ಇನ್ಮುಂದೆ ಜಿ.ಪಂ ಸದಸ್ಯರೂ ಆಸ್ತಿ ಘೋಷಿಸಲೇಬೇಕು
ಶಾಸಕರು, ಸಂಸದರು ಚುನಾವಣೆ ವೇಳೆ ಆಸ್ತಿ ಘೋಷಣೆ ಮಾಡುವುದು ಕಡ್ಡಾಯ. ಆದ್ರೀಗ ಜಿಲ್ಲಾ ಪಂಚಾಯತ್ ಸದಸ್ಯರೂ ಇನ್ಮುಂದೆ ಆಸ್ತಿ ಘೋಷಣೆ ಮಾಡುವುದು ಕಡ್ಡಾಯವಾಗಿದೆ. ಜಿಲ್ಲಾ ಪಂಚಾಯತ್ ಸದಸ್ಯರೂ ಸಹ ಮತ ಪಡೆದು ಆಯ್ಕೆಯಾದವರು. ಹೀಗಾಗಿ ಲೋಕಾಯುಕ್ತ ಕಾಯ್ದೆ ಅನುಸಾರ ಆಸ್ತಿ ಘೋಷಣೆ ಮಾಡಬೇಕೆಂದು ರಾಜ್ಯದ 29 ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ನಿಗದಿತ ಕಾಲಮಿತಿಯಲ್ಲಿ ಎಲ್ಲಾ ಜಿ.ಪಂ ಸದಸ್ಯರು ಆಸ್ತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಲೋಕಾಯುಕ್ತ […]
ಶಾಸಕರು, ಸಂಸದರು ಚುನಾವಣೆ ವೇಳೆ ಆಸ್ತಿ ಘೋಷಣೆ ಮಾಡುವುದು ಕಡ್ಡಾಯ. ಆದ್ರೀಗ ಜಿಲ್ಲಾ ಪಂಚಾಯತ್ ಸದಸ್ಯರೂ ಇನ್ಮುಂದೆ ಆಸ್ತಿ ಘೋಷಣೆ ಮಾಡುವುದು ಕಡ್ಡಾಯವಾಗಿದೆ.
ಜಿಲ್ಲಾ ಪಂಚಾಯತ್ ಸದಸ್ಯರೂ ಸಹ ಮತ ಪಡೆದು ಆಯ್ಕೆಯಾದವರು. ಹೀಗಾಗಿ ಲೋಕಾಯುಕ್ತ ಕಾಯ್ದೆ ಅನುಸಾರ ಆಸ್ತಿ ಘೋಷಣೆ ಮಾಡಬೇಕೆಂದು ರಾಜ್ಯದ 29 ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ನಿಗದಿತ ಕಾಲಮಿತಿಯಲ್ಲಿ ಎಲ್ಲಾ ಜಿ.ಪಂ ಸದಸ್ಯರು ಆಸ್ತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಲು ಸಿದ್ಧರಾಗಿ ಎಂದು ಲೋಕಾಯುಕ್ತ ಸಂಸ್ಥೆ ಖಡಕ್ ವಾರ್ನಿಂಗ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವವರ ದೂರಿನ ಮೇರೆಗೆ ಲೋಕಾಯುಕ್ತ ಈ ನೋಟಿಸ್ ನೀಡಿದೆ.