ಎಂಪಿ ಚುನಾವಣೆಗೆ ಸ್ಪರ್ಧಿಸಿದ್ದ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳು ಅನರ್ಹ
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಸ್ಪರ್ಧಿಸಿದ್ದ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳನ್ನು ಚುನಾವಣಾ ಆಯೋಗ ಅನರ್ಹಗೊಳಿಸಿದೆ.
ಮಂಡ್ಯ: ಕಳೆದ ಲೋಕಸಭಾ ಚುನಾವಣೆಯ (Lok sabha Election) ಸಂದರ್ಭದಲ್ಲಿ ದೇಶದ ಚಿತ್ತ ಮಂಡ್ಯ ಲೋಕಸಭಾ ಕ್ಷೇತ್ರದತ್ತ (Mandya Lok sabha Constituency) ನೆಟ್ಟಿತ್ತು. ಮಾಜಿ ಸಂಸದ, ದಿವಂಗತ ನಟ ಅಂಬರೀಶ್ ಅವರ ಪತ್ನಿ, ಸುಮಲತಾ ಅಂಬರೀಶ್ (Sumalatha Ambarish) ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಎದುರಾಳಿಯಾಗಿ ಜೆಡಿಎಸ್ನಿಂದ (JDS) ನಿಖಿಲ್ ಕುಮಾರಸ್ವಾಮಿ (Nikhil Kumarswamy) ಸ್ಪರ್ಧಿಸಿದ್ದರು. ಇವರಿಬ್ಬರ ಫೈಟ್ ಹೈ ವೋಲ್ಟೇಜ್ನಿಂದ ಕೂಡಿತ್ತು. ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಪ್ರತಿಸ್ಪರ್ಧಿಯಾಗಿ ಸುಮಲತಾ ಎಂಬ ಹೆಸರಿನ ಇನ್ನಿಬ್ಬರು ಸ್ಪರ್ಧೆ ಮಾಡಿದ್ದರು. ಇದರ ಹಿಂದೆ ಜೆಡಿಎಸ್ನ ಹುನ್ನಾರವಿತ್ತು. ಮತಗಳು ವಿಭಜನೆಯಾಗಾಲಿ, ಜನರಲ್ಲಿ ಗೊಂದಲ ಮೂಡಲಿ ಎಂದು ಜೆಡಿಎಸ್ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳನ್ನು ಪಕ್ಷೇತರವಾಗಿ ನಿಲ್ಲಿಸಿದೆ ಎಂದು ಆರೋಪ ಕೇಳಿಬಂದಿತ್ತು. ಇದು ಚುನಾವಣೆಯಲ್ಲಿ ಜೆಡಿಎಸ್ ಉರುಳಿಸಿದ ದಾಳವಾಗಿತ್ತು. ಈಗ ಚುನಾವಣಾ ಆಯೋಗ ಸುಮಲತಾ ಎಂಬ ಹೆಸರಿನ ಇಬ್ಬರು ಅಭ್ಯರ್ಥಿಗಳಿಗಳನ್ನು ಅನರ್ಹಗೊಳಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಖರ್ಚು ವೆಚ್ಚದ ಬಗ್ಗೆ ಸರಿಯಾದ ದಾಖಲಾತಿ ಸಲ್ಲಿಸದ ಹಿನ್ನೆಲೆ ಇಬ್ಬರು ಸುಮಲತಾ ಸೇರಿದಂತೆ ಮಂಡ್ಯ ಜಿಲ್ಲೆಯ 7 ಅಭ್ಯರ್ಥಿಗಳನ್ನ ಡಿಸ್ಕ್ವಾಲಿಫೈ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸುದೀಪ್, ಸುಮಲತಾ ಬಿಜೆಪಿ ಪರ ವಹಿಸಿದ ಬಳಿಕ ಯಶ್ ನಿಲುವೇನು? ಜನರಲ್ಲಿ ಮೂಡಿದೆ ಪ್ರಶ್ನೆ
ಅನರ್ಹಗೊಂಡ ಮಂಡ್ಯದ 7 ಸ್ಪರ್ಧಿಗಳು
ಅರವಿಂದ ಪ್ರೇಮಾನಂದ, ಎನ್.ಸಿ ಪುಟ್ಟೆಗೌಡ, ಸುಮಲತಾ ಟಿ.ಎಮ್ ಹೊಸುರು, ಎಮ್. ಸುಮಲತಾ, ಎಸ್.ಹೆಚ್. ಲಿಂಗೇಗೌಡ್, ಕೆ.ಆರ್. ಶಿವಮಾದೇಗೌಡ, ಬಿಎಸ್ ಗೌಡ.
ಕರ್ನಾಟಕ ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:25 pm, Tue, 11 April 23