Free Electricity: ಎಲೆಕ್ಟ್ರಿಕ್ ಬೈಕ್ ಕೊಳ್ಳಲು ಮುಗಿಬಿದ್ದ ಗ್ರಾಹಕರು; ಡೆಲವರಿ ನೀಡುವ ಬರದಲ್ಲಿ ಓಲಾ ಕಂಪನಿ ಎಡವಟ್ಟು ಬಹಿರಂಗ
ಉಚಿತ 200 ಯ್ಯೂನಿಟ್ ವಿದ್ಯುತ್ ಘೋಷಣೆ ಹಿನ್ನೆಲೆ ಎಲೆಕ್ಟ್ರಿಕ್ ಬೈಕ್ ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಗ್ರಾಹಕರೇ ಹೀಗೆ ಎಲೆಕ್ಟ್ರಿಕ್ ಬೈಕ್ ಕೊಳ್ಳವಾಗ ಎಚ್ಚರವಹಿಸಿ. ಏಕೆಂದರೇ ಹುಮ್ಮಸ್ಸಿನಲ್ಲಿ ಬೈಕ್ಕೊಂಡ ಮೇಲೆ ಅದರಲ್ಲಿ ತಾಂತ್ರಿಕ ದೋಷ ಉಂಟಾಗಬಹುದು.
ಮಂಡ್ಯ: ಉಚಿತ 200 ಯುನಿಟ್ ವಿದ್ಯುತ್ (Free Electricity) ಘೋಷಣೆ ಹಿನ್ನೆಲೆ ಎಲೆಕ್ಟ್ರಿಕ್ ಬೈಕ್ (Electric Bike) ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಗ್ರಾಹಕರೇ ಹೀಗೆ ಎಲೆಕ್ಟ್ರಿಕ್ ಬೈಕ್ ಕೊಳ್ಳವಾಗ ಎಚ್ಚರವಹಿಸಿ. ಏಕೆಂದರೇ ಹುಮ್ಮಸ್ಸಿನಲ್ಲಿ ಬೈಕ್ಕೊಂಡ ಮೇಲೆ ಅದರಲ್ಲಿ ತಾಂತ್ರಿಕ ದೋಷ ಉಂಟಾಗಬಹುದು. ಹೌದು ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಓಲಾ ಶೋರೂಂ ಗ್ರಾಹಕರಿಗೆ ಡೆಲವರಿ ನೀಡುವ ಎಲೆಕ್ಟ್ರಿಕ್ ಬೈಕ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದೆ. ಓಲಾ ಬೈಕ್ಗಳು ಇದ್ದಕ್ಕಿದ್ದಂತೆ ಹ್ಯಾಂಡಲ್ ಲಾಕ್ ಆಗುತ್ತಿವೆ.
ಓಮ್ಮೆ ಹ್ಯಾಂಡಲ್ ಲಾಕ್ ಆದರೆ ಟೆಕ್ನಿಶಿಯನ್ ಬಂದೇ ಲಾಕ್ ಓಪನ್ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ಎಲೆಕ್ಟ್ರಿಕ್ ಬೈಕ್ ಕೊಂಡ ಮಾಲೀಕರು ತಾಂತ್ರಿಕ ಸಮಸ್ಯೆಯಿಂದ ಪರದಾಡುತ್ತಿದ್ದಾರೆ. ಈ ಬಗ್ಗೆ ಶೋರೂಂಗೆ ಹೋಗಿ ಕೇಳಿದರು ಪರಿಹಾರ ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ವಿಸ್ ಸೆಂಟರ್ನಲ್ಲಿ ಶೋರೊಂ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ: Gruha Jyoti Scheme: ಉಚಿತ ವಿದ್ಯುತ್ ಪಡೆಯಲು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವುದೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಳಗಾವಿಯಲ್ಲಿ ಎಲೆಕ್ಟ್ರಿಕ್ ವಸ್ತುಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಬೈಕ್ಗಳು ಮಾರಾಟ ಆಗುತ್ತಿವೆ. ಈವರೆಗೂ ದಿನಕ್ಕೆ ಎರಡರಿಂದ ಮೂರು ಮಾರಾಟ ಆಗುತ್ತಿದ್ದ ಬೈಕ್ಗಳು ಇದೀಗ ದಿನಕ್ಕೆ ಎಂಟರಿಂದ ಹತ್ತು ಮಾರಾಟ ಆಗುತ್ತಿದ್ದವು. ದಿನಕ್ಕೆ ಮೂವತ್ತರಷ್ಟು ಜನ ಬಂದು ಬೈಕ್ಗಳ ಕುರಿತು ವಿಚಾರಿಸುತ್ತಿದ್ದು ಅದರಲ್ಲಿ ಸಾಕಷ್ಟು ಜನ ಬೈಕ್ ಕೊಂಡುಕೊಳ್ಳುತ್ತಿದ್ದಾರೆ ಅಂತಾ ಡೀಲರ್ ಕರ್ಲೇಕರ್ ಎಂಬುವವರು ಮಾಹಿತಿ ನೀಡಿದ್ದರು.
ಇನ್ನೂ ಕಳೆದ ಹದಿನೈದು ದಿನಗಳಿಂದ ಈಚೆಗೆ ಹೆಚ್ಚಿನ ಪ್ರಮಾಣದಲ್ಲಿ ಇಲೆಕ್ಟ್ರಿಕಲ್ ಬೈಕ್ಗಳು ಮಾರಾಟವಾಗಿದ್ದವು. ಒಂದು ಬಾರಿ ಚಾರ್ಜ್ ಮಾಡಿದರೇ ಎರಡು ಯುನಿಟ್ ನಷ್ಟು ವಿದ್ಯುತ್ ಖರ್ಚಾಗುತ್ತಿದ್ದು ಹೀಗಾಗಿ ಸಾಕಷ್ಟು ಜನ ಬೈಕ್ ಕೊಂಡುಕೊಳ್ಳುತ್ತಿದ್ದರು. ಇನ್ನೂ ಕೆಲ ದಿನಗಳಿಗೆ ಆಗುವಷ್ಟು ಸ್ಟಾಕ್ ಇದ್ದು ಇದೇ ರೀತಿ ಬೇಡಿಕೆ ಮುಂದುವರೆದರೇ ಸ್ಟಾಕ್ ಖಾಲಿಯಾಗಲಿದೆ ಎಂದು ಡೀಲರ್‌ಗಳು ಸಂತಸ ವ್ಯಕ್ತಪಡಿಸಿದ್ದರು.
ಹಾಸನದಲ್ಲೂ ಹೆಚ್ಚಿದ ಎಲೆಕ್ಟ್ರಿಕ್ ಬೈಕ್ ಬೇಡಿಕೆ
ಹಾಸನ: 200 ಯುನಿಟ್ ವರೆಗೆ ಉಚಿತ ವಿದ್ಯುತ್ ಕೊಡುಗೆಯಿಂದ ಎಲೆಕ್ಟ್ರಾನಿಕ್ ಬೈಕ್ ಖರೀದಿ ಕಡೆಗೆ ಜನರ ಒಲವು ಹೆಚ್ಚಿದೆ. ದುಬಾರಿ ಪೆಟ್ರೋಲ್ ಬೆಲೆಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ವಾಹನ ಖರೀದಿಗೆ ಹಾಸನದಲ್ಲಿ ಡಿಮ್ಯಾಂಡ್ ಹೆಚ್ಚಿತ್ತು. ಎರಡು ಯುನಿಟ್ ಬಳಸಿದ್ರೆ 80.ಕಿಲೋಮೀಟರ್ ಪ್ರಯಾಣ ಮಾಡಬಹುದು. ಕೇವಲ 6 ರೂಗೆ 80. ಕಿಲೋಮೀಟರ್ ಸಂಚಾರ, ಅದೂ ಕೂಡ ಕರೆಂಟ್ ಉಚಿತವಾಗಿ ಸಿಗುವುದರಿಂದ ಹೆಚ್ಚಿನ ಲಾಭ ಹಿನ್ನೆಲೆಯಲ್ಲಿ ಜನರಲ್ಲಿ ಆಸಕ್ತಿ ಹೆಚ್ಚಿತ್ತು. ಎಲೆಕ್ಟ್ರಾನಿಕ್ ಬೈಕ್ ಗಳ ಖರೀದಿಗೆ ಜನ ಮುಗಿಬಿದ್ದಿದ್ದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Sun, 18 June 23