ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿಯರಿಗೆ ರಕ್ಷಣೆಯೇ ಇಲ್ವಾ? ಮತ್ತೊಂದು ಪ್ರಕರಣ ಬೆಳಕಿಗೆ

ಯಾವತ್ತೂ ಕೈಯಲ್ಲಿ ಪುಸ್ತಕ ಹಿಡಿದು ಪಾಠ ಮಾಡದ ಕಾಂತರಾಜ್ ಇಬ್ಬರು ಲೇಡಿ ಟೀಚರ್ಸ್ ನ ಇಟ್ಟು ಕೊಂಡು ಟ್ಯೂಷನ್ ನಡೆಸುತ್ತಿದ್ದ. ಮಹಿಳಾ ಶಿಕ್ಷಕರ ಬಳಿ ತನ್ನ ಕುಚೇಷ್ಟೆ ತೊರಲು ಹೋಗಿ ಛೀ ಎನಿಸಿಕೊಂಡಿದ್ದ.

ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿಯರಿಗೆ ರಕ್ಷಣೆಯೇ ಇಲ್ವಾ? ಮತ್ತೊಂದು ಪ್ರಕರಣ ಬೆಳಕಿಗೆ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Oct 17, 2022 | 12:52 PM

ಮಂಡ್ಯ: ಮಂಡ್ಯದಲ್ಲಿ ಅಪ್ರಾಪ್ತ ಬಾಲಕಿಯರಿಗೆ ರಕ್ಷಣೆಯೇ ಇಲ್ವಾ? ಮಳವಳ್ಳಿಯ ರೇಪ್ ಎಂಡ್ ಮರ್ಡರ್ ಕೇಸ್ ಬೆನ್ನಲ್ಲೆ ಮಂಡ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ತಿಂಡಿ ಆಸೆ ತೋರಿಸಿ ಅಪ್ರಾಪ್ತೆ ಮೇಲೆ 63 ವರ್ಷದ ವೃದ್ಧ ಅಟ್ಟಹಾಸ ಮೆರೆದಿದ್ದಾನೆ. ಸಂಬಂಧಿ ಎಂದು ನಂಬಿ ಹೋದ ಬಾಲಕಿ ಮೇಲೆಯೇ ಹೇಯ ಕೃತ್ಯ ಎಸಗಿದ್ದಾನೆ. ಹಲಗೂರು ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಟ್ಯೂಷನ್ ನಡೆಸುವ ನೆಪದಲ್ಲಿ ಬಾಲಕಿಯರನ್ನೆ ಟಾರ್ಗೆಟ್ ಮಾಡ್ತಿದ್ದ ಕಾಮುಖ

ಮಂಡ್ಯದ ಮಳವಳ್ಳಿಯಲ್ಲಿ ಟ್ಯೂಷನ್​​ಗೆ ಹೋಗಿದ್ದ ಹತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕೊಲೆ ಮಾಡಲಾಗಿತ್ತು. ನೀರಿನ ಸಂಪಿನಲ್ಲಿ ಬಾಲಕಿಯ ಶವ ಕಂಡು ಇಡೀ ಸಕ್ಕರೆ ನಾಡು ಕಣ್ಣೀರು ಹಾಕಿತ್ತು. ಸದ್ಯ ಈಗ ಕಾಮುಖ ಕಾಂತರಾಜ್​ನ ಮತ್ತೊಂದು ಮುಖ ಬಯಲಾಗಿದೆ. ಅಪ್ರಾಪ್ತ ಬಾಲಕಿಯರನ್ನೆ ಟಾರ್ಗೆಟ್ ಮಾಡ್ತಯಿದ್ದ ಆರೋಪಿ ಈ ಹಿಂದೆ ಅನೇಕ ಬಾರಿ ಕೃತ್ಯಕ್ಕೆ ಕೈ ಹಾಕಿ ಛೀ ಎನಿಸಿಕೊಂಡಿದ್ದ. ಇದನ್ನೂ ಓದಿ: ಮಂಡ್ಯದಲ್ಲಿ ಟ್ಯೂಷನ್​​ಗೆ ಹೋಗಿದ್ದ ಬಾಲಕಿ ಶವ ಪತ್ತೆ ಕೇಸ್​ಗೆ ಟ್ವಿಸ್ಟ್: ಕೊಲೆ ಮಾಡಿ ಸಂಪಿಗೆ ಎಸೆದಿರುವುದಾಗಿ ಸತ್ಯ ಒಪ್ಪಿಕೊಂಡ ಶಿಕ್ಷಕ

ಈತನ ಉಪಟಳ ತಾಳಲಾರದೆ ಪತ್ನಿ ಈತನನ್ನು ಮನೆಯಿಂದ ದೂರ ಇಟ್ಟಿದ್ದಳು. ಹೀಗಾಗಿ ಈತ ಮಳವಳ್ಳಿ ಟೌನ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಹಾಗೂ ಟ್ಯೂಷನ್ ನಡೆಸ್ತೀನಿ ಎಂದು ಕಳೆದ ಆರು ತಿಂಗಳ ಹಿಂದೆ ರೂಮೊಂದನ್ನ ಬಾಡಿಗೆ ಪಡೆದಿದ್ದ. ಯಾವತ್ತೂ ಕೈಯಲ್ಲಿ ಪುಸ್ತಕ ಹಿಡಿದು ಪಾಠ ಮಾಡದ ಕಾಂತರಾಜ್ ಇಬ್ಬರು ಲೇಡಿ ಟೀಚರ್ಸ್ ನ ಇಟ್ಟು ಕೊಂಡು ಟ್ಯೂಷನ್ ನಡೆಸುತ್ತಿದ್ದ. ಮಹಿಳಾ ಶಿಕ್ಷಕರ ಬಳಿ ತನ್ನ ಕುಚೇಷ್ಟೆ ತೊರಲು ಹೋಗಿ ಛೀ ಎನಿಸಿಕೊಂಡಿದ್ದ. ಗಲಾಟೆಯಾದ ಬಳಿಕ ಕಾಂತರಾಜ್ ಸೈಲೆಂಟ್ ಆಗಿದ್ದ. ಆದ್ರೆ ಈತನ ಕಾಮದ ದಾಹಕ್ಕೆ 10 ವರ್ಷ ಬಾಲಕಿ ಬಲಿಯಾಗಿದ್ದಾಳೆ. ಸದ್ಯ ಐಪಿಸಿ 302 ಹಾಗೂ ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನ ಬಂಧಿಸಿರುವ ಮಳವಳ್ಳಿ ಟೌನ್ ಪೊಲೀಸರು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:50 pm, Mon, 17 October 22