ಮಂಡ್ಯ ಲೋಕಸಭಾ ಜಿದ್ದಾಜಿದ್ದಿ: ಸುಮಲತಾಗೆ ಎಚ್ಚರಿಕೆಯ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 30, 2024 | 3:37 PM

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಿನ್ನೆ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್​ ಶಾಸಕ ನರೇಂದ್ರಸ್ವಾಮಿ, ಸುಮಲತಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಾವು ಮಂಡ್ಯದ ಗೆಲುವು ಕೇಳುತ್ತಿದ್ದೇವೆ. ತಟಸ್ಥವಾಗಿರಿ ಅಥವಾ ಕಾಂಗ್ರೆಸ್​ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಸುಮಲತಾಗೆ ತಾಕೀತು ಮಾಡಿದ್ದಾರೆ.

ಮಂಡ್ಯ ಲೋಕಸಭಾ ಜಿದ್ದಾಜಿದ್ದಿ: ಸುಮಲತಾಗೆ ಎಚ್ಚರಿಕೆಯ ಬೇಡಿಕೆ ಇಟ್ಟ ಕಾಂಗ್ರೆಸ್ ಶಾಸಕ
ಸುಮಲತಾ, ಶಾಸಕ ನರೇಂದ್ರಸ್ವಾಮಿ
Follow us on

ಮಂಡ್ಯ, ಮಾರ್ಚ್​ 30: ನಾವು ಮಂಡ್ಯದ ಗೆಲುವು ಕೇಳುತ್ತಿದ್ದೇವೆ. ತಟಸ್ಥವಾಗಿರಿ ಅಥವಾ ಕಾಂಗ್ರೆಸ್​ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಸಂಸದ ಸುಮಲತಾಗೆ (Sumalatha) ಕಾಂಗ್ರೆಸ್​ ಶಾಸಕ ನರೇಂದ್ರಸ್ವಾಮಿ ತಾಕೀತು ಮಾಡಿದ್ದಾರೆ. ಜಿಲ್ಲೆಯ ಮಳವಳ್ಳಿಯಲ್ಲಿ ನಿನ್ನೆ ನಡೆದಿದ್ದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಸುಮಲತಾ ನಾನು ಹುಚ್ಚೇಗೌಡರ ಸೊಸೆ ಎಂದಿದ್ರು. ಹುಚ್ಚೇಗೌಡರ ಸ್ವಾಭಿಮಾನವನ್ನು ಕಳೆಯಬಾರದು. ನಿಮಗೆ ಎಚ್ಚರಿಕೆಯ ಬೇಡಿಕೆ ಇಡ್ತೇನೆ. ಈ ಮಳವಳ್ಳಿಗೆ ನೀವು ಅವಮಾನ ಮಾಡಕೂಡದು. ಅಂದು ನೀವು ಸ್ವಾಭಿಮಾನದ ಬಗ್ಗೆ ಮಾತನಾಡಿದ್ರಲ್ಲ. ಇಂದು ನಿಜವಾದ ಸ್ವಾಭಿಮಾನ ಉಳಿಸಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಕಳೆದ MP ಚುನಾವಣೆಯಲ್ಲಿ JDS ಪರ ಕೆಲಸ ಮಾಡಲ್ಲ ಎಂದು ನಾನು ಓಪನ್​​ ಆಗಿ ಹೇಳಿದ್ದೆ. ಅಂದು ಸುಮಲತಾ ಪರ ನಾವು ಕೆಲಸ ಮಾಡಿದ್ದೆವು. ಇಂದು ಸುಮಲತಾ ಅವರು ಜ್ಞಾಪಕ ಮಾಡಿಕೊಳ್ಳಲಿ ಎಂದಿದ್ದಾರೆ.

ಇದನ್ನೂ ಓದಿ: ಮಂಡ್ಯ ಸಂಸದೆ ಮನವೊಲಿಕೆಗೆ ವಿಜಯೇಂದ್ರ ಕಸರತ್ತು, ಸುಮಲತಾ ಅಂಬರೀಶ್ ಹೇಳಿದ್ದೇನು?

ಅಂದಹಾಗೆ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಮೌನಕ್ಕೆ ಜಾರಿರುವ ಸಂಸದೆ ಸುಮಲತಾ ಇದುವರೆಗೂ ತಮ್ಮ ನಡೆ ಏನು ಎಂಬುದನ್ನ ತಿಳಿಸಿಲ್ಲ. ಜೊತೆಗೆ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ. ಅಲ್ಲದೆ ನಿನ್ನೆ ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಜೆಡಿಎಸ್‌ ಮತ್ತು ಬಿಜೆಪಿ ಸಮ್ಮಿಲನ ಸಭೆಗೂ ಕೂಡ ಗೈರಾಗಿದ್ದಾರೆ. ಈ ನಡುವೆ ಬೆಂಗಳೂರು ಜೆಪಿ ನಗರ ನಿವಾಸದಲ್ಲಿ ಬೆಂಬಲಿಗರ ಸಭೆಯನ್ನ ಕರೆದಿದ್ದು ಮುಂದಿನ ರಾಜಕೀಯ ನಡೆಯ ಬಗ್ಗೆ ತೀರ್ಮಾನ ಮಾಡಲಿದ್ದಾರೆ.

ಮೈತ್ರಿ ನಾಯಕರ ಸಭೆಯ ವೇದಿಕೆಯಲ್ಲೇ ಅಸಮಾಧಾನ ಸ್ಫೋಟ

ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರ ಸಭೆಯ ವೇದಿಕೆಯಲ್ಲೇ ಅಸಮಾಧಾನ ಸ್ಫೋಟವಾಗಿದೆ. ಕೇವಲ ಜೆಡಿಎಸ್ ನಾಯಕರಿಗೆ ಭಾಷಣಕ್ಕೆ ಅವಕಾಶ ಆರೋಪ ಕೇಳಿಬಂದಿತ್ತು. ವೇದಿಕೆ ಮೇಲೆ ನಾಗಮಂಗಲ ಪರಾಜಿತ ಬಿಜೆಪಿ ಅಭ್ಯರ್ಥಿ ಚೇತನ್ ಶಿವರಾಮೇಗೌಡ ಅಸಮಾಧಾನ ಹೊರಹಾಕಿದ್ದರು.

ಇದನ್ನೂ ಓದಿ: ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಖಚಿತ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್

ಮೊದಲಿನಿಂದಲೂ ಜೆಡಿಎಸ್​​ನವರೇ ಭಾಷಣ ಮಾಡುತ್ತಿದ್ದಾರೆ. ಯಾಕೆ ವೇದಿಕೆ ಮೇಲೆ ಬಿಜೆಪಿ ನಾಯಕರಿಲ್ವಾ ಎಂದು ಗರಂ ಆಗಿದ್ದರು. ನಮಗೂ ಸಮಾನ ಅವಕಾಶ ನೀಡಬೇಕಲ್ವಾ ಎಂದು ಬೇಸರ ವ್ಯಕ್ತಪಡಿಸಿದ್ದು, ತಕ್ಷಣವೇ ಚೇತನ್​ನನ್ನು ಉಭಯ ನಾಯಕರು ಸುಮ್ಮನಿರಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.