
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಮಧ್ಯ ರಾತ್ರಿ ಭೀಕರ ಹತ್ಯೆ ಮಾಡಿ ಚರಂಡಿಗೆ ಹೆಣ ಎಸೆದು ಹೋಗಿರುವ ಘಟನೆ ದೇವಾಂಗಪೇಠ ಬಡಾವಣೆಯಲ್ಲಿ ನಡೆದಿದೆ.
ಕಟ್ಟಡ ಕಾರ್ಮಿಕ ಕೆಲಸ ಮಾಡಿಕೊಂಡಿದ್ದ ಮಾಬುಸಾಬ ಅಲ್ಲಾಭಕ್ಷ ಶಿವಳ್ಳಿ ಎಂಬಾತನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿಗಳು ಚರಂಡಿಗೆ ಎಸೆದಿದ್ದಾರೆ. ಆಸೀಫ್ ಎಂಬಾತನ ಜೊತೆ ಈ ಹಿಂದೆ ಮಾಬುಸಾಬ್ ಅಲ್ಲಾಭಕ್ಷ ಶಿವಳ್ಳಿ ಗಲಾಟೆ ಮಾಡಿಕೊಂಡಿದ್ದ. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾನೆಂದು ವ್ಯಕ್ತಿಯ ಪೋಷಕರು ಆಸೀಫ್ ಮೇಲೆ ಆರೋಪಿಸುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಮೂರೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅರ್ಚಕನ ಶವ ಪತ್ತೆ: ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ