ಚಾಮರಾಜನಗರ: ತನ್ನ ಸೊಸೆಯನ್ನು ಕೊಲೆಗೈದ ವ್ಯಕ್ತಿಯೊಬ್ಬ ಬಳಿಕ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲದ ಆದರ್ಶ ನಗರದಲ್ಲಿ ನಡೆದಿದೆ. 26 ವರ್ಷದ ಸುಮಿತ್ರಾ ಎಂಬ ಮಹಿಳೆಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಮಾಡಲಾಗಿದೆ. ಸುಮಿತ್ರಾಳನ್ನು ಕೊಲೆಗೈದ ಬಳಿಕ ಡೆತ್‌ನೋಟ್ ಬರೆದಿಟ್ಟು ಆಕೆಯ ಮಾವ ಚಿಕ್ಕ ನಂಜಯ್ಯ(65) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಡೀ ಕುಟುಂಬ ಬಾಡಿಗೆ ಮನೆಯಲ್ಲಿ ವಾಸವಿತ್ತು.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿಕೊಟ್ಟು ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಆದಿವಾಲಾ ಗ್ರಾಮದ ಬಳಿ ಹೊತ್ತಿ ಉರಿದ ಓಮ್ನಿ ವ್ಯಾನ್ ಆದಿವಾಲಾ ಗ್ರಾಮದ ಬಳಿ ಓಮ್ನಿ ವ್ಯಾನ್ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ. ಅದೃಷ್ಟವಶಾತ್ ಓಮ್ನಿಯಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ. ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಂಕಿ ಹೊತ್ತಿದ್ದು ಗಮನಿಸಿದ ವಾಹನ ಚಾಲಕ ಕೂಡಲೇ ಗಾಡಿಯನ್ನು ನಿಲ್ಲಿಸಿ ಕೆಳಗಿಳಿದಿದ್ದ. ಓಮ್ನಿ ವಾಹನಕ್ಕೆ ಅಳವಡಿಸಿದ್ದ ಸಿಲೆಂಡರ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ಆದಿವಾಲಾ ಗ್ರಾಮದ ಬಳಿ ಹೊತ್ತಿ ಉರಿದ ಓಮ್ನಿ ವ್ಯಾನ್
ಗದಗದಲ್ಲಿ ಪ್ರಾಮಾಣಿಕತೆ ಮೆರೆದ ರೈಲು ಪ್ರಯಾಣಿಕ ಮೆಹಬೂಬ್ ಕರ್ನಾಜಿ ಅತ್ತ, ಗದಗದಲ್ಲಿ ರೈಲು ಪ್ರಯಾಣಿಕರೊಬ್ಬರು ಪ್ರಾಮಾಣಿಕತೆ ಮೆರೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ರೈಲಿನಲ್ಲಿ ಸಿಕ್ಕ ಬ್ಯಾಗ್ನ ಪೊಲೀಸರಿಗೆ ನೀಡಿ ಗದಗದ ಮೆಹಬೂಬ್ ಕರ್ನಾಜಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಗದಗ-ಮುಂಬೈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರ ಮೂಲದ ಚನ್ನಬಸಪ್ಪ ಇಂಡಿ ಎಂಬುವವರ ಬ್ಯಾಗ್‌ನಲ್ಲಿ ಸುಮಾರು 15 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ ಇತ್ತು. ತಮ್ಮ ಸ್ಟೇಷನ್ ಆಗಮಿಸಿದಾಗ ಇಳಿಯುವ ವೇಳೆ ಚನ್ನಬಸಪ್ಪ ಮರೆತು ಬ್ಯಾಗ್ನ ರೈಲಿನಲ್ಲೇ ಬಿಟ್ಟುಹೋಗಿದ್ದರು. ಬಳಿಕ ಮಾಲೀಕರನ್ನ ಪತ್ತೆ ಹಚ್ಚಿದ ಮೆಹಬೂಬ್ ಚಿನ್ನವಿದ್ದ ಬ್ಯಾಗ್ನ ಗದಗ ರೈಲ್ವೆ ಠಾಣೆಯ ಪೊಲೀಸರ ಮುಖಾಂತರ ಚನ್ನಬಸಪ್ಪ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ‘ನೋಡಮ್ಮಾ ಹುಡುಗಿ.. ಕೇಳಮ್ಮ ಸರಿಯಾಗಿ.. ಲವ್ ಮ್ಯಾರೇಜ್ ಆದ್ರೂ ನಿಮ್ಮ ಅಪ್ಪಾ ಅಮ್ಮನನ್ನ ನೋಡ್ಕೋಬೇಕು ಸರಿಯಾಗಿ’