ಹೆದ್ದಾರಿಯಲ್ಲಿ ಎಮ್ಮೆಗೆ ಗುದ್ದಿದ ಕಾರು ಭಸ್ಮ: ಅದೃಷ್ಟವಶಾತ್ ಕಾರಿನಲ್ಲಿದ್ದವರು ಪಾರು
ಹಾಸನದ ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕ್ವಿಡ್ ಕಾರು ಏಕಾ ಏಕಿ ಬಂದು ಎಮ್ಮೆಗೆ ಗುದ್ದಿದೆ. ಈ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದೆ.
ಮಂಡ್ಯ: ಹೆದ್ದಾರಿಯಲ್ಲಿ ಎಮ್ಮೆಗೆ ಗುದ್ದಿದ ಕಾರು ಭಸ್ಮವಾದ ಘಟನೆ ಮಂಡ್ಯದ ನಾಗಮಂಗಲದ ಬೆಳ್ಳೂರು ಕ್ರಾಸ್ ಬಳಿಯ ಬಿಜಿಎಸ್ ಆಸ್ಪತ್ರೆ ಮುಂಭಾಗ ನಡೆದಿದೆ. ಹಾಸನದ ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕ್ವಿಡ್ ಕಾರು ಏಕಾ ಏಕಿ ಬಂದು ಎಮ್ಮೆಗೆ ಗುದ್ದಿದೆ. ಈ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದೆ. ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಕಾರಿನಿಂದ ಹೊರ ಬಂದು ಕಾರಿನಲ್ಲಿದ್ದವರು ಪ್ರಾಣ ಉಳಿಸಿಕೊಂಡಿದ್ದಾರೆ.
ಸಿಎಂ ಕಾನ್ವೆ ತಾಲೀಮು ವೇಳೆ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್
ಇನ್ನು ಮತ್ತೊಂದು ಕಡೆ ಸಿಎಂ ಕಾನ್ವೆ ತಾಲೀಮು ವೇಳೆ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಹಳ್ಳಕ್ಕೆ ಇಳಿದ ಘಟನೆ ಮಂಡ್ಯದ ಮಳವಳ್ಳಿ ತಾತ್ಕಾಲಿಕ ಹೆಲಿಪ್ಯಾಡ್ ಬಳಿ ನಡೆದಿದೆ. ಸಿಎಂ ಜಲಮಂಡಳಿ ಯಂತ್ರಗಾರ ವೀಕ್ಷಣೆಗೆ ಆಗಮಿಸುವ ಹಿನ್ನೆಲೆ ಸಿಎಂ ಕರೆದುಕೊಂಡು ಹೋಗಲು ಪೊಲೀಸ್ ಇಲಾಖೆಯಿಂದ ತಾಲೀಮು ನಡೆಸಲಾಗುತ್ತಿತ್ತು. ಈ ವೇಳೆ ಆ್ಯಂಬುಲೆನ್ಸ್ ನಿಯಂತ್ರಣ ತಪ್ಪಿ ಹಳ್ಳಕೆ ಇಳಿದಿದೆ. ಅಗ್ನಿಶಾಮಕ ದಳದ ವಾಹನದ ಸಹಾಯದಿಂದ ಆ್ಯಂಬುಲೆನ್ಸ್ ಮೇಲೆಳೆಯಲಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:39 pm, Mon, 5 September 22