ಅಯೋಧ್ಯೆ ರಾಮಮಂದಿರ ಉದ್ಘಾಟನೆ: ರಾಮನ ಫೊಟೋ, ಕೇಸರಿ ಬಾವುಟಗಳಿಗೆ ಫುಲ್ ಡಿಮ್ಯಾಂಡ್

| Updated By: ಆಯೇಷಾ ಬಾನು

Updated on: Jan 21, 2024 | 11:32 AM

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಯಚೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಕೇಸರಿ ಬಾವುಟಗಳು ಮಾರಾಟವಾಗುತ್ತಿವೆ. ಜೈ ಶ್ರೀರಾಮ್ ಹಾಗೂ ಆಂಜನೇಯನ ಧ್ವಜ, ಬಾವುಟಗಳು ಹೆಚ್ಚು ಸೇಲ್ ಆಗುತ್ತಿವೆ. ಜಿಲ್ಲೆಯ ಜನ ಸೇರಿದಂತೆ ಆಂಧ್ರ, ತೆಲಂಗಾಣದ ಗಡಿ ಭಾಗದ ರಾಮ ಭಕ್ತರು ಧ್ವಜ ಖರೀದಿಯಲ್ಲಿ ಮುಳುಗಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ: ರಾಮನ ಫೊಟೋ, ಕೇಸರಿ ಬಾವುಟಗಳಿಗೆ ಫುಲ್ ಡಿಮ್ಯಾಂಡ್
ರಾಮನ ಫೊಟೋ, ಕೇಸರಿ ಬಾವುಟಗಳಿಗೆ ಫುಲ್ ಡಿಮ್ಯಾಂಡ್
Follow us on

ಹುಬ್ಬಳ್ಳಿ, ಜ.21: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ (Ayodhya Ram Mandir) ಹಿನ್ನಲೆ ರಾಮನ ಫೊಟೋಗಳಿಗೆ ಬೇಡಿಕೆ ಹೆಚ್ಚಾಗಿದೆ. ಫೋಟೋ ಮಾರಾಟ ಮಳಿಗೆಗಳಲ್ಲಿ ರಾಮನ (Lord Rama) ಫೋಟೋ‌ಗೆ ಡಿಮ್ಯಾಂಡ್ ಹೆಚ್ಚಿದೆ. ರಾಮನ ಪೂಜೆ ಮಾಡಲು ಫೋಟೋ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಕೆಲ ಅಂಗಡಿಗಳಲ್ಲಿ ಫೋಟೋಗಳೇ ಸಿಗ್ತಿಲ್ಲ. ಕಳೆದ ನಾಲ್ಕೈದು ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋ ಮಾರಾಟ ಮಾಡಿದ್ದೇವೆ ಎಂದು ಹುಬ್ಬಳ್ಳಿಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ. ಫೋಟೋಗಳ ಖರೀದಿ ಮಾಡಲು ಅಂಗಡಿ ಮುಂದೆ ಜನ ಜಮಾಯಿಸಿದ್ದಾರೆ. ಹುಬ್ಬಳ್ಳಿಯ ಪಾನ್ ಬಜಾರ್ ಬಳಿ ಇರುವ ಫೋಟೋ ಅಂಗಡಿ ಮುಂದೆ ಜನ ಸೇರಿದ್ದಾರೆ.

ರಾಯಚೂರಿನಲ್ಲೂ ರಾಮೋತ್ಸವ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಯಚೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಕೇಸರಿ ಬಾವುಟಗಳು ಮಾರಾಟವಾಗುತ್ತಿವೆ. ಜೈ ಶ್ರೀರಾಮ್ ಹಾಗೂ ಆಂಜನೇಯನ ಧ್ವಜ, ಬಾವುಟಗಳು ಹೆಚ್ಚು ಸೇಲ್ ಆಗುತ್ತಿವೆ. ಜಿಲ್ಲೆಯ ಜನ ಸೇರಿದಂತೆ ಆಂಧ್ರ, ತೆಲಂಗಾಣದ ಗಡಿ ಭಾಗದ ರಾಮ ಭಕ್ತರು ಧ್ವಜ ಖರೀದಿಯಲ್ಲಿ ಮುಳುಗಿದ್ದಾರೆ. ಕಳೆದ ಒಂದು ವಾರದಿಂದ ಸುಮಾರು ಲಕ್ಷಕ್ಕೂ ಅಧಿಕ ಬಾವುಟ, ಧ್ವಜಗಳು ಮಾರಾಟವಾಗಿವೆ. ಒಂದೊಂದು ತಂಡದಿಂದ ನೂರು, ಇನ್ನೂರು, ಸಾವಿರ, ಎರಡು ಸಾವಿರ ಬಾವುಟಗಳ ಬಂಡಲ್ ಖರೀದಿಯಾಗುತ್ತಿವೆ. ಮನೆ ಮೇಲೆ ಕಟ್ಟಲು ಗೃಹಸ್ಥರು, ಕಾರ್ಯಕ್ರಮಗಳಿಗೆ ಬಳಸಲು ಸಂಘ, ಸಂಸ್ಥೆಗಳಿಂದ ಧ್ವಜ, ಬಾವುಟ ಖರೀದಿಯಾಗುತ್ತಿದೆ. ಧ್ವಜ ತಯಾರಿಕಾ ಕಾರ್ಖಾನೆಗಳಲ್ಲೇ ಧ್ವಜಗಳ ಸ್ಟಾಕ್ ಇಲ್ಲದ ಸ್ಥಿತಿ ರಾಯಚೂರಿನಲ್ಲಿ ಎದುರಾಗಿದೆ. ಮುಂಬಾಯಿ, ಆಂಧ್ರ, ಸೋಲಾಪುರದಿಂದ ಬಾವುಟ, ಧ್ವಜಗಳನ್ನ ವ್ಯಾಪಾರಸ್ಥರು ತರಿಸಿಕೊಳ್ಳುತ್ತಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಧ್ವಜಗಳ ಮಾರಾಟ ಆಗುತ್ತಿದೆ ಎಂದು ವ್ಯಾಪಾರಸ್ಥರು ಸಂಸತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರಕ್ಕೆ ಕೋಲಾರ ಕೊಡುಗೆ ಅಪಾರ; ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ಮಧ್ಯಾಹ್ನ 12 ಗಂಟೆ 29ನಿಮಿಷಕ್ಕೆ ಪ್ರಾಣಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರದಲ್ಲಿ ಭಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಶತಶತಮಾನಗಳಿಂದ ರಾಮ ಭಕ್ತರ ಕನವರಿಕೆಗೆ ಫಲಸಿಗುವ ಸನ್ನಿವೇಶ ಒದಗಿ ಬರಲಿದೆ. ಅದಕ್ಕಾಗಿ ದೇವನಗರಿ ಅಯೋಧ್ಯೆ ಹಿಂದೆಂದಿಗಿಂತಲೂ ನವ ವೈಭವದಲ್ಲಿ ಅದ್ಧೂರಿಯಾಗಿ ಸಜ್ಜುಗೊಂಡಿದೆ. ನಾಳೆ ಮಧ್ಯಾಹ್ನ 12 ಗಂಟೆ 29ನಿಮಿಷ ಶುಭ ಮುಹೂರ್ತದಲ್ಲಿ. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:31 am, Sun, 21 January 24