ಸಂಬಂಧಿಕರ ಮದುವೆಗೆ ಫುಲ್ ಟೈಟ್ ಆಗಿ ಬಂದವ.. ಮೆಟ್ಟಿಲಿನಿಂದ ಜಾರಿಬಿದ್ದು ಸತ್ತ
ಸಂಬಂಧಿಕರ ಮದುವೆಗೆಂದು ಬಂದಿದ್ದ ದೊಡ್ಡಬೆಳವಂಗಲದ ಪ್ರಕಾಶ್( 33) ಮೃತ ದುರ್ದೈವಿ. ಪಾನ ಮತ್ತನಾಗಿದ್ದರಿಂದ ಮೆಟ್ಟಿಲು ಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಮೃತ ದುರ್ದೈವಿ ಪ್ರಕಾಶ್
ನೆಲಮಂಗಲ: ಕಂಠಪೂರ್ತಿ ಮದ್ಯ ಸೇವಿಸಿದ್ದ ವ್ಯಕ್ತಿಯೋರ್ವ ಮದುವೆ ಮಂಟಪದ ಮೆಟ್ಟಿಲಿನಿಂದ ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿಯಲ್ಲಿರುವ ಆಂಜನೇಯ ದೇಗುಲದ ಬಳಿ ನಡೆದಿದೆ.
ಸಂಬಂಧಿಕರ ಮದುವೆಗೆಂದು ಬಂದಿದ್ದ ದೊಡ್ಡಬೆಳವಂಗಲದ ಪ್ರಕಾಶ್( 33) ಕಲ್ಯಾಣ ಮಂಟಪಕ್ಕೆ ಕಂಠಪೂರ್ತಿ ಕುಡಿದು ಬಂದಿದ್ದನು. ಈ ವೇಳೆ, ಮೆಟ್ಟಿಲಿನಿಂದ ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಫಸ್ಟ್ ನೈಟ್ನಲ್ಲೇ ಮದ್ಯ ಸಮಾರಾಧನೆ..ಒಂದೇ ತಿಂಗಳಿಗೆ ಮುರಿದು ಬಿತ್ತು ಮದುವೆ..ಯಾವೂರಲ್ಲಿ?
Published On - 4:06 pm, Sun, 6 December 20



