್ಪು ಹಂದಿ ಅಚಾನಕ್ ಆಗಿ ಬಿದ್ದಿತ್ತು. ಗ್ರಾಮಸ್ಥರು ಬೆಳಿಗ್ಗೆ ಗಮನಿಸಿದ ತಕ್ಷಣ ಚಿಪ್ಪು ಹಂದಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ತಕ್ಷಣ ಕಾರ್ಯಚರಣೆ ನಡೆಸಿ ಬಾವಿಯಿಂದ ಚಿಪ್ಪು ಹಂದಿಯನ್ನ ರಕ್ಷಿಸಿದ್ದಾರೆ. ನಂತರ ಅರಣ್ಯ ಇಲಾಖೆಗೆ ಪ್ರಾಣಿಯನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಗ್ರಾಮಸ್ಥರ ಕಾರ್ಯಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ತಾಯಿಯಿಂದ ದೂರವಾಗಿದ್ದ ಎರಡು ಹುಲಿ ಮರಿಗಳ ರಕ್ಷಣೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ತಾಯಿಯಿಂದ ದೂರವಾಗಿ ಶೋಚನೀಯ ಸ್ಥಿತಿಯಲ್ಲಿ ಮೂರು ಹುಲಿ ಮರಿಗಳು ಪತ್ತೆಯಾಗಿವೆ. ಇವುಗಳಲ್ಲಿ ಒಂದು ಹುಲಿ ಮರಿ ಸ್ಥಳದಲ್ಲಿಯೇ ಮೃತ ಪಟ್ಟಿದೆ. ಇದನ್ನು ಕಂಡ ಇಲಾಖೆ ಸಿಬ್ಬಂದಿ ಹುಲಿ ಮರಿಗಳ ರಕ್ಷಣೆಗೆ ಮುಂದಾಗಿದ್ದಾರೆ. ಮೃಗಾಲಯದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಂದು ಹುಲಿ ಮರಿ ಸಾವನ್ನಪ್ಪಿದೆ. ತಾಯಿ ಹುಲಿಗಾಗಿ ಹುಡುಕಾಟ ನಡೆಯುತ್ತಿದ್ದು, ಸ್ಥಳದಲ್ಲಿ ತಾಯಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಇದನ್ನೂ ಓದಿ: ಅಳಿವಿನಂಚಿನಲ್ಲಿರುವ ಜಿಂಕೆ, ಕೃಷ್ಣಮೃಗ: ಸಂರಕ್ಷಿತ ಪ್ರಾಣಿಗಳ ರಕ್ಷಣೆ ಯಾರ ಜವಾಬ್ದಾರಿ?
ಕಾಡು-ಪ್ರಾಣಿಗಳ ಮಧ್ಯೆ ವೃಕ್ಷ ರಕ್ಷಕ, ಗಣಿನಾಡಿನಲ್ಲಿ ಅಪರೂಪದ ಕಾಯಕಯೋಗಿ