ಭ್ರೂಣ ಹತ್ಯೆ ಪತ್ತೆ: ಇದು ಸಮಾಜಘಾತುಕ ಕೆಲಸ, ಇದನ್ನ ಖಂಡಿಸುತ್ತೇನೆ: ಸಚಿವ ಚಲುವರಾಯಸ್ವಾಮಿ

ಬೆಂಗಳೂರು ನಗರದಲ್ಲಿ ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡಿಸುತ್ತಿದ್ದ ಜಾಲವನ್ನು ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಪತ್ತೆಹಚ್ಚುವ ಮೂಲಕ ಇಬ್ಬರು ವೈದ್ಯರು ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಸದ್ಯ ಈ ಕೇಸ್​ ವಿಚಾರವಾಗಿ ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಇದು ಸಮಾಜಘಾತುಕ ಕೆಲಸ. ಇದನ್ನ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.

ಭ್ರೂಣ ಹತ್ಯೆ ಪತ್ತೆ: ಇದು ಸಮಾಜಘಾತುಕ ಕೆಲಸ, ಇದನ್ನ ಖಂಡಿಸುತ್ತೇನೆ: ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ
Edited By:

Updated on: Nov 26, 2023 | 3:37 PM

ಮಂಡ್ಯ, ನವೆಂಬರ್​​ 26: ಭ್ರೂಣ ಹತ್ಯೆ ಇದು ಸಮಾಜಘಾತುಕ ಕೆಲಸ. ಇದನ್ನ ಖಂಡಿಸುತ್ತೇನೆ. ಈ ರೀತಿ ಯಾರೂ ಮಾಡಬಾರದು, ಪ್ರೋತ್ಸಾಹ ಕೊಡುವುದೂ ತಪ್ಪು. ರಾಜ್ಯದಲ್ಲಿ ಎಲ್ಲೇ ಇಂಥ ಘಟನೆ ನಡೆದ್ರೆ ಕಠಿಣಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಸಚಿವ ಚಲುವರಾಯಸ್ವಾಮಿ (chaluvaraya swamy) ಹೇಳಿದ್ದಾರೆ. ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಭ್ರೂಣ ಹತ್ಯೆ ಪತ್ತೆ ಪ್ರಕರಣವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್‌ ಈ ಬಗ್ಗೆ ಗಮನಹರಿಸುತ್ತಾರೆ ಎಂದು ಹೇಳಿದ್ದಾರೆ.

ಸೂಕ್ತ ಕ್ರಮವಾಗುತ್ತದೆ, ಎಲ್ಲದಕ್ಕೂ ಕಡಿವಾಣ ಹಾಕಲಾಗುವುದು. ವಿಪಕ್ಷಗಳು ಈ ಹಿಂದೆ ಆಡಳಿತ ಮಾಡಿದಾಗ ಇದಕ್ಕೆ ಕಡಿವಾಣ ಹಾಕಿಲ್ಲ. ನಾವು ಮಾಡುವಾಗ ಮಾಹಿತಿ ನೀಡಿ ಪ್ರೋತ್ಸಾಹ ಕೊಡುವ ಕೆಲಸಮಾಡಬೇಕು. ಅದನ್ನು ಬಿಟ್ಟು ವೈಯಕ್ತಿಕ ಟೀಕೆಗೆ ಮುಂದಾಗುತ್ತಾರೆ ಎಂದಿದ್ದಾರೆ.

ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಸಿಎಂ ಮಾಡುತ್ತಾರೆ: ಚಲುವರಾಯಸ್ವಾಮಿ

ಜಾತಿಗಣತಿ ವರದಿ ಜಾರಿ ವಿಚಾರವಾಗಿ ಮಾತನಾಡಿದ ಅವರು, ಜಾತಿ ಗಣತಿ ಯಾರ ಪರ, ಯಾರ ವಿರೋಧ ಯಾರಿಗೂ ಅನ್ಯಾಯ ಮಾಡುವ ಪ್ರಶ್ನೆ ಈ ಸರ್ಕಾರದಲ್ಲಿ ಮಾಡಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಈ ರಾಜ್ಯದಲ್ಲಿ ಎಲ್ಲರಿಗೂ ನ್ಯಾಯಕೊಡಿಸುವ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಬೆಂಗಳೂರು: 2 ವರ್ಷದಲ್ಲಿ 900 ಹೆಣ್ಣು ಭ್ರೂಣ ಹತ್ಯೆ: 2 ವೈದ್ಯರು ಸೇರಿದಂತೆ 9 ಆರೋಪಿಗಳ ಬಂಧನ

ಬೇರೆ ಬೇರೆ ಕಾರಣಕ್ಕೆ ಆಯಾ ಸಮಾಜದವರು ಆತಂಕದಲ್ಲಿ ಹೇಳಬಹುದು. ನನಗೆ ಸಿದ್ದರಾಮಯ್ಯನವರ ಮೇಲೆ ನಂಬಿಕೆ ಇದೆ. ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡಿ ಜಾರಿಗೊಳಿಸುತ್ತಾರೆ ಎಂದರು.

ಇದೊಂದು ದೊಡ್ಡ ಅಪರಾಧ: ಶಾಸಕ ದರ್ಶನ್ ಪುಟ್ಟಣ್ಣಯ್ಯ

ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಪೊಲೀಸರಿಂದ ಭ್ರೂಣ ಹತ್ಯೆ ಪತ್ತೆ ಪ್ರಕರಣ ವಿಚಾರವಾಗಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಮೇಲುಕೋಟೆ ಕ್ಷೇತ್ರ ವ್ಯಾಪ್ತಿಗೆ ಬರುವ ಹಾಡ್ಯ ಗ್ರಾಮದಲ್ಲಿ ದಂಧೆ ನಡೆಸಿದ್ದರು. ಇದೊಂದು ದೊಡ್ಡ ಅಪರಾಧ. ಯಾರು ಇದರಲ್ಲಿ ಭಾಗಿಯಾಗಿದ್ದಾರೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದ ಸ್ಥಳ ಪತ್ತೆಹಚ್ಚಿದ ಬೆಂಗಳೂರು ಪೊಲೀಸರು

ಈ ಕಾಲದಲ್ಲೂ ಈ ತರಹದ ಕೆಲಸ ಮಾಡಿದ್ದಾರೆ ಅಂದರೆ ನಂಬಕ್ಕಾಗಲ್ಲ. ಈ ಕಾಲದಲ್ಲೂ ಈ ರೀತಿ ನಡೆದಿರುವುದು ದೊಡ್ಡ ಅಪರಾಧ. ಎಲ್ಲಾ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮವಾಗಲಿ, ತಕ್ಕ ಶಿಕ್ಷೆಯಾಗಲಿ. ನನಗೆ ಇವಾಗ ವಿಚಾರ ಗೊತ್ತಾಗಿದೆ ನಾನೇ ನಿಂತು ಅಧಿಕಾರಿಗಳ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Prashantha B

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More
Follow Us