AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ; ತೀವ್ರ ಆಕ್ರೋಶ

ನಿರಾಣಿ ಶುಗರ್ಸ್ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಸೌಕರ್ಯ ಒದಗಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಮುರುಗೇಶ್ ನಿರಾಣಿ ಗುತ್ತಿಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ; ತೀವ್ರ ಆಕ್ರೋಶ
ಮಂಡ್ಯ ಸಕ್ಕರೆ ಕಾರ್ಖಾನೆ ಮುಂದೆ ಪ್ರತಿಭಟನೆ
TV9 Web
| Edited By: |

Updated on: Sep 07, 2021 | 3:40 PM

Share

ಮಂಡ್ಯ: ಸಚಿವ ಮುರುಗೇಶ್ ನಿರಾಣಿ ಗುತ್ತಿಗೆಗೆ ಪಡೆದಿದ್ದ ಸಕ್ಕರೆ ಕಾರ್ಖಾನೆಗೆ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರದಲ್ಲಿರುವ ಸಕ್ಕರೆ ಕಾರ್ಖಾನೆಗೆ ರೈತ ಸಂಘದಿಂದ ಮುತ್ತಿಗೆ ಹಾಕಲಾಗಿದೆ. ಕಬ್ಬು ಬೆಳೆಗಾರರಿಗೆ ಸರಿಯಾಗಿ ಬಿಲ್ ಪಾವತಿ ಮಾಡ್ತಿಲ್ಲ. ಎತ್ತಿನ ಗಾಡಿಗಳಿಂದ ಕಬ್ಬು ಸಾಗಿಸಲು ಅವಕಾಶ ನೀಡುತ್ತಿಲ್ಲ. ರೈತರನ್ನು ಕತ್ತಲೆ ಕೋಣೆಗೆ ತಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ನಿರಾಣಿ ಶುಗರ್ಸ್ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರಿಗೆ ಸೌಕರ್ಯ ಒದಗಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಕೂಡ ಕಬ್ಬು ಬೆಳೆದ ರೈತರಿಗೆ ಸಿಹಿಗಿಂತ ಕಹಿ ಅನುಭವ ಹೆಚ್ಚಾಗಿದೆ. ಸಕ್ಕರೆ ಕಾರ್ಖಾನೆಯವರು ರೈತರ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡದೆ ಮನಸ್ಸಿಗೆ ಬಂದ ರೀತಿಯಲ್ಲಿ ಪ್ರತಿ ವರ್ಷವೂ ರೈತರಿಂದ ಕಬ್ಬು ಖರೀದಿ ಮಾಡುತ್ತಿದ್ದು, ರೈತರನ್ನು ಅಸಹಾಯರನ್ನಾಗಿ ಮಾಡಿದೆ. ಕಾರ್ಖಾನೆಯವರ ಈ ಧೋರಣೆಯನ್ನು ಪ್ರಶ್ನೆ ಮಾಡಬೇಕಾದ ಜಿಲ್ಲಾಡಳಿತ ಕಾರ್ಖಾನೆ ಮಾಲೀಕರ ಶಕ್ತಿಯ ಮುಂದೆ ಮಂಡಿಯೂರಿದ್ದು, ಇದು ಸಹಜವಾಗಿಯೇ ಈ ಭಾಗದ ಕಬ್ಬು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ಬೀದರ್ ಜಿಲ್ಲೆಯಲ್ಲಿ ರೈತರಿಗೆ ಕಹಿಯಾದ ಕಬ್ಬು ಸೂಕ್ತ ಬೆಲೆ ನಿಗದಿ, ಸಕಾಲಕ್ಕೆ ಕಬ್ಬು ಕಾರ್ಖಾನೆಗೆ ಸಾಗಿಸುವುದು ರೈತರಿಗೆ ಕನಸಿನ ಮಾತಾಗಿದೆ. ಮಾರುಕಟ್ಟೆಯಲ್ಲಿ 25 ಪೈಸೆ ಚಾಕ್​ಲೇಟ್​ ಸೇರಿ ಪ್ರತಿ ವಸ್ತುವಿಗೂ ಕೂಡಾ ಬೆಲೆ ನಿಗದಿ ಇದೆ. ಆದರೆ ವರ್ಷವಿಡಿ ಬೆವರು ಸುರಿಸಿ ಬೆಳೆದ ಕಬ್ಬಿಗೆ ಪ್ರತಿ ಟನ್​ಗೆ ಎಷ್ಟು ಬೆಲೆ ಎಂಬುವುದೇ ಗೊತ್ತಿಲ್ಲ ಕಾರ್ಖಾನೆ ಮಾಲೀಕರ ತೋಳ್ಬಲದ ಮುಂದೆ ಸರಕಾರಿ ಯಂತ್ರ ಮಂಡಿಯೂರಿದೆ.

ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಆಡಿದ್ದೇ ಆಟ ನಡೆಸಿದ್ದೆ ಕಾರುಬಾರು ಎಂಬಂಥ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಸಹಕಾರಿ ಹಾಗೂ ಖಾಸಗಿ ಸಕ್ಕರೆ ಕಾರ್ಖಾನೆಗಳ ಮೇಲೆ ಜಿಲ್ಲಾಡಳಿತ ಸರಕಾರಕ್ಕೆ ಹಿಡಿತವೆ ಇಲ್ಲದಂತಾಗಿದೆ. ಉಸ್ತುವಾರಿ ಸಚಿವರು, ಶಾಸಕರು ಯಾವತ್ತೂ ಇವುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ಹೀಗಾಗಿ ಕಬ್ಬು ಬೆಳೆದ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದ್ದು, ಬೆಲೆ ನಿಗದಿ ಮಾಡದಿದ್ದರೂ ಕಾರ್ಖಾನೆ ರೈತರು ಕಬ್ಬು ಹಾಕುತ್ತಿದ್ದು, ಕಾರ್ಖಾನೆಯವರು ಕೊಟ್ಟಷ್ಟು ಹಣ ಪಡೆಯಬೇಕು ಎಂದು ಕಬ್ಬು ಬೆಳೆದ ರೈತ ಬಸವರಾಜ್ ಅಳಲು ತೋಡಿಕೊಂಡಿದ್ದರು.

ಇದನ್ನೂ ಓದಿ: ಸಕ್ಕರೆ ಕಾರ್ಖಾನೆ ವಿರುದ್ಧ ಸಿಡಿದ್ದೆದ್ದ ರೈತ ಮುಖಂಡರು; ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ ಅಹೋರಾತ್ರಿ ಧರಣಿ

ಇದನ್ನೂ ಓದಿ: Health Tips: ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಸರಳ ವಿಧಾನವನ್ನು ಅನುಸರಿಸಿ