AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಬೈಕ್​ನಲ್ಲಿ ಹಳ್ಳ ದಾಟುವಾಗ ನೀರಲ್ಲಿ ಕೊಚ್ಚಿಹೋದ ಯುವಕ!

ಹಳ್ಳದ ನೀರಿನ ರಭಸಕ್ಕೆ ಕುಳಗಟ್ಟ ಗ್ರಾಮದ ಯುವಕ ಶಿವರಾಜ್ ಕೊಚ್ಚಿ ಹೋಗಿದ್ದಾರೆ. ಕತ್ತಲು ಆವರಿಸಿದ ಹಿನ್ನೆಲೆ ಶೋಧ ಕಾರ್ಯದಲ್ಲಿ ವಿಳಂಬವಾಗಿದೆ.

ದಾವಣಗೆರೆ: ಬೈಕ್​ನಲ್ಲಿ ಹಳ್ಳ ದಾಟುವಾಗ ನೀರಲ್ಲಿ ಕೊಚ್ಚಿಹೋದ ಯುವಕ!
ಯುವಕ ಕೊಚ್ಚಿ ಹೋದ ಹಳ್ಳ
TV9 Web
| Edited By: sandhya thejappa|

Updated on: Oct 28, 2021 | 9:15 AM

Share

ದಾವಣಗೆರೆ: ಬೈಕ್ನಲ್ಲಿ ಹಳ್ಳ ದಾಟುತ್ತಿದ್ದಾಗ ಯುವಕನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ-ದೊಡ್ಡಘಟ್ಟದ ಮಧ್ಯೆ ಇರುವ ಹಳ್ಳದಲ್ಲಿ ನಡೆದಿದೆ. ಸಿ ಶಿವರಾಜ್ ಎಂಬುವವರು ನೀರುಪಾಲಾದ ಯುವಕ. ಯುವಕನ ಮೃತದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ಶೋಧಕಾರ್ಯ ನಡೆಯುತ್ತಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹಳ್ಳ ಸೂಳೆಕೆರೆಗೆ ಕೊಡಿ ಬಿದ್ದು ತುಂಬಿ ಹರಿಯುತ್ತಿದೆ. ಹಳ್ಳದ ನೀರಿನ ರಭಸಕ್ಕೆ ಕುಳಗಟ್ಟ ಗ್ರಾಮದ ಯುವಕ ಶಿವರಾಜ್ ಕೊಚ್ಚಿ ಹೋಗಿದ್ದಾರೆ. ಕತ್ತಲು ಆವರಿಸಿದ ಹಿನ್ನೆಲೆ ಶೋಧ ಕಾರ್ಯದಲ್ಲಿ ವಿಳಂಬವಾಗಿದೆ.

ಕೆಆರ್​ಎಸ್​ ಜಲಾಶಯ ಭರ್ತಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಜಲಾಶಯ ಭರ್ತಿಯಾಗಿದೆ. 11 ವರ್ಷಗಳ ನಂತರ ಅಕ್ಟೋಬರ್​ನಲ್ಲಿ ಡ್ಯಾಂ ಭರ್ತಿಯಾಗಿದೆ. 2010ರಲ್ಲಿ ಅಕ್ಟೋಬರ್​ನಲ್ಲಿ ಕೆಆರ್​ಎಸ್​ ಡ್ಯಾಂ ಭರ್ತಿಯಾಗಿತ್ತು. ನ.2ರಂದು ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು. ಕೆಆರ್​ಎಸ್​ ಜಲಾಶಯದ ಇಂದಿನ ಮಟ್ಟ 124.50 ಅಡಿಯಿದೆ. ಜಲಾಶಯದ ಗರಿಷ್ಠ ಮಟ್ಟ 124.80 ಅಡಿ, ಒಳ ಹರಿವು 11,345 ಕ್ಯೂಸೆಕ್, ಹೊರಹರಿವು 3661 ಕ್ಯೂಸೆಕ್ ಇದೆ.

ಶಾರ್ಟ್ಸರ್ಕ್ಯೂಟ್​ನಿಂದ ಹಸು, ಎಮ್ಮೆ ಸಾವು ಶಾರ್ಟ್​ಸರ್ಕೂಟ್​ನಿಂದ ಕೊಟ್ಟಿಗೆಯಲ್ಲೇ ಹಸು ಮತ್ತು ಎಮ್ಮೆ ಮೃತಪಟ್ಟಿವೆ. ಚನ್ನಗಿರಿ ತಾಲೂಕಿನ ನವಲೇಹಾಳು ಗ್ರಾಮದ ಮಂಜುನಾಥ್ಗೆ ಸೇರಿದ ಜಾನುವಾರು ಸಾವನ್ನಪ್ಪಿವೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. 1 ಲಕ್ಷ 40 ಸಾವಿರ ಬೆಲೆಯ 2 ಜರ್ಸಿ ಆಕಳು, 10 ಸಾವಿರ 1 ಕರು 50 ಸಾವಿರದ 1 ಎಮ್ಮೆ ಸಾವನ್ನಪ್ಪಿವೆ. ಜಾನುವಾರಗಳ ಸಾವಿಗೆ ಮಾಲೀಕ ಮಂಜುನಾಥ್ ಕುಟುಂಬ ಕಣ್ಣೀರು ಹಾಕಿದೆ.

ಇದನ್ನೂ ಓದಿ

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

ಭಾರತದಲ್ಲಿ ಟ್ಯಾಬ್ಲೆಟ್ ಪೋರ್ಟ್​ಫೋಲಿಯೋ ಹೆಚ್ಚಿಸಿಕೊಳ್ಳುತ್ತಿರುವ ಲೆನೊವೊ ಹೊಸ ಟ್ಯಾಬ್ ಕೆ10 ಲಾಂಚ್ ಮಾಡಿದೆ

Follow Us
TV9 Web
TV9 Web

TV9 Kannada

Read More
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ