ಎಲೆಕ್ಷನ್ ಬ್ಯುಸಿಯಲ್ಲಿರುವ ಸರ್ಕಾರಿ ಆಡಳಿತ ಯಂತ್ರ: ಬಗೆಹರಿದಿಲ್ಲ ಮಂಡ್ಯ ಎಸ್ಪಿ ನೇಮಕ, ವಿವಾದ ಸೀದಾ ರಾಜ್ಯಪಾಲರ ಅಂಗಳಕ್ಕೆ

| Updated By: ಸಾಧು ಶ್ರೀನಾಥ್​

Updated on: Oct 28, 2021 | 10:12 AM

Mandya SP Transfer: ಮಂಡ್ಯ ನೂತನ ಎಸ್ಪಿಯಾಗಿ ಕೂಡಲೆ ಅಧಿಕಾರ ಸ್ವೀಕರಿಸಲು ಸುಮನ್ ಡಿ ಪನ್ನೇಕರ್ ಗೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ತಾವು ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಇಲ್ಲದಿದ್ದರೆ ದಕ್ಷ ಅಧಿಕಾರಿ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಮಂಡ್ಯ ಕರ್ನಾಟಕ ರಕ್ಷಣಾ ವೇದಿಕೆ ನೀಡಿದೆ.

ಎಲೆಕ್ಷನ್ ಬ್ಯುಸಿಯಲ್ಲಿರುವ ಸರ್ಕಾರಿ ಆಡಳಿತ ಯಂತ್ರ: ಬಗೆಹರಿದಿಲ್ಲ ಮಂಡ್ಯ ಎಸ್ಪಿ ನೇಮಕ, ವಿವಾದ ಸೀದಾ ರಾಜ್ಯಪಾಲರ ಅಂಗಳಕ್ಕೆ
ಎಲೆಕ್ಷನ್ ಬ್ಯುಸಿಯಲ್ಲಿರುವ ಸರ್ಕಾರಿ ಆಡಳಿತ ಯಂತ್ರ: ಬಗೆಹರಿದಿಲ್ಲ ಮಂಡ್ಯ ಎಸ್ಪಿ ನೇಮಕ, ವಿವಾದ ಸೀದಾ ರಾಜ್ಯಪಾಲರ ಅಂಗಳಕ್ಕೆ
Follow us on

ಮಂಡ್ಯ: ರಾಜ್ಯದಲ್ಲಿ 2 ಬೈ ಎಲೆಕ್ಷನ್​ಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಆರೋಪಿಸಿದಂತೆ ಸರ್ಕಾರಿ ಆಡಳಿತ ಯಂತ್ರ ಮಂದಗತಿಯಲ್ಲಿ ಸಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಮಂಡ್ಯ ಮಹಿಳಾ ಪೊಲೀಸ್​ ವರಿಷ್ಠಾಧಿಕಾರಿ ನೇಮಕ ವಿವಾದ ಒಂದು ವಾರವಾದರೂ ಇನ್ನೂ ಬಗೆಹರಿದಿಲ್ಲ. ಹಾಗೆಂದೇ ದೂರುದಾರರೊಬ್ಬರು ಸೀದಾ ರಾಜ್ಯಪಾಲರ ಬಳಿ ವಿಷಯವನ್ನು ತೆಗೆದುಕೊಂಡುಹೋಗಿದ್ದಾರೆ.

ಮಂಡ್ಯದಲ್ಲಿ ಮುಗಿಯದ ಎಸ್‌ಪಿ ನೇಮಕ ವಿವಾದದ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಗೊಂಡಿರುವ ನೂತನ ಎಸ್ಪಿಗಾಗಿ ರಾಜ್ಯಪಾಲರ ಮೊರೆ ಹೋಗಲಾಗಿದೆ. ನೂತನ ಎಸ್ಪಿಯಾಗಿ ನೇಮಕಗೊಂಡಿದ್ರು ಮಹಿಳಾ ಐಪಿಎಸ್ ಅಧಿಕಾರಿಗೆ ಚಾರ್ಜ್ ತೆಗೆದುಕೊಳ್ಳದಂತೆ ಮೌಖಿಕ ಆದೇಶ ನೀಡಲಾಗಿದೆ. ನೂತನ ಎಸ್ಪಿಯಾಗಿ ಡಾ. ಸುಮನ್ ಡಿ. ಪನ್ನೇಕರ್ ನೇಮಕಗೊಂಡಿದ್ದಾರೆ.

ಪನ್ನೇಕರ್ ರಿಗೆ ಎಸ್ಪಿಯಾಗಿ ಚಾರ್ಜ್ ತೆಗೆದುಕೊಳ್ಳಲು ಅವಕಾಶ ಕೊಡಿಸುವಂತೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಡಿ. ಜಯರಾಮ್ ರಿಂದ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ‌ ಸಲ್ಲಿಸಲಾಗಿದೆ. ಕಳೆದ ಏಳು ದಿನಗಳಿಂದ ಮಂಡ್ಯ ಎಸ್ಪಿ ಹುದ್ದೆ ಖಾಲಿ ಉಳಿದಿದೆ. ಈಗಾಗಲೇ ಎಎಸ್‌ಪಿಗೆ ಚಾರ್ಜ್ ಕೊಟ್ಟು ನಿರ್ಗಮಿತ ಎಸ್‌ಪಿ ಡಾ.ಅಶ್ವಿನಿ ತೆರಳಿದ್ದಾರೆ. ಅಶ್ವಿನಿ ಜಾಗಕ್ಕೆ ಅಕ್ಟೋಬರ್ 20 ರಂದು ಸುಮನ್ ಡಿ. ಪನ್ನೇಕರ್ ನೇಮಕಗೊಂಡಿದ್ದಾರೆ. ಆದ್ರೆ ರಾಜಕೀಯ ಒತ್ತಡಕ್ಕೆ ಮಣಿದು ನೂತನ ಎಸ್‌ಪಿ ಅಧಿಕಾರ ಸ್ವೀಕರಿಸದಂತೆ ಪೊಲೀಸ್ ಇಲಾಖೆಯ ಡಿಪಿಎಆರ್ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ.

ಅಕ್ರಮ ಗಣಿಗಾರಿಕೆ, ಅಕ್ರಮ ದಂಧೆಗೆ ಕಡಿವಾಣ ಬೀಳುವ ಆತಂಕದಲ್ಲಿ ಖಡಕ್ ಪೊಲೀಸ್​ಗಿರಿ ಮಾಡುವ ನೂತನ ಎಸ್‌ಪಿಗೆ ನೇಮಕಕ್ಕೆ ತಡೆ ಹಾಕಲಾಗಿದೆ ಎನ್ನಲಾಗಿದೆ. ಜಿಲ್ಲೆಯ ರಾಜಕಾರಣಿಗಳು, ಕೆಲ ಅಧಿಕಾರಿ ವರ್ಗಗಳ ಒತ್ತಡದಿಂದ ನೂತನ ಎಸ್‌ಪಿ ಚಾರ್ಜ್ ತೆಗೆದುಕೊಳ್ಳಲು ತಡೆಯೊಡ್ಡಲಾಗಿದೆ. ಸದ್ಯ ಮಂಡ್ಯ‌ ಎಸ್‌ಪಿಯಾಗಿ ನೇಮಕಗೊಂಡರೂ ಐಪಿಎಸ್ ಅಧಿಕಾರಿ ಸುಮನ್ ಡಿ. ಪನ್ನೇಕರ್ ಅವರು ಮೈಸೂರು ತರಬೇತಿ ಕೇಂದ್ರದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆದ್ದರಿಂದ ಕೂಡಲೆ ಅಧಿಕಾರ ಸ್ವೀಕರಿಸಲು ಸುಮನ್ ಡಿ ಪನ್ನೇಕರ್ ಗೆ ಅವಕಾಶ ನೀಡಬೇಕು. ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆಗೆ ತಾವು ಸೂಚನೆ ನೀಡಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಇಲ್ಲದಿದ್ದರೆ ದಕ್ಷ ಅಧಿಕಾರಿ ಪರವಾಗಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಮಂಡ್ಯ ಕರ್ನಾಟಕ ರಕ್ಷಣಾ ವೇದಿಕೆ ನೀಡಿದೆ.

Mandyaದಲ್ಲಿ ಮಹಿಳಾ ಅಧಿಕಾರಿಗಳು v/s ಪ್ರಭಾವಿ ರಾಜಕಾರಣಿ! ಜಿಲ್ಲೆಗೆ ಯಾವುದೇ ಕಾರಣಕ್ಕೂ ಮಹಿಳಾ SPಪಿ ಬೇಡ್ವಂತೆ!

ಪನ್ನೇಕರ್ ರಿಗೆ ಮಂಡ್ಯ ಎಸ್​ಪಿ ಯಾಗಿ ಚಾರ್ಜ್ ತೆಗೆದುಕೊಳ್ಳಲು ಅವಕಾಶ ಕೊಡಿಸುವಂತೆ ರಾಜ್ಯಪಾಲರಿಗೆ ಮಂಡ್ಯ ಕರವೇ ಪತ್ರ 

(mandya ka ra ve seeks governor help in transfer of ips suman pennekar as mandya superintendent of police)

Published On - 9:46 am, Thu, 28 October 21