ಸೋನಿಯಾಗೆ ಪ್ರಧಾನಿಯಾಗಲು ಕಲಾಂ ಆಹ್ವಾನಿಸಿದ್ದರು; ಬೇಡ ಎಂದು‌ ಸೋನಿಯಾ ನಿರಾಕರಿಸಿದ್ದರು: ಡಿಕೆ ಶಿವಕುಮಾರ್

ಆರ್ಥಿಕ ತಜ್ಞರಿಗೆ ಪ್ರಧಾನಿ ಹುದ್ದೆ ನೀಡಲು ಬಯಸಿದ್ದರು. ಆ ವೇಳೆ ಮನಮೋಹನ್ ಸಿಂಗ್​ರನ್ನು ಪ್ರಧಾನಿ ಮಾಡಿದರು. ಪಂಚಾಯತ್​ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದು ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಸೋಮವಾರ ಹೇಳಿಕೆ ನೀಡಿದ್ದಾರೆ.

ಸೋನಿಯಾಗೆ ಪ್ರಧಾನಿಯಾಗಲು ಕಲಾಂ ಆಹ್ವಾನಿಸಿದ್ದರು; ಬೇಡ ಎಂದು‌ ಸೋನಿಯಾ ನಿರಾಕರಿಸಿದ್ದರು: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: ganapathi bhat

Updated on: Dec 06, 2021 | 6:12 PM

ಮಂಡ್ಯ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಪ್ರಧಾನಿಯಾಗಲು ಕಲಾಂ ಆಹ್ವಾನಿಸಿದ್ದರು. ಪ್ರಧಾನಿ ಹುದ್ದೆ ಬೇಡ ಎಂದು‌ ಸೋನಿಯಾ ನಿರಾಕರಿಸಿದ್ದರು. ಈ ದೇಶಕ್ಕಾಗಿ ನನ್ನ ಅತ್ತೆ, ಗಂಡನ್ನು ಕಳೆದುಕೊಂಡಿದ್ದೇನೆ ಎಂದಿದ್ದರು. ಆರ್ಥಿಕ ತಜ್ಞರಿಗೆ ಪ್ರಧಾನಿ ಹುದ್ದೆ ನೀಡಲು ಬಯಸಿದ್ದರು. ಆ ವೇಳೆ ಮನಮೋಹನ್ ಸಿಂಗ್​ರನ್ನು ಪ್ರಧಾನಿ ಮಾಡಿದರು. ಪಂಚಾಯತ್​ರಾಜ್ ವ್ಯವಸ್ಥೆಗೆ ಕಾಂಗ್ರೆಸ್ ಕೊಡುಗೆ ಅಪಾರ ಎಂದು ಮಂಡ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಸೋಮವಾರ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡುತ್ತೇವೆ. ಜನವರಿ ಮೊದಲ ವಾರದಲ್ಲಿ ಕಾಂಗ್ರೆಸ್​ ಪಕ್ಷದಿಂದ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟು ಬಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡ್ತೇವೆ. ಯೋಜನೆ ಜಾರಿಗೆ ಆಗ್ರಹಿಸಿ 10ರಿಂದ 15 ದಿನ ಪಾದಯಾತ್ರೆ ನಡೆಯಲಿದೆ. ಮಂಡ್ಯ, ಮೈಸೂರು, ಹಾಸನ ಜಿಲ್ಲೆಯ ರೈತರಿಗೆ ಅನುಕೂಲ ಆಗಲಿದೆ. ಪರಿಷತ್​ ಚುನಾವಣೆ ನಂತರ ಪಾದಯಾತ್ರೆಗೆ ದಿನಾಂಕ ಪ್ರಕಟ ಮಾಡುತ್ತೇವೆ ಎಂದು ಡಿ‌.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಉಸಿರು ನಿಲ್ಲಿಸಬೇಕಾದರೆ ಚುನಾವಣೆ ಗೆಲ್ಲಬೇಕು ಎಂಬ ಯಡಿಯೂರಪ್ಪ ಹೇಳಿಕೆಗೆ ಡಿ‌.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪಗೆ ಒಳ್ಳೆಯದಾಗಲಿ. ಕುತ್ತಿಗೆ ಹಿಸುಕಿಬಿಟ್ಟು ಉಸಿರು ನಿಲ್ಲಿಸುತ್ತೇನೆ ಅಂದ್ರೆ ಹೇಗೆ. ಬಿಜೆಪಿಯವರಿಗೆ ಯಾರು ಬೇಕಾದರೂ ಬೆಂಬಲ ನೀಡಲಿ. ನಾವು ನೀತಿ, ಸಿದ್ಧಾಂತದ ಮೇಲೆ ಚುನಾವಣೆ ಮಾಡುತ್ತಿದ್ದೇವೆ. ಕುಮಾರಸ್ವಾಮಿ ಅಭಿಪ್ರಾಯ ಇಂದು ಒಂದು ಇರುತ್ತದೆ, ನಾಳೆ ಒಂದಿರುತ್ತೆ, ನಾಡಿದ್ದು ಮತ್ತೊಂದು ಇರುತ್ತದೆ. ಹೆಚ್​ಡಿಕೆ ಹೇಳಿಕೆ ಗಂಭೀರವಾಗಿ ಪರಿಗಣಿಸುವುದು ಬೇಡ. ಜೆಡಿಎಸ್​ನವರು ಯಾರಿಗಾದರೂ ಸಹಕಾರ ನೀಡಲಿ ಎಂದು ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ; ಈಶ್ವರಪ್ಪ ಪ್ರಶ್ನೆಗೆ ಡಿಕೆ ಶಿವಕುಮಾರ್ ತಿರುಗೇಟು

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು