
ಮಂಡ್ಯ, ಫೆಬ್ರವರಿ 24: ಸಕ್ಕರಿನಗರಿ ಮಂಡ್ಯದಲ್ಲಿ ಇತ್ತೀಚಿಗೆ ಪುಡಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಪ್ರಾಪ್ತ ಬಾಲಕರ ಕ್ರೌರ್ಯ ಮಂಡ್ಯ ಜನರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ. ಯುವತಿಯೊಬ್ಬಳ (girl) ವಿಚಾರವಾಗಿ ಮೀಸೆ ಚಿಗುರದ ಬಾಲಕರು ಅಟ್ಟಹಾಸ ಮೆರೆದಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೀಸೆ ಚಿಗುರದ ಅಪ್ರಾಪ್ತ ಬಾಲಕರ ಕ್ರೌರ್ಯ ಜಿಲ್ಲೆಯ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅಂದಹಾಗೆ ಯುವತಿಯೊಬ್ಬಳ ವಿಚಾರವಾಗಿ ಮಂಡ್ಯದಲ್ಲಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ವಾರ್ ನಡೆದಿದೆ.
ಇದನ್ನೂ ಓದಿ: ವಿಷ ಸೇವಿಸಿ ಬಳಿಕ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವು: ಕಾರಣವೇನು?
ಇದೇ ವಿಚಾರವಾಗಿ ಮಂಡ್ಯದಲ್ಲಿ ಐಟಿಐ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಟೀ ನರಸಿಪುರ ಮೂಲದ 19 ವರ್ಷದ ಯುವಕನೊಬ್ಬನನ್ನ ಸುಮಾರು ಏಳೆಂಟು ಅಪ್ರಾಪ್ತ ಬಾಲಕರು ಮಂಡ್ಯದ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಲಾಂಗ್ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕುವ ಜೊತೆಗೆ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಸಂತ್ರಸ್ತ ಯುವಕ ಪರಿಪರಿಯಾಗಿ ಬೇಡಿಕೊಂಡರು ಬಿಡದ ಅಪ್ರಾಪ್ತರು ಕ್ರೌರ್ಯ ಮೆರೆದಿದ್ದಾರೆ.
ಅಂದಹಾಗೆ ಫೇಸ್ ಬುಕ್ನಲ್ಲಿ ಲೈವ್ ಆದ ಕ್ರೌರ್ಯದ ವಿಡಿಯೋ ಆನಂತರ ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಮೀಸೆ ಚಿಗುರದ ಅಪ್ರಾಪ್ತರ ಅಟ್ಟಹಾಸ ಬೆಚ್ಚಿ ಜನತೆಯನ್ನ ಬೀಳುವಂತೆ ಮಾಡಿದೆ. ಇನ್ನು ಘಟನೆ ಸಂಬಂಧ ಸಂತ್ರಸ್ತ ಯುವಕ ದೂರು ನೀಡಲು ಹಿಂದೇಟು ಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರೀತ್ಸೆ…ಪ್ರೀತ್ಸೆ ಎಂದು ವಿವಾಹಿತ ಮಹಿಳೆ ಬಲಿ ಪಡೆದ ಕಾಮಿ
ಪ್ರಕರಣ ಸಂಬಂಧ ಮಂಡ್ಯದ ಪೂರ್ವ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಒಟ್ಟಾರೆ ಜೀವನ, ಕಷ್ಟ ಸುಖ ಅಂದರೆ ಏನು ಎಂದು ತಿಳಿಯದ ಅಪ್ರಾಪ್ತರು ಕ್ರೌರ್ಯದ ಹಾದಿ ಇಳಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.