ಲೋಕಸಭಾ ಮತಎಣಿಕೆ, ಪರಿಷತ್ ಚುನಾವಣೆ: ವಿಡಿಯೋ ಸಂವಾದ ನಡೆಸದಂತೆ ಆಫೀಸರ್ಗೆ ಆಯೋಗ ಸೂಚನೆ
ಲೋಕಸಭಾ ಚುನಾವಣೆ ಏನೋ ಮುಗಿದಿದೆ. ಫಲಿತಾಂಶ ಅಷ್ಟೇ ಹೊರಬೀಳಬೇಕಿದೆ. ವಿಧಾನಪರಿಷತ್ ಚುನಾವಣಾ ಕಾವು ರಂಗೇರುತ್ತಿದೆ. ಹೀಗಾಗಿ ಜೂನ್ 06 ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಈ ವೇಳೆ ಮುಖ್ಯಸ್ಥರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನೋಜ್ ಕುಮಾರ್ ಮೀನಾ ಸುತ್ತೋಲೆ ಹೊರಡಿಸಿದ್ದಾರೆ.
ಬೆಂಗಳೂರು, ಮೇ 27: ಲೋಕಸಭಾ ಚುನಾವಣೆ (Lok Sabha Elections) ಏನೋ ಮುಗಿದಿದೆ. ಫಲಿತಾಂಶ ಅಷ್ಟೇ ಹೊರಬೀಳಬೇಕಿದೆ. ಈ ಹೊತ್ತಿನಲ್ಲೇ ರಾಜಕೀಯ ನಾಯಕರಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ವಿಧಾನಪರಿಷತ್ ಚುನಾವಣಾ ಕಾವು ರಂಗೇರುತ್ತಿದೆ. ರಾಜ್ಯದಲ್ಲಿ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರ ಸೇರಿದಂತೆ ಒಟ್ಟು 6 ಕ್ಷೇತ್ರಗಳಿಗೆ ಜೂ.3ಕ್ಕೆ ಚುನಾವಣೆ ನಿಗದಿಯಾಗಿದೆ. ಹೀಗಾಗಿ ಜೂನ್ 06 ವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಈ ವೇಳೆ ಮುಖ್ಯಸ್ಥರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಮಾಡದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮನೋಜ್ ಕುಮಾರ್ ಮೀನಾ (manoj kumar meena) ಸುತ್ತೋಲೆ ಹೊರಡಿಸಿದ್ದಾರೆ. ಸದ್ಯ ನಿಗದಿಯಾಗಿರುವ ಸಭೆಗಳನ್ನು ಮುಂದೂಡುವಂತೆ ತಿಳಿಸಿದ್ದಾರೆ.
ಸುತ್ತೋಲೆಯಲ್ಲಿ ಏನಿದೆ?
ಸಾರ್ವತ್ರಿಕ ಲೋಕಸಭಾ ಚುನಾವಣೆಗಳು-2024 ರ ಮತ ಎಣಿಕೆ ಕಾರ್ಯವು ಜೂನ್ 04ರಂದು ನಿಗದಿಯಾಗಿದೆ. ಸದರಿ ಮತ ಎಣಿಕೆ ಕಾರ್ಯದ ಪೂರ್ವ ಸಿದ್ಧತಾ ಕಾರ್ಯಗಳು ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ಧೈವಾರ್ಷಿಕ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ, ಸದರಿ ಚುನಾವಣಾ ಕಾರ್ಯಗಳು ಪ್ರಗತಿಯಲ್ಲಿರುತ್ತವೆ. ಈ ಸಂಬಂಧ ಮಾದರಿ ನೀತಿ ಸಂಹಿತೆಯು ಜೂನ್ 6 ರವರೆಗೆ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ಈ ಹಂತದಲ್ಲಿ ಕೆಲವು ಇಲಾಖೆಗಳಲ್ಲಿನ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರುಗಳು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ಏರ್ಪಡಿಸುತ್ತಿದ್ದು, ಇದರಿಂದಾಗಿ ಲೋಕಸಭಾ ಚುನಾವಣೆಯ ಮತಎಣಿಕೆ ಕಾರ್ಯವನ್ನು ನಿರ್ವಹಿಸಲು ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ಧೈವಾರ್ಷಿಕ ಚುನಾವಣಾ ಕಾರ್ಯಗಳಿಗೆ ಅಡಚಣೆಯುಂಟಾಗುತ್ತಿದೆ.
ಇದನ್ನೂ ಓದಿ: ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಕೋರಿದ್ದ ಅರ್ಜಿ ವಜಾ, ಜಮೀರ್ ಅಹಮ್ಮದ್ ಖಾನ್ ನಿರಾಳ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಮತ ಎಣಿಕೆ ಕಾರ್ಯ ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ಧೈವಾರ್ಷಿಕ ಚುನಾವಣಾ ಕಾರ್ಯ ಮುಕ್ತಾಯಗೊಳ್ಳುವವರೆಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಮತ್ತು ವಿಡಿಯೋ ಸಂವಾದಗಳನ್ನು ನಡೆಸಬಾರದು. ಹಾಗೂ ಈಗಾಗಲೇ ಸಭೆ ಮತ್ತು ವಿಡಿಯೋ ಸಂವಾದಗಳು ನಿಗದಿಯಾಗಿದ್ದಲ್ಲಿ ಮುಂದೂಡಲು ಅಗತ್ಯಕ್ರಮಕೈಗೊಳ್ಳುವಂತೆ ಮತ್ತು ಸಭೆ, ವಿಡಿಯೋ ಸಂವಾದವನ್ನು ನಡೆಸಬೇಕಾದ ತುರ್ತು ಅಗತ್ಯವಿದ್ದಲ್ಲಿ ಈ ಕಚೇರಿಯೊಂದಿಗೆ ಸಮಾಲೋಚಿಸುವಂತೆ ಎಲ್ಲಾ ಇಲಾಖೆಗಳಿಗೆ ನಿರ್ದೇಶಿಸುವಂತೆ ಕೋರಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.