AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಡ್ಯ : ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತರಿಂದ ಧರಣಿ

ಮಂಡ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಇದಕ್ಕೆ ಬೇಸತ್ತ ರೈತರು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನೋಂದಣಿ ವಿಚಾರಕ್ಕೆ ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತ ಸಂಘಟನೆಗಳು ಆರೋಪಿಸುತ್ತಿವೆ.

ಮಂಡ್ಯ : ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತರಿಂದ ಧರಣಿ
ಸಬ್ ರಿಜಿಸ್ಟಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತರಿಂದ ಧರಣಿ
TV9 Web
| Edited By: |

Updated on:Aug 16, 2022 | 4:02 PM

Share

ಮಂಡ್ಯ: ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ(Mandya Sub Registrar Office) ಮತ್ತೆ ಲಂಚಬಾಕತನಕ್ಕೆ ಹೆಸರುವಾಸಿಯಾಗಿದೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕುರುಡು ಕಾಂಚಾಣದ್ದೆ ಸದ್ದು ಗದ್ದಲವಾಗಿದೆ. ಯಾವುದೇ ಕೆಲಸ ಆಗಬೇಕಂದ್ರೂ ಹಣವನ್ನ ಕೊಡಲೇ ಬೇಕಂತೆ. ಹೀಗಾಗಿ ಇಂದು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಭಾರೀ ಹೈ ಡ್ರಾಮ ನಡೆದಿದೆ. ರೈತಪರ ಸಂಘಟನೆಯಿಂದ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.

ಮಂಡ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹೀಗಾಗಿ ಇದಕ್ಕೆ ಬೇಸತ್ತ ರೈತರು ಮಂಡ್ಯ ಸಬ್ ರಿಜಿಸ್ಟ್ರಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನೋಂದಣಿ ವಿಚಾರಕ್ಕೆ ಸಬ್ ರಿಜಿಸ್ಟ್ರಾರ್ ರುಕ್ಮಿಣಿ ಲಂಚ ಪಡೆದಿದ್ದಾರೆಂದು ರೈತ ಸಂಘಟನೆಗಳು ಆರೋಪಿಸುತ್ತಿವೆ. ಪ್ರತಿ ಕೆಲಸಕ್ಕೆ ಕಂಪ್ಯೂಟರ್ ಆಪರೇಟರ್ ಗೆ ಇಂತಿಷ್ಟು ಹಣ ಕೊಡ್ಲೆ ಬೇಕು ಎಂದು ಚೆನ್ನಿ ಎಂಬುವವರು ಉಪ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ರೈತ ಸಂಘಟನೆಗಳ ಆರೋಪಕ್ಕೆ ಸಬ್ ರಿಜಿಸ್ಟ್ರಾರ್ ರುಕ್ಮುಣಿ ಸ್ಪಷ್ಟನೆ ನೀಡಿದ್ದಾರೆ. ನಾವು ಯಾರ ಬಳಿಯೂ ಲಂಚ ಪಡೆದಿಲ್ಲ ಇದೆಲ್ಲ ಬ್ರೋಕರ್ ಗಳ ಕೆಲಸವೆಂದು ಜಾರಿಕೊಂಡಿದ್ದಾರೆ. ನಾವು ಯಾರ ಬಳಿಯೂ ಲಂಚವನ್ನ ಹಣವನ್ನ ಪಡೆದಿಲ್ಲ. ಯಾರು ಯಾರಿಗೆ ಹಣಕೊಟ್ಟಿದ್ದಾರೆಂಬುದು ಗೊತ್ತಿಲ್ಲ ಅವರು ಹೆಸರನ್ನ ಸಹ ಹೇಳದೆ ಆರೋಪಿಸುತ್ತಿದ್ದಾರೆ. ನಾವು ನಾಮ ಫಲಕವನ್ನೆ ಹಾಕಿದ್ದೇವೆ ನೇರ ಸಂಪರ್ಕ ಮಾಡಿ ಎಂದು ಆದ್ರೆ ಯಾರು ನೇರವಾಗಿ ಬರೋದಿಲ್ಲ ಇದು ಸಮಸ್ಯೆ. ನಮ್ಮ ಹೆಸರನ್ನ ಹೇಳಿ ಕೊಂಡು ಬ್ರೋಕರ್ ಗಳು ಹಣ ಪಡೆಯುತ್ತಿದ್ದಾರೆ. ಅಂತವರು ಯಾರು ಅಂತ ತಿಳಿದು ಬಂದ್ರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಉಪ ನೊಂದಣಾಧಿಕಾರಿ ರುಕ್ಮಿಣಿ ಟಿವಿ9 ಗೆ ಪ್ರತಿಕ್ರಿಯೆ ನೀಡಿದ್ರು.

ಮತ್ತೊಂದು ಕಡೆ ಈ ಬಗ್ಗೆ ದೂರುದಾರ ಚೆನ್ನಿ ಕೂಡ ತಮ್ಮ ಆರೋಪಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಡ್ಯದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏನೇ ಕೆಲಸ ಆಗ್ಬೇಕು ಅಂದ್ರೆ ಹಣವನ್ನ ಕೊಡ್ಲೇ ಬೇಕು. ಕಂಪ್ಯೂಟರ್ ಆಪರೇಟರ್ ರಿಂದ ಇಡ್ಕೊಂಡು ಸಬ್ ರಿಜಿಸ್ಟ್ರಾರ್ ವರ್ಗೂ ಪ್ರತಿಯೊಬ್ರಿಗೂ ಲಂಚ ಕೊಡ್ಬೇಕು 300 ರೂಪಾಯಿ ಲಂಚ ಕೊಟ್ರೆ ಅಷ್ಟೇ ಕೆಲಸ ಆಗುತ್ತೆ ಇಲ್ಲಾಂದ್ರೆ ಆಗೋಲ್ಲ. ನೋಂದಣಿ ಮಾಡಿಸುವುದರಿಂದ ಹಿಡಿದು ಪ್ರತಿಯೊಂದಕ್ಕು ಹಣ ಕೊಟ್ಟು ಸಾಕಾಗಿದೆ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಚೆನ್ನಿ ಆರೋಪಿಸಿದ್ದಾರೆ.

ಉಪ ನೊಂದಣಾಧಿಕಾರಿ ರುಕ್ಮಿಣಿಗೆ ಮೌಖಿಕ ದೂರು ನೀಡಿದ ರೈತರು

ಉಪ ನೊಂದಣಾಧಿಕಾರಿ ರುಕ್ಮಿಣಿಗೆ ರೈತರು ಮೌಖಿಕ ದೂರು ನೀಡಿದ್ದಾರೆ. ಕಂಪ್ಯೂಟರ್ ಆಪರೇಟರ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೈಸೂರು ಮೂಲದ ರುಕ್ಮಿಣಿ ಕಳೆದೊಂದು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ್ರು. ಇಲ್ಲಿಯವರೆಗೂ ಸಾಕಷ್ಟು ಬಾರಿ ಆರೋಪ ಇವರ ಸಿಬ್ಬಂದಿಯಿಂದ ಕೇಳಿ ಬಂದಿತ್ತು. ದಿನ ನಿತ್ಯ ಮೈಸೂರಿನಿಂದ ಮಂಡ್ಯಕ್ಕೆ ರುಕ್ಮಿಣಿ ಬಂದು ಹೋಗುತ್ತಾರೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಾಕಷ್ಟು ಬ್ರೋಕರ್ ಗಳಿದ್ದಾರೆಂಬ ಆರೋಪ ಈ ಹಿಂದೆ ಕೇಳಿ ಬಂದಿತ್ತು. ಉಪ ನೊಂದಣಾಧಿಕಾರಿ ರುಕ್ಮಿಣಿಯ ಹೆಸರು ಹೇಳಿ ಕೊಂಡು ಹಣ ಪಡೆಯುತ್ತಾರೆಂಬ ಆರೋಪವೂ ಇದೆ. ಸದ್ಯ ರೈತರು ಉಪ ನೊಂದಣಾಧಿಕಾರಿ ರುಕ್ಮಿಣಿಗೆ ಮೌಖಿಕವಾಗಿ ದೂರು ಕೊಟ್ಟು ಹೊರ ನಡೆದಿದ್ದಾರೆ.

Published On - 3:34 pm, Tue, 16 August 22

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ