ಲಾಕ್‌ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಬಾರದು: ಕಾಂಗ್ರೆಸ್ ಟ್ವೀಟ್
ಲಾಕ್‌ಡೌನ್ ಬಗ್ಗೆ ಸರ್ಕಾರ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಬಾರದು. ದ್ವಂದ್ವ ನಿಲುವು ತಾಳದೇ ಸ್ಪಷ್ಟ ಸಂದೇಶವನ್ನು ನೀಡಬೇಕು. ಲಾಕ್‌ಡೌನ್ ಕೊರೊನಾಗಿಂತಲೂ ಭೀಕರವಾದದ್ದು, ಈ ಕಹಿಸತ್ಯ ಹಿಂದಿನ ಅನುಭವದಿಂದಲೇ ತಿಳಿದಿದೆ: ಕಾಂಗ್ರೆಸ್
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಹಬ್ಬುತ್ತಿರುವ ವೇಗಕ್ಕೆ ರಾಜ್ಯ ಸರ್ಕಾರ ಕಂಗಾಲಾಗಿ ಹೋಗಿದ್ದು, ಕಠಿಣ ನಿಯಮಾವಳಿಗಳನ್ನು ರೂಪಿಸುವ ಸಲುವಾಗಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುರ್ತು ಸಭೆ ನಡೆಸುತ್ತಿದ್ದಾರೆ. ನಾಳೆ (ಏಪ್ರಿಲ್ 17) ಉಪಚುನಾವಣೆ ಮುಗಿದ ಬಳಿಕ ಏಪ್ರಿಲ್ 18ರಂದು ಸರ್ವಪಕ್ಷ ಸಭೆ ಕರೆದು ಲಾಕ್‌ಡೌನ್ ಬಗ್ಗೆ ಚರ್ಚಿಸುವುದಾಗಿಯೂ ಈಗಾಗಲೇ ತಿಳಿಸಿದ್ದಾರೆ. ಆದರೆ, ಸಭೆಗೂ ಮುನ್ನವೇ ಲಾಕ್‌ಡೌನ್ ಹೇರುವ ಬಗ್ಗೆ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ತಿಳಿಸಿದ್ದು, ಟ್ವೀಟ್ ಮಾಡುವ ಮೂಲಕ ಲಾಕ್‌ಡೌನ್ ಅತ್ಯಂತ ಭೀಕರವಾದದ್ದು ಎಂದು ಹೇಳಿದೆ.
ನಾಳೆ ನಡೆಯಲಿದೆ ಕೊರೊನಾ ಸರ್ವಪಕ್ಷ ಸಭೆ ಲಾಕ್‌ಡೌನ್ ಬಗ್ಗೆ ಸರ್ಕಾರ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಬಾರದು. ದ್ವಂದ್ವ ನಿಲುವು ತಾಳದೇ ಸ್ಪಷ್ಟ ಸಂದೇಶವನ್ನು ನೀಡಬೇಕು. ಲಾಕ್‌ಡೌನ್ ಕೊರೊನಾಗಿಂತಲೂ ಭೀಕರವಾದದ್ದು, ಈ ಕಹಿಸತ್ಯ ಹಿಂದಿನ ಅನುಭವದಿಂದಲೇ ತಿಳಿದಿದೆ. ವಲಸೆ ಕಾರ್ಮಿಕರಿಂದ ಹಿಡಿದು ಕೈಗಾರಿಕೆಗಳು, ಕಂಪನಿಗಳವರೆಗೂ ಲಾಕ್‌ಡೌನ್‌ಗೆ ಒಗ್ಗುವುದು ಕಷ್ಟಕರ ಎಂದು ರಾಜ್ಯ ಕಾಂಗ್ರೆಸ್ ಘಟಕ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದೆ. ಆ ಮೂಲಕ ನಾಳೆ ನಡೆಯುವ ಸರ್ವಪಕ್ಷ ಸಭೆಯಲ್ಲಿಯೂ ಲಾಕ್‌ಡೌನ್ ಕುರಿತಾಗಿ ಕಾಂಗ್ರೆಸ್ ಅಸಮಾಧಾನವನ್ನು ವ್ಯಕ್ತಪಡಿಸುವ ಸಾಧ್ಯತೆ ದಟ್ಟವಾಗಿದೆ.
ಲಾಕ್ ಡೌನ್ ಬಗ್ಗೆ ಸರ್ಕಾರ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ದ್ವಂಧ್ವ ಹೇಳಿಕೆಗಳನ್ನು ನೀಡದೆ ಸ್ಪಷ್ಟ ಸಂದೇಶವನ್ನು ರಾಜ್ಯಕ್ಕೆ ನೀಡಬೇಕು.
ಲಾಕ್‌ಡೌನ್ ಕರೊನಗಿಂತಲೂ ಭೀಕರವಾದುದು ಎನ್ನುವ ಕಹಿಸತ್ಯ ಹಿಂದಿನ ಅನುಭವದಿಂದ ತಿಳಿದಿದೆ.
ವಲಸೆ ಕಾರ್ಮಿಕರಿಂದ ಹಿಡಿದು ಕೈಗಾರಿಕೆಗಳು, ಕಂಪೆನಿಗಳವರೆಗೆ ಲಾಕ್‌ಡೌನ್‌ಗೆ ಒಗ್ಗುವುದು ಕಷ್ಟಕರವಾಗಲಿದೆ.
— Karnataka Congress (@INCKarnataka) April 16, 2021
ಪ್ರತಿಪಕ್ಷವಾಗಿ ಎಲ್ಲಾ ಸಹಕಾರ ನೀಡಿದ ಬಳಿಕವೂ ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ವಿಫಲವಾಗಿವೆ.@BJP4Karnataka ಸರ್ಕಾರ ಉಪಚುನಾವಣೆ, ಸಭೆ, ಸಮಾರಂಭ ನಡೆಯಲು ಬಿಟ್ಟು ಈಗ ಸರ್ವಪಕ್ಷ ಸಭೆ ಕರೆದರೆ ಏನು ಪ್ರಯೋಜನ?
ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು. – @DKShivakumar pic.twitter.com/dWupU9hzK5
— Karnataka Congress (@INCKarnataka) April 15, 2021
ಇದನ್ನೂ ಓದಿ: ಕೈ ಮೀರುತ್ತಿದೆ ಕೊರೊನಾ ಪರಿಸ್ಥಿತಿ.. ಚುನಾವಣೆ ಅವಸರ ಮುಗಿಯುತ್ತಿದ್ದಂತೆ ಇಂದೇ ತುರ್ತು ಸಭೆ ಕರೆದ ಸಿಎಂ ಯಡಿಯೂರಪ್ಪ
Published On - 10:09 am, Fri, 16 April 21