ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆ, ಎಲ್ಲೆಲ್ಲಿ ಎಷ್ಟೆಷ್ಟು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 28, 2023 | 11:34 AM

ರಾಜ್ಯಾದ್ಯಂತ ಇಂದು(ಜೂ.28) ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಹಣ, ಚಿನ್ನಾಭರಣಗಳು ಪತ್ತೆಯಾಗಿದ್ದು, ಎಲ್ಲೆಲ್ಲಿ ಎಷ್ಟೆಷ್ಟು? ಎಂಬ ಮಾಹಿತಿ ಇಲ್ಲಿದೆ.

ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ; ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆ, ಎಲ್ಲೆಲ್ಲಿ ಎಷ್ಟೆಷ್ಟು?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯಾದ್ಯಂತ ಇಂದು(ಜೂ.28) ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕಚೇರಿಗಳ ಮೇಲೆ ಲೋಕಾಯುಕ್ತ(Lokayukta)ದಾಳಿ ನಡೆಸಿದೆ. ಈ ಹಿಂದೆ ಮೇ.31 ಕರ್ನಾಟಕದ ಅನೇಕ ಕಡೆಗಳಲ್ಲಿ ದಾಳಿ ನಡೆಸಿದ್ದರು. ಇದೀಗ ಏಕಕಾಲಕ್ಕೆ ರಾಜ್ಯದ ಬೆಂಗಳೂರು, ಚಿಕ್ಕಮಗಳೂರು, ಕೊಪ್ಪಳ, ತುಮಕೂರು, ಬಾಗಲಕೋಟೆ, ಕೋಲಾರ ರಾಯಚೂರು ಸೇರಿದಂತೆ ಹಲವು ಕಡೆ ಲೋಕಾ ಬಿಸಿ ಮುಟ್ಟಿಸಿದೆ. ಮುಂಜಾನೆ ಸಿಹಿ ನಿದ್ರೆಯಲ್ಲಿದ್ದ ಅಧಿಕಾರಿಗಳಿಗೆ ಲೋಕಾಯುಕ್ತ ಎಂಟ್ರಿ ಶಾಕ್​ ನೀಡಿದೆ. ಅದರಂತೆ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಹಣ, ಚಿನ್ನ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಚಿಕ್ಕಮಗಳೂರಿನ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ನಿವಾಸದ ಮೇಲೆ ದಾಳಿ

ಚಿಕ್ಕಮಗಳೂರು: ನಗರದಲ್ಲಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಗಂಗಾಧರ್ ನಿವಾಸದ ಮೇಲೆ ಲೋಖಾಯುಕ್ತ ರೇಡ್ ಮಾಡಿದ್ದು, ಗಂಗಾಧರ್ ಮನೆಯಲ್ಲಿ 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಚಿಕ್ಕಮಗಳೂರು ನಗರದಲ್ಲಿ 16 ಸೈಟ್​ಗಳು, ಅಲ್ಲಂಪುರ ಗ್ರಾಮದ ಬಳಿ 1 ರೆಸಾರ್ಟ್,​ ಪತ್ನಿ ಹೆಸರಿನಲ್ಲಿ ಪೆಟ್ರೋಲ್ ಬಂಕ್, ಚಿಕ್ಕಮಗಳೂರಿನ ಅರವಿಂದನಗರ ಹಾಗೂ ಜಯನಗರದಲ್ಲಿ 2 ಮನೆ, ಚಿನ್ನ, ಬೆಳ್ಳಿ ಹೊರತುಪಡಿಸಿ 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಇಲ್ಲಿಯವರೆಗೆ ಪತ್ತೆಯಾಗಿದೆ. ಇನ್ನೂ ಕೂಡ ಪರಿಶೀಲನೆ ನಡೆಯುತ್ತಿದೆ.

ಇದನ್ನೂ ಓದಿ:Lokayukta Raid: ಕರ್ನಾಟಕದಾದ್ಯಂತ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ. ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಕೆ.ಆರ್​​.ಪುರಂ ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ನಗರದ ಕೆ.ಆರ್​​.ಪುರಂ ತಹಶೀಲ್ದಾರ್ ಅಜಿತ್​​ ರೈ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಇದುವರೆಗೆ ಒಟ್ಟು 41 ಲಕ್ಷ ನಗದು ಪತ್ತೆಯಾಗಿದೆ. ಇನ್ನು ಹೆಚ್ಚಿನ ಮೊತ್ತ ಹೆಚ್ಚಾಗುವ ಸಾದ್ಯತೆಯಿದ್ದು, ಪರಿಶೀಲನೆ ಮುಂದುವರೆದಿದೆ.

ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ ಮನೆ ಮೇಲೆ ಲೋಕಾಯುಕ್ತ ದಾಳಿ

ತುಮಕೂರು: ನಗರದ ಆರ್.ಟಿ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಹೆಚ್​​ ರವಿ ಮನೆಯಲ್ಲಿ ಶೋಧಕಾರ್ಯ ಆರಂಭವಾಗಿದ್ದು, ರವಿ ಮನೆಯಲ್ಲಿ ಸೈಟ್ ಹಾಗೂ ಜಮೀನು ಖರೀದಿಸಿರುವ ದಾಖಲೆ ಪತ್ತೆಯಾಗಿದೆ. ಸುಮಾರು 10ಕ್ಕೂ ಹೆಚ್ಚು ಕಡೆ ಆಸ್ತಿ ಖರೀದಿ ಮಾಡಿರುವ ಕೆ.ಹೆಚ್.ರವಿ. ಬೆಂಗಳೂರು, ರಾಮನಗರ, ಕನಕಪುರದಲ್ಲಿ ಆಸ್ತಿ ಖರೀದಿಸಿರುವ ದಾಖಲೆ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

ಇದನ್ನೂ ಓದಿ:Mandya News: 40,000 ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್: ಬಂಧನ

ಬಾಗಲಕೋಟೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬಾಗಲಕೋಟೆ: ವಿದ್ಯಾಗಿರಿಯ ಅಕ್ಕಿಮರಡಿ ಲೇಔಟ್​ನಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆಯ ಮೇಲೆ ದಾಳಿ ಮಾಡಿದ್ದು, ಇದುವರೆಗೂ 32 ಲಕ್ಷ ರೂಪಾಯಿ ಹಣ ಪತ್ತೆಯಾಗಿದೆ. ಚಿನ್ಮಾಭರಣ, 31ವ್ಯಾನಿಟಿ ಬ್ಯಾಗ್, ಬೆಳ್ಳಿ ಪ್ರೇಮ್ ಇರುವ ಫೋಟೋ ಪತ್ತೆಯಾಗಿದ್ದು, ಅಕ್ಕಸಾಲಿಗರಿಂದ ಚಿನ್ನಾಭರಣ ಪರಿಶೀಲನೆ ಮಾಡಲಾಗುತ್ತಿದೆ. ಇನ್ನು ವಿಶೇಷವಾಗಿ “ಪಾಂಡ್ ಟೆರಾಫಿನ್” ತಳಿಯ ಎರಡು ಆಮೆಗಳು ಪತ್ತೆಯಾಗಿದೆ.

ಇನ್ನೊಬ್ಬ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರ ಎಂಬುವವರ ಮನೆಯಲ್ಲಿ ದಾಳಿ ಮಾಡಲಾಗಿ, ಒಂದು ಬೆಳ್ಳಿ ಕೊಡ, ಎರಡು ಬೆಳ್ಳಿ ದೀಪದ ಸಮೆ, 500 ರೂ ನೋಟಿನ ಎರಡು ಕಂತೆಗಳು ಪತ್ತೆಯಾಗಿದೆ. ಚಿನ್ನದ ಬಣ್ಣದ ವಾಚ್ ಪತ್ತೆಯಾಗಿದ್ದು, ಚಿನ್ನದ್ದಾ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದನ್ನು ಹೊರತು ವಿವಿಧ ಆಸ್ತಿ ಪತ್ರಗಳನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ