AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya: ಹೆಣ್ಣು ಮಗು ಹುಟ್ಟುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ಪಾಲಾನಾ ಕೇಂದ್ರಕ್ಕೆ ಒಪ್ಪಿಸಿದ ಪೋಷಕರು; ಸ್ಥಳೀಯರಿಂದ ಆಕ್ರೋಶ

ಕನಕಪುರ ತಾಲೂಕಿನವರಾದ ದಂಪತಿಗಳಿಬ್ಬರು ಮದುವೆಯಾಗಿ ನಾಲ್ಕು ವರ್ಷಗಳಾಗಿದೆ. ಕೂಲಿ ಮಾಡಿಕೊಂಡು ಬದುಕುವ ಅವರಿಗೆ ಈಗಾಗಲೇ 2 ಹೆಣ್ಣು ಮಕ್ಕಳಿದ್ದಾರೆ. ಈಗ ಮೂರನೇ ಮಗುವೂ ಹೆಣ್ಣಾಗಿ ಹುಟ್ಟಿದ್ದಕ್ಕೆ ಮಗುವನ್ನು ಮಕ್ಕಳ ಪಾಲನಾ ಕೇಂದ್ರಕ್ಕೆ ಕೊಟ್ಟಿದ್ದಾರೆ.

Mandya: ಹೆಣ್ಣು ಮಗು ಹುಟ್ಟುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ಪಾಲಾನಾ ಕೇಂದ್ರಕ್ಕೆ ಒಪ್ಪಿಸಿದ ಪೋಷಕರು; ಸ್ಥಳೀಯರಿಂದ ಆಕ್ರೋಶ
ಜಿಲ್ಲಾ ಮಕ್ಕಳ ಪಾಲಾನಾ ಕೇಂದ್ರ
TV9 Web
| Updated By: preethi shettigar|

Updated on:Jun 08, 2021 | 2:15 PM

Share

ಮಂಡ್ಯ: ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲಾ ಅವರು ಎಲ್ಲಾ ಹಂತದಲ್ಲೂ ಗಂಡಿಗೆ ಸರಿ ಸಮಾನರು ಎಂದು ಯಾರು ಎಷ್ಟೇ ಬಾಯಿ ಬಡಿದುಕೊಂಡರು ಅಷ್ಟೇ. ಹೆಣ್ಣು ಮಕ್ಕಳ ಬಗೆಗೆ ಕೆಲವು ಪೋಷಕರು ಈಗಲೂ ಒಂದು ರೀತಿಯ ಅಸಡ್ಡೆ ಭಾವನೆ ಹೊಂದಿದ್ದಾರೆ. ಇಂತಹದ್ದೇ ಘಟನೆ ಸದ್ಯ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದ್ದು, ಹೆಣ್ಣು ಮಗುವು ಜನಿಸಿದರೆ ಅದು ತಮ್ಮ ಕುಟುಂಬಕ್ಕೆ ಭಾರವಾಗುತ್ತದೆ ಎಂದು ತಿಳಿದ ದಂಪತಿಗಳಿಬ್ಬರು ತಮಗೆ ಜನಿಸಿದ ಮಗುವನ್ನು ಮಕ್ಕಳ ಪಾಲನಾ ಕೇಂದ್ರಕ್ಕೆ ಕೊಟ್ಟು ಹೋಗಿದ್ದಾರೆ.

ಮೂಲತಃ ಕನಕಪುರ ತಾಲೂಕಿನವರಾದ ದಂಪತಿಗಳಿಬ್ಬರು ಮದುವೆಯಾಗಿ ನಾಲ್ಕು ವರ್ಷಗಳಾಗಿದೆ. ಕೂಲಿ ಮಾಡಿಕೊಂಡು ಬದುಕುವ ಅವರಿಗೆ ಈಗಾಗಲೇ 2 ಹೆಣ್ಣು ಮಕ್ಕಳಿದ್ದಾರೆ. ಈಗ ಮೂರನೇ ಮಗುವೂ ಹೆಣ್ಣಾಗಿ ಹುಟ್ಟಿದ್ದಕ್ಕೆ ಮಗುವನ್ನು ಮಕ್ಕಳ ಪಾಲನಾ ಕೇಂದ್ರಕ್ಕೆ ಕೊಟ್ಟಿದ್ದಾರೆ.

ಒಂದು ಕಡೆ ಬಡತನ, ಮತ್ತೊಂದು ಕಡೆ ಈಗಾಗಲೇ ಎರಡು ಹೆಣ್ಣು ಮಕ್ಕಳಿರುವುದರಿಂದ ಈ ಮಗುವನ್ನೂ ಸಾಕಲು ಶಕ್ತಿ ಇಲ್ಲ ಎಂಬ ಕಾರಣಕ್ಕೆ ವೈದ್ಯರಿಗೆ ಹೇಳಿ ಮಗುವನ್ನು ಮಳವಳ್ಳಿ ತಾಲೂಕು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಮಕ್ಕಳ ಪಾಲನಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ ತಿಳಿಸಿದ್ದಾರೆ.

ಸಾಕಷ್ಟು ಬಡತನದಲ್ಲಿದ್ದ ಆ ದಂಪತಿಗಳು ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಂಡಿದ್ದರು. ಆದರೆ, ಆಕೆಗೆ ಅರಿವೇ ಇಲ್ಲದಂತೆ ಆಕೆ ಮತ್ತೊಂದು ಮಗುವಿನ ತಾಯಿಯಾಗುವುದರಲ್ಲಿದ್ದಳು. ಆಕೆಗೆ 5 ತಿಂಗಳ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗಲೇ ಆಕೆ ಮತ್ತೊಂದು ಮಗುವಿಗೆ ಗರ್ಭಿಣಿಯಾಗಿರುವ ವಿಚಾರ ಗೊತ್ತಾಗಿತ್ತು. ಆ ವೇಳೆ ಆಕೆ ಮಗುವನ್ನ ತೆಗೆದು ಬಿಡಿ ಎಂದು ವೈದ್ಯರ ಬಳಿ ಕೇಳಿಕೊಂಡಿದ್ದರು. ಆದಾಗಲೇ ಐದು ತಿಂಗಳು ತುಂಬಿದ್ದರಿಂದ ವೈದ್ಯರು ಮಗುವನ್ನು ತೆಗೆಯಲಾಗಲ್ಲ ಎಂದಿದ್ದರು.ಇದರಿಂದ ಕಂಗಾಲಾಗಿದ್ದ ಆ ದಂಪತಿಗಳು ಹೆರಿಗೆ ವೇಳೆಗೆ ಕನಕಪುರದಿಂದ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಬಂದು ಹೆರಿಗೆ ಮಾಡಿಸಿಕೊಂಡಿದ್ದಾರೆ.

ಹೆರಿಗೆಯಾಗಿ ಮಗು ಹೆಣ್ಣು ಎಂದು ತಿಳಿದ ಕೂಡಲೇ ವೈದ್ಯರ ಬಳಿ ಮಗು ತಮಗೆ ಬೇಡ ಎಂದು ಹೇಳಿದ್ದಾರೆ. ಆ ವೇಳೆ ವೈದ್ಯರು ದಂಪತಿಗಳ ಮನವೊಲಿಕೆಗೆ ಎಷ್ಟೇ ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಕಡೆಗೆ ಅಧಿಕಾರಿಗಳನ್ನು ಕರೆಸಿ ಮಗುವನ್ನು ಮಕ್ಕಳ ಪಾಲನಾ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಸದ್ಯ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮಕ್ಕಳಾಗದ ಸಾಕಷ್ಟು ದಂಪತಿಗಳು ಮಗುವಿಗಾಗಿ ಪರಿತಪಿಸುತ್ತಿರುತ್ತಾರೆ. ಅಂತಹುದರಲ್ಲಿ ಮಗುವಿನ ತಾಯಿ ಹೀಗೆ ಮಾಡಿದ್ದು ಸರಿಯಲ್ಲ ಎಂದು ಮಗುವಿನ ಪೋಷಕರ ವಿರುದ್ಧ ಸ್ಥಳೀಯರಾದ ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ದಂಪತಿಗಳ ದುಡಿಕಿನ ನಿರ್ಧಾರದಿಂದಾಗಿ ಮಗು ಮೇಲುಕೋಟೆಯಲ್ಲಿರುವ ಮಕ್ಕಳ ಪಾಲನಾ ಕೇಂದ್ರದಲ್ಲಿದೆ. ಹೆತ್ತವರಿಬ್ಬರೂ ಇರುವಾಗಲೇ ಮಗು ಅನಾಥವಾಗಿ ಮಕ್ಕಳ ಪಾಲನಾ ಕೇಂದ್ರ ಸೇರಿದ್ದು, ಮಾತ್ರ ದುರಂತ.

ಇದನ್ನೂ ಓದಿ:

ಕೊರೊನಾ ಸೋಂಕಿತರಿಗೆ ಕೊಪ್ಪಳ ಗಂಗಾವತಿ ಆಸ್ಪತ್ರೆಯಲ್ಲಿ ಹೇರ್​ಕಟ್​; ಕ್ಷೌರಿಕನಿಗೆ ವೈದ್ಯರಿಂದ ಸನ್ಮಾನ

ಸುಂದರ ಸಂಸಾರಕ್ಕೆ ಕೊಳ್ಳಿ ಇಟ್ಟ ಆ ಒಂದು ವಿಷಯ.. ನಿರ್ಜನ ಪ್ರದೇಶದಲ್ಲಿ ಗಂಡನ ಆತ್ಮಹತ್ಯೆ, ಪತ್ನಿ ಆಸ್ಪತ್ರೆಗೆ ದಾಖಲು

Published On - 2:14 pm, Tue, 8 June 21