ಅಯೋಧ್ಯೆ ರಾಮ ಮಂದಿರಕ್ಕೆ ಕೋಲಾರ ಕೊಡುಗೆ ಅಪಾರ; ಇಲ್ಲಿದೆ ಸಂಪೂರ್ಣ ಮಾಹಿತಿ
ಅಮೇರಿಕಾದ ಕ್ಯಾಲಿಪೋರ್ನಿಯಾದ ನಿವಾಸಿಯಾಗಿರುವ ಅರ್ಚಕರಾದ ಉಮಾಶಂಕರ್ ದೀಕ್ಷಿತ್ ಅವರ ತಂಡ ಪ್ರಮುಖ ಮಾತ್ರ ವಹಿಸಲಿದೆ, ಉಮಾಶಂಕರ್ ದೀಕ್ಷಿತ್ ಅವರು ಕೇವಲ ಪೌರೋಹಿತ್ಯ ವಹಿಸಿರುವುದಷ್ಟೇ ಅಲ್ಲದೆ ದೇವಾಲಯಕ್ಕೆ ಒಂದು ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ. ಹೀಗೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಚಿನ್ನದ ನಾಡು ಕೋಲಾರ ಒಂದಿಲೊಂದು ಕೊಡುಗೆ ನೀಡುತ್ತಲೇ ಬಂದಿದ್ದು ಅದರ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.
ಕೋಲಾರ, ಜ.21: ಉತ್ತರದ ಅಯೋಧ್ಯೆಗೂ ದಕ್ಷಿಣದ ಚಿನ್ನದ ನಾಡಿಗೂ ಒಂದಲ್ಲ ಒಂದು ರೀತಿಯ ನಂಟಿದೆ. ಕೋಲಾರದ ಅವನಿ ಗ್ರಾಮದಲ್ಲಿ ಅಂದರೆ ರಾಮಾಯಣ ಕಾಲದ ಆವಂತಿಕಾಪುರದಲ್ಲಿ ಲವ ಕುಶ ಜನ್ಮತಾಳಿದ ಸ್ಥಳ ಎಂದು ಹೇಳಲಾಗುತ್ತದೆ, ಅದೇ ಕಾರಣಕ್ಕೋ ಏನೋ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಚಿನ್ನದ ನಾಡಿನ (Kolar) ಜನರ ಕೊಡುಗೆ ಒಂದಲ್ಲ ಒಂದು ರೀತಿಯಲ್ಲಿ ಸಂಬಂಧ ಬೆಸೆದುಕೊಳ್ಳುತ್ತಲೇ ಇದೆ. ಈಗಾಗಲೇ ರಾಮ ಮಂದಿರ (Ayodhya Ram Mandir) ನಿರ್ಮಾಣದ ತಳಪಾಯಕ್ಕೆ ಅವಿಭಜಿತ ಕೋಲಾರ ಜಿಲ್ಲೆ ಕಲ್ಲುಗಳನ್ನು ಬಳಸಲಾಗಿದೆ, ಅದರ ಜೊತೆಗೆ ಮಂದಿರ ನಿರ್ಮಾಣ ಕಾರ್ಯದಲ್ಲಿ ಜಿಲ್ಲೆಯ NIRM ವಿಜ್ಞಾನಿಗಳು ಬಹುಮುಖ್ಯ ಪಾತ್ರ ವಹಿಸಿದ್ದಾರೆ, ರಾಮ ಮಂದಿರಕ್ಕೆ ಬಳಸಲಾಗಿರುವ ಪ್ರತಿಯೊಂದು ಕಲ್ಲನ್ನೂ ಪರೀಕ್ಷೆ ಮಾಡಿರುವುದು ಕೋಲಾರದ ಕೆಜಿಎಫ್ ವಿಜ್ಞಾನಿಗಳು ಅನ್ನೋದು ಕೂಡಾ ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ವಿಷಯ.
ಇನ್ನು ರಾಮ ಮಂದಿರದ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯದಲ್ಲೂ ಕೂಡಾ ಕೋಲಾರ ಜಿಲ್ಲೆ ಮಾಲೂರು ಚೊಕ್ಕಂಡಹಳ್ಳಿ ಗ್ರಾಮದ ಪಾತ್ರ ಅಪಾರ. ಸದ್ಯ ಅಮೇರಿಕಾದ ಕ್ಯಾಲಿಪೋರ್ನಿಯಾದ ನಿವಾಸಿಯಾಗಿರುವ ಅರ್ಚಕರಾದ ಉಮಾಶಂಕರ್ ದೀಕ್ಷಿತ್ ಅವರ ತಂಡ ಪ್ರಮುಖ ಮಾತ್ರ ವಹಿಸಲಿದೆ, ಉಮಾಶಂಕರ್ ದೀಕ್ಷಿತ್ ಅವರು ಕೇವಲ ಪೌರೋಹಿತ್ಯ ವಹಿಸಿರುವುದಷ್ಟೇ ಅಲ್ಲದೆ ದೇವಾಲಯಕ್ಕೆ ಒಂದು ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ. ಹೀಗೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಚಿನ್ನದ ನಾಡು ಕೋಲಾರ ಒಂದಿಲೊಂದು ಕೊಡುಗೆ ನೀಡುತ್ತಲೇ ಬಂದಿದ್ದು ಅದರ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸದಲ್ಲಿ ಕೋಲಾರದ ಯುವಕನೊಬ್ಬ ಕಾಮಗಾರಿ ಕೆಲಸದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾನೆ. ರಾಮ ಮಂದಿರ ಕಾಮಗಾರಿಯಲ್ಲಿ ಎಲೆಕ್ಟ್ರಿಕ್ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ಯುವಕ ಪ್ರವೀಣ್ ಕುಮಾರ್ ಎಂಬಾತ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಬನಹಳ್ಳಿ ನಿವಾಸಿ ಅನ್ನೋದು ತಿಳಿದು ಬಂದಿದೆ. ಪ್ರವಿಣ್ ಕುಮಾರ್ ಕಳೆದ ಎರಡು ತಿಂಗಳಿಂದ ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದಾನೆ.
ಇದನ್ನೂ ಓದಿ: ರಾಮ ಮಂದಿರಕ್ಕೆ ಸಾವಿರ ವರ್ಷ ಆಯಸ್ಸು, ಮಂದಿರ ನಿರ್ಮಾಣದ ಕಲ್ಲು ಪರೀಕ್ಷಿಸಿದ್ದು ಕೋಲಾರದ ವಿಜ್ಞಾನಿಗಳು
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಪ್ರವೀಣ್ ಕುಮಾರ್ ಗೆ, ರಾಮ ಮಂದಿರದ ಎಲೆಕ್ಟ್ರಿಕ್ ಕೆಲಸದ ಗುತ್ತಿಗೆ ಸಿಕ್ಕ ಹಿನ್ನೆಲೆ, ರಾಮಮಂದಿರ ನಿರ್ಮಾಣದ ಕೆಲಸಕ್ಕೆ ತೆರಳುವ ಅವಕಾಶ ಪ್ರವೀಣ್ ಕುಮಾರ್ ಗೆ ಸಿಕ್ಕಿದೆ. ತನಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ನನ್ನ ಜೀವನದ ಅತ್ಯಮೂಲ್ಯ ಕ್ಷಣ ಎಂದು ಭಾವಿಸಿರುವ ಪ್ರವೀಣ್ ಅಲ್ಲಿ ಎಲೆಕ್ಟ್ರಿಕ್ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಭಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಸದ್ಯ ಪ್ರವೀಣ್ ಅವರು ರಾಮ ಮಂದಿರ ಕಾರ್ಯದಲ್ಲಿ ತೊಡಗಿರುವುದು ಜಿಲ್ಲೆಯ ಮಟ್ಟಿಗೆ ಹಾಗೂ ಬನಹಳ್ಳಿ ಗ್ರಾಮಸ್ಥರು ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ