ಮಂಡ್ಯ: ಇಲ್ಲೇ ನೋಡಿ ಶ್ರೀರಾಮ ಸೀತಾದೇವಿಯ ಬಾಯಾರಿಕೆ ನೀಗಿಸಲು ಧನಸ್ಸು ಬಿಟ್ಟು ನೀರು ಬರಿಸಿದ್ದು
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪ ಇರುವ ಧನುಷ್ಕೋಟಿಯಲ್ಲಿ ಶ್ರೀರಾಮ ತನ್ನ ವನವಾಸ ಕಾಲದಲ್ಲಿ ಲಕ್ಷಣ, ಸೀತಾದೇವಿಯ ಜೊತೆಗೆ ಇಲ್ಲಿಗೆ ಬಂದು, ಇಲ್ಲಿ ತಂಗಿದ್ದ. ಆ ವೇಳೆ, ಸೀತಾದೇವಿಗೆ ಬಾಯಾರಿಕೆಯಾಗಿ ನೀರು ಬೇಕು ಎಂದಾಗ ಶ್ರೀರಾಮ ಬಂಡೆಗೆ ಧನಸ್ಸನ್ನ ಬಿಟ್ಟು ನೀರು ಬರಿಸಿದ್ದ. ಹೀಗಾಗಿಯೇ ಇಲ್ಲಿ ಎಂತಹ ಕಾಲದಲ್ಲೂ ನೀರು ಇರುತ್ತೆ.
ಮಂಡ್ಯ, ಜ.02: ಅಯೋಧ್ಯೆಯಲ್ಲಿ ಮರ್ಯಾದ ಪುರುಷ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣ ಆಗಬೇಕೆಂಬುದು ದೇಶದ ಕೋಟಿ ಕೋಟಿ ಜನರ ಕನಸು (Ayodhya Ram Mandir). ಅದರಂತೆ ಶತಕೋಟಿ ಜನರ ಕನಸು ನನಸಾಗುವ ಸಮಯ ಬಂದಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇವೆ. ಇನ್ನು ಶ್ರೀರಾಮನಿಗೂ ನಮ್ಮ ರಾಜ್ಯಕ್ಕೂ (Karnataka) ಅವಿನಾಭಾವ ಸಂಬಂಧವಿದೆ. ಶ್ರೀರಾಮ ತನ್ನ ವನವಾಸದ ಕಾಲದಲ್ಲಿ ಸೀತಾದೇವಿಯ ಜೊತೆ ರಾಜ್ಯಕ್ಕೆ ಆಗಮಿಸಿದ್ದ. ಈ ವೇಳೆ ಸೀತಾದೇವಿಗೆ ಬಾಯಾರಿಕೆಯಾದಾಗ ಧನಸ್ಸನ್ನ ಬಿಟ್ಟು ನೀರು ಬರಿಸಿದ್ದ ಎಂಬ ಪ್ರತೀತಿ ಇದೆ. ಹಾಗಾದ್ರೆ ಆ ಸ್ಥಳ ಯಾವ್ದು ಈ ಸ್ಟೋರಿ ಓದಿ.
ದೇಶದ ಕೋಟಿ ಕೋಟಿ ಜನರ ಕನಸು ನನಸಾಗುವ ಸಮಯ ಬಂದಿದೆ. ಆಯೋಧ್ಯೆಯಲ್ಲಿ ಮರ್ಯಾದ ಪುರುಷ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇವೆ. ಇದಕ್ಕಾಗಿಯೇ ಕೋಟಿ ಕೋಟಿ ಜನರು ಕಾದು ಕುಳಿತಿದ್ದಾರೆ. ಇನ್ನು ಶ್ರೀರಾಮನಿಗೂ ರಾಜ್ಯಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀರಾಮ ತನ್ನ ವನವಾಸದ ಸಮಯದಲ್ಲಿ ಕರ್ನಾಟಕದ ಅನೇಕ ಸ್ಥಳಗಳಲ್ಲಿ ತಂಗಿದ್ದ ಎಂಬ ಬಗ್ಗೆ ಕಥೆಗಳು ಹೇಳುತ್ತವೆ. ಅದೇ ರೀತಿ ಶ್ರೀರಾಮ ತನ್ನ ಪಾದಸ್ವರ್ಶ ಮಾಡಿದ ಅನೇಕ ಸ್ಥಳಗಳಲ್ಲಿ ಮಂಡ್ಯದ ಧನುಷ್ಕೋಟಿ ಕೂಡ ಒಂದು.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ 24 ಅರ್ಚಕರಲ್ಲಿ ಇಬ್ಬರು ಎಸ್ಸಿ, ಓರ್ವ ಒಬಿಸಿ ಅರ್ಚಕರು, ಮೂರು ತಿಂಗಳ ಗುರುಕುಲ ತರಬೇತಿ
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಸಮೀಪ ಇರುವ ಧನುಷ್ಕೋಟಿಯಲ್ಲಿ ಶ್ರೀರಾಮ ತನ್ನ ವನವಾಸ ಕಾಲದಲ್ಲಿ ಲಕ್ಷಣ, ಸೀತಾದೇವಿಯ ಜೊತೆಗೆ ಇಲ್ಲಿಗೆ ಬಂದು, ಇಲ್ಲಿ ತಂಗಿದ್ದ. ಆ ವೇಳೆ, ಸೀತಾದೇವಿಗೆ ಬಾಯಾರಿಕೆಯಾಗಿ ನೀರು ಬೇಕು ಎಂದಾಗ ಶ್ರೀರಾಮ ಬಂಡೆಗೆ ಧನಸ್ಸನ್ನ ಬಿಟ್ಟು ನೀರು ಬರಿಸಿದ್ದ. ಹೀಗಾಗಿಯೇ ಇಲ್ಲಿ ಎಂತಹ ಕಾಲದಲ್ಲೂ ನೀರು ಇರುತ್ತೆ. ಬೇಸಿಗೆ ಇರಲಿ, ಬರಗಾಲ ಎದುರಾದರೂ ನೀರು ಖಾಲಿಯಾಗುವುದಿಲ್ಲ. ಹೀಗಾಗಿಯೇ ಶ್ರೀರಾಮ ಧನಸ್ಸು ಬಿಟ್ಟು ನೀರು ಬರಿಸಿದ ಸ್ಥಳವನ್ನ ಧನಷ್ಕೋಟಿ ಎಂತಲೂ ಕರೆಯಲಾಗುತ್ತದೆ.
ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ರಾಮನ ಭವ್ಯವಾದ ಮಂದಿರ ಉದ್ಘಾಟನೆ ಆಗುತ್ತಿದೆ. ಇನ್ನು ರಾಮಬಂದು ಹೋದಂತಹ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದ್ರೆ ಒಳ್ಳೆಯದು ಆಗುತ್ತದೆ ಎಂಬ ನಂಬಿಕೆ ಸಹ ಇದೆ. ಹೀಗಾಗಿಯೇ ಪಾಂಡವಪುರ ತಾಲೂಕಿನ ಧನಷ್ಕೋಟಿಗೆ ಪ್ರತಿನಿತ್ಯ ಮಂಡ್ಯ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಸಾವಿರಾರು ಭಕ್ತರು ಇಲ್ಲಿಗೆ ಬಂದು ಭಕ್ತಿ, ಭಾವದಿಂದ ಪೂಜೆ ಸಲ್ಲಿಸುತ್ತಾರೆ. ನೀರನ್ನ ಮುಟ್ಟಿ ನಮಸ್ಕರಿಸುತ್ತಾರೆ. ಹೀಗೆ ಮಾಡಿದ್ರೆ ಒಳ್ಳೇದಾಗುತ್ತೆ ಎಂಬ ನಂಬಿಕೆ ಇದೆ. ಇನ್ನು ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವುದರಿಂದ ಅನೇಕ ಮಂದಿ ಭಕ್ತರು ಕೂಡ ಧನಷ್ಕೋಟಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ.
ಒಟ್ಟಾರೆ ಒಂದು ಕಡೆ ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆಗೊಳ್ಳುತ್ತಿದ್ದರೇ, ಮತ್ತೊಂದು ಕಡೆ ಶ್ರೀರಾಮ ಬಂದ ಸ್ಥಳ, ನೀರು ಬರಿಸಿದ ಸ್ಥಳ ಭಕ್ತರ ನೆಚ್ಚಿನ ಕೇಂದ್ರವಾಗಿದೆ.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ