AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ ಮಿಮ್ಸ್​​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿಕಲಚೇತನ ಮಹಿಳೆ ಬಲಿ: ಕುಟುಂಬಸ್ಥರ ಆಕ್ರೋಶ

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಎದುರೇ ಎಣ್ಣೆ ಹಾಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬಾಣಸಿಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಡ್ಯ ಮಿಮ್ಸ್​​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿಕಲಚೇತನ ಮಹಿಳೆ ಬಲಿ: ಕುಟುಂಬಸ್ಥರ ಆಕ್ರೋಶ
ಸ್ಕ್ಯಾನಿಂಗ್​ಗಾಗಿ ಮಗಳನ್ನು ಹೊತ್ತು ತಂದ ತಂದೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Jun 15, 2022 | 8:13 AM

Share

ಮಂಡ್ಯ: ಜಿಲ್ಲೆಯ ಮಿಮ್ಸ್​​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿಕಲಚೇತನ ರೋಗಿ (Patient) ಬಲಿಯಾಗಿರುವಂತಹ ದಾರುಣ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ಚಿಕಿತ್ಸೆ ಸಿಗದೆ ವಿಕಲಚೇತನ ಮಹಿಳೆ ಅಖಿಲಾಭಿ(30) ಸಾವನ್ನಪ್ಪಿರುವ ದುರ್ದೈವಿ. ರಾಮನಗರ ಜಿಲ್ಲೆಯ ಮುಸ್ತಾಫ ಎಂಬುವರ ಪುತ್ರಿ ಅಖಿಲಾಭಿ, ಅನಾರೋಗ್ಯದಿಂದ ಬಳಲುತ್ತಿದ್ದಳು. ಶನಿವಾರ ರಾತ್ರಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ತಂದೆ, ಮಗಳು ಬಂದಿದ್ದು, ಸ್ಕ್ಯಾನಿಂಗ್​ಗಾಗಿ ಮಗಳನ್ನು ಹೊತ್ತು ತಂದೆ ತಿರುಗಾಡಿದ್ದಾರೆ. ಅಡ್ಮಿಟ್ ಮಾಡಿಕೊಳ್ಳದೆ ವೈದ್ಯರು ಸತಾಯಿಸಿದ್ದು, ಭಾನುವಾರ ಅಡ್ಮಿಟ್ ಮಾಡಿಕೊಂಡರೂ ಸೂಕ್ತ ಚಿಕಿತ್ಸೆ ನೀಡದೆ, ಸಂಜೆ ಸಿಬ್ಬಂದಿ ವಾಪಸ್ ಕಳಿಸಿದ್ದರು. ತಡರಾತ್ರಿ ರಾಮನಗರದಲ್ಲಿ ಅಖಿಲಾಭಿ ಮೃತಪಟ್ಟಿದ್ದಾಳೆ. ಮಗಳನ್ನ ಕಳೆದು ಕೊಂಡು ಕುಟುಂಬ ಕಣ್ಣೀರು ಹಾಕುತ್ತಿದ್ದು, ಚಿಕಿತ್ಸೆ ನೀಡದ ಮಿಮ್ಸ್ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೇಗಿದ್ದಾರೆ ನೋಡಿ ರವೀನಾ ಟಂಡನ್ ಮಗಳು; ನೀವು ಸಹೋದರಿಯರಂತೆ ಕಾಣುತ್ತಿದ್ದೀರಿ ಎಂದ ಫ್ಯಾನ್ಸ್

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ಕಾರವಾರ: ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವಂತಹ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿ ಸಮೀಪ ಅಪಘಾತ ಸಂಭವಿಸಿದೆ. ಅಬ್ದುಲ್ ಹಟ್ಟಿಮನಿ (25) ಮೃತ ಬೈಕ್ ಸವಾರ. ಮುಂಡಗೋಡ ಕಡೆಯಿಂದ ಯಲ್ಲಾಪುರ ಕಡೆ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ವಿದ್ಯಾರ್ಥಿಗಳ ಎದುರೇ ಎಣ್ಣೆ ಹಾಕಿ ದರ್ಬಾರ್

ಕೋಲಾರ: ಹಾಸ್ಟೆಲ್​ನಲ್ಲಿ ವಿದ್ಯಾರ್ಥಿಗಳ ಎದುರೇ ಎಣ್ಣೆ ಹಾಕಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಬಾಣಸಿಗನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಗಾಜಲದಿನ್ನೆಯಲ್ಲಿರುವ ಅಂಬೇಡ್ಕರ್ ಹಾಸ್ಟೆಲ್​ನಲ್ಲಿ ವಾರ್ಡನ್ ಹರೀಶ್ ಇಲ್ಲದಿದ್ದ ಸಂದರ್ಭದಲ್ಲಿ ಬಾಣಸಿಗ ಮಂಜುನಾಥ್, ವಿದ್ಯಾರ್ಥಿಗಳ ಎದುರೇ ಮದ್ಯ ಸೇವನೆ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳ ಮೇಲೆ ಮಂಜುನಾಥ್ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ. ಅಡುಗೆ ಮಾಡುವವನ ದರ್ಪ ಹಾಗೂ ದೌರ್ಜನ್ಯದ ವಿಡಿಯೋ ಮಾಡಿದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹಾಸ್ಟೆಲ್​ನ ಅವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಸಂಖ್ಯೆ 250ರಿಂದ 100ಕ್ಕೆ ಇಳಿದೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.