ಕಾವೇರಿ ವಿವಾದ: 44ನೇ ದಿನಕ್ಕೆ ಕಾಲಿಟ್ಟ ಮಂಡ್ಯ ರೈತರ ಪ್ರತಿಭಟನೆ; ಅ.20ರಿಂದ ಬೃಹತ್​​ ಧರಣಿ ಚಿಂತನೆ

ಮಂಡ್ಯದಲ್ಲಿ ಕಳೆದ 44 ದಿನಗಳಿಂದ ರೈತ ಹಿತರಕ್ಷಣಾ ಸಮಿತಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದೆ. ಆದರೂ ಕೂಡ ಸರ್ಕಾರ ನೀರು ಬಿಡುತ್ತಿರುವುದನ್ನು ನಿಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ ಬೃಹತ್​ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಕಾವೇರಿ ವಿವಾದ: 44ನೇ ದಿನಕ್ಕೆ ಕಾಲಿಟ್ಟ ಮಂಡ್ಯ ರೈತರ ಪ್ರತಿಭಟನೆ; ಅ.20ರಿಂದ ಬೃಹತ್​​ ಧರಣಿ ಚಿಂತನೆ
ರೈತರ ಪ್ರತಿಭಟನೆ
Follow us
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ

Updated on:Oct 18, 2023 | 3:17 PM

ಮಂಡ್ಯ ಅ.18: ತಮಿಳುನಾಡಿಗೆ ಕಾವೇರಿ ನದಿ ನೀರು (Cauvery Water Dispute) ಹರಿಸುತ್ತಿರುವುದನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಕನ್ನಡಪರ ಸಂಘಟನೆಗಳು ಮತ್ತು ರೈತರು (Farmers) ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ತಿಂಗಳು ವಿವಿಧ ಸಂಘಟನೆಗಳು ಬೆಂಗಳೂರು (Bengaluru) ಮತ್ತು ಕರ್ನಾಟಕ ಬಂದ್​​ಗೆ ನಡೆಯಿತು. ಆದರೂ ತಮಿಳುನಾಡಿಗೆ ನೀರು ಹರಿಯುವುದು ಮಾತ್ರ ನಿಂತಿಲ್ಲ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ.

ಮಂಡ್ಯದಲ್ಲಿ ಕಳೆದ 44 ದಿನಗಳಿಂದ ರೈತ ಹಿತರಕ್ಷಣಾ ಸಮಿತಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದೆ. ಆದರೂ ಕೂಡ ಸರ್ಕಾರ ನೀರು ಬಿಡುತ್ತಿರುವುದನ್ನು ನಿಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 20 ರಿಂದ 30ರವರಗೆ ಬೃಹತ್ ಪ್ರತಿಭಟನೆ ನಡೆಸಲು ಸಮಿತಿ ನಿರ್ಧರಿಸಿದೆ. ಅಲ್ಲದೆ ಇಂದಿನ ಪ್ರತಿಭಟನೆ ವೇಳೆ ಸಮಿತಿ ಸದಸ್ಯರು ಸರ್ಕಾರ, ಪ್ರಾಧಿಕಾರ, ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ಮತ್ತೆ ಕಾವೇರಿ ನೀರು: ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆಘಾತ; ಹೆಚ್​ಡಿ ಕುಮಾರಸ್ವಾಮಿ

ತಕ್ಷಣವೇ ವಿಶೇಷ ಜಂಟಿ ಅಧಿವೇಶನ ಕರೆಯಬೇಕು ಕಾವೇರಿ ಬಗ್ಗೆ ಮಾತ್ರ ಅಜೆಂಡಾ ಆಗಿರಬೇಕು. ಕಾವೇರಿ ಸಮಸ್ಯೆಗೆ ಒಂದು ಇತ್ಯರ್ಥವಾಗಲೇಬೇಕು. ನೀರಿಗೆ ಕಾಸು ಕೊಟ್ಟು ಕುಡಿಯುವ ಸಂದರ್ಭ ಶೀಘ್ರದಲ್ಲೇ ಬರುತ್ತದೆ. ನಾವು ಈಗಲಾದರೂ ಎಚ್ಚೆತುಕೊಂಡು ಕಾವೇರಿ ಉಳಿಸಿ ಎಂದು ಸರ್ಕಾರಕ್ಕೆ ರೈತ ನಾಯಕಿ ಸುನಂದಾ ಜಯರಾಂ ಆಗ್ರಹಿಸಿದರು.

ಕೇಂದ್ರ ಸಚಿವರಿಗೆ ಕರವೇ ಕಾರ್ಯಕರ್ತರಿಂದ ಮನವಿ

ಕಾವೇರಿ ವಿವಾದವನ್ನು ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ್ ಗೌಡ ಇಂದು (ಅ.18) ಕೇಂದ್ರ ಸಚಿವರಾದ ಪ್ರಹ್ಲಾದ್​​​ ಜೋಶಿ, ಗಜೇಂದ್ರ ಸಿಂಗ್​​​ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಸಲ್ಲಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Wed, 18 October 23