ಬೆಳಗಾವಿಯ ಪಂಚಾಯತ್ ರಾಜ್ ಅಧಿಕಾರಿಯ ‘ದರ್ಬಾರು’ ದೊಡ್ಡದು, ಲೋಕಾಯುಕ್ತ ದಾಳಿಯಲ್ಲಿ ಭಾರೀ ಪ್ರಮಾಣದ ಆಸ್ತಿಪಾಸ್ತಿ, ಚಿನ್ನಾಭರಣ ಪತ್ತೆ!
ಟಿವಿ9 ಕನ್ನಡ ವಾಹಿನಿ ಬೆಳಗಾವಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬಿರಾದರ್ ಮನೆಯಲ್ಲಿ ಅಪಾರ ಆಸ್ತಿಗಳಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿಕ್ಕಿವೆ. ರೂ. 1.35 ಕೋಟಿ ಮೌಲ್ಯದಷ್ಟು ಚಿನ್ನಾಭರಣಗಳು ಹಾಗೂ ನಗದು ಸಿಕ್ಕಿವೆ. ಖಾನಾಪುರಲ್ಲಿ ಅವರ ಹೆಸರಲ್ಲಿ ಒಂದು ಲಾಕರ್ ಇದ್ದು ಅಲ್ಲೂ ಭಾರೀ ಪ್ರಮಾಣದಷ್ಟು ಚಿನ್ನದ ಆಭರಣಗಳು ಸಿಕ್ಕಿವೆ.
ಬೆಳಗಾವಿ: ಸೋಫಾದಲ್ಲಿ ನಿರ್ವಿಕಾರ ಭಂಗಿಯಲ್ಲಿ ಕುಳಿತಿರುವ ವ್ಯಕ್ತಿಯ ಹೆಸರು ಎಂಎಂ ಬಿರಾದರ್ (MM Biradar). ಪಂಚಾಯತ್ ರಾಜ್ ಕಚೇರಿಯಲ್ಲಿ ಬಿರಾದಾರ್ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ (Assistant Executive Engineer) ಆಗಿ ಕೆಲಸ ಮಾಡುತ್ತಾರೆ. ಈ ಅಧಿಕಾರಿ ತಮ್ಮ ಆದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಸುಳಿವು ಸಿಕ್ಕ ಬಳಿಕ ಲೋಕಾಯುಕ್ತ ಅಧಿಕಾರಿಗಳು (Lokayukta sleuths) ಮನೆ ಮೇಲೆ ದಾಳಿ ನಡೆಸಿದ್ದಾರೆ. ಒಳಗಡೆ ಅಧಿಕಾರಿಗಳು ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದರೆ ಬಿರಾದರ್ ಸಾಹೇಬರು ಕಾಲ ಮೇಲೆ ಕಾಲು ಹಾಕ್ಕೊಂಡು ಮೀಸೆ ಮೇಲೆ ಕೈ ಇಟ್ಕೊಂಡು ಕೂತಿದ್ದಾರೆ. ಅದೇನೋ ಹೇಳ್ತಾರಲ್ಲ, ಜಟ್ಟಿ ಚಿತ್ತಾದರೂ ಮೀಸೆ ಮಣ್ಣಾಗಿಲ್ಲ ಅಂದಿದ್ದನಂತೆ! ಬಿರಾದರ್ ಎದುರು ಒಬ್ಬ ಮಹಿಳೆ; ಪ್ರಾಯಶಃ ಅವರ ಪತ್ನಿ ಇರಬಹುದು, ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ಟಿವಿ9 ಕನ್ನಡ ವಾಹಿನಿ ಬೆಳಗಾವಿ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬಿರಾದರ್ ಮನೆಯಲ್ಲಿ ಅಪಾರ ಆಸ್ತಿಗಳಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿಕ್ಕಿವೆ. ರೂ. 1.35 ಕೋಟಿ ಮೌಲ್ಯದಷ್ಟು ಚಿನ್ನಾಭರಣಗಳು ಹಾಗೂ ನಗದು ಸಿಕ್ಕಿವೆ. ಖಾನಾಪುರಲ್ಲಿ ಅವರ ಹೆಸರಲ್ಲಿ ಒಂದು ಲಾಕರ್ ಇದ್ದು ಅಲ್ಲೂ ಭಾರೀ ಪ್ರಮಾಣದಷ್ಟು ಚಿನ್ನದ ಆಭರಣಗಳು ಸಿಕ್ಕಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ