ರಸ್ತೆ ಬದಿಯಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಚಹಾ ಸವಿದ ಹೆಚ್ಡಿ ಕುಮಾರಸ್ವಾಮಿ
HD Kumaraswamy: ಬೆಂಗಳೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಟೀ ಸೇವಿಸಿದ್ದಾರೆ. ಟೀ ಕುಡಿದು ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಸಕ ಸುರೇಶ್ ಗೌಡ, ಎಂಎಲ್ಸಿ ಅಪ್ಪಾಜಿಗೌಡ ಸಾಥ್ ಕೊಟ್ಟಿದ್ದಾರೆ.
ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ರಸ್ತೆ ಬದಿಯಲ್ಲಿ, ನೂರಾರು ಕಾರ್ಯಕರ್ತರ ಜೊತೆಗೂಡಿ ಚಹಾ ಸವಿದಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದ ರಸ್ತೆ ಬದಿ ಟೀ ಕ್ಯಾಂಟೀನ್ನಲ್ಲಿ ಕುಮಾರಸ್ವಾಮಿ ಟೀ ಸೇವನೆ ಮಾಡಿದ್ದಾರೆ. ಬೆಂಗಳೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಟೀ ಸೇವಿಸಿದ್ದಾರೆ. ಟೀ ಕುಡಿದು ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಗೆ ಶಾಸಕ ಸುರೇಶ್ ಗೌಡ, ಎಂಎಲ್ಸಿ ಅಪ್ಪಾಜಿಗೌಡ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಕುಮಾರಸ್ವಾಮಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಕಾರ್ಯಕರ್ತರು ಮುಗಿಬಿದ್ದಿದ್ದಾರೆ.
ಅಪಘಾತದಲ್ಲಿ ಮಕ್ಕಳಿಬ್ಬರು ಸೇರಿ ಮೂವರು ಸಾವು ಹಿನ್ನೆಲೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಕಾರ್ಯಕರ್ತನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ, ಕುಮಾರಸ್ವಾಮಿ ಭಾವುಕರಾಗಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಹೊಣಕೆರೆ ಗ್ರಾಮದಲ್ಲಿ ಕಾರ್ಯಕರ್ತನ ಅಂತಿಮ ದರ್ಶನವನ್ನು ಕುಮಾರಸ್ವಾಮಿ ಪಡೆದುಕೊಂಡಿದ್ದು, ಆ ವೇಳೆ ಅವರು ಭಾವುಕರಾಗಿದ್ದಾರೆ.
ನಿನ್ನೆ ರಾತ್ರಿ ನಿಂತಿದ್ದ ಲಾರಿಗೆ ಸ್ಕೂಟಿ ಡಿಕ್ಕಿ ಹೊಡೆದು ಜೆಡಿಎಸ್ ಮುಖಂಡ ಆನಂದ್ ಕುಮಾರ್ ಸಾವನ್ನಪ್ಪಿದ್ದರು. ಸ್ಕೂಟಿಯಲ್ಲಿ ಇದ್ದ ಇಬ್ಬರು ಮೊಮ್ಮಕ್ಕಳು ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ದುರ್ಘಟನೆಗೆ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಇಂದು ಅಂತ್ಯಕ್ರಿಯೆಗೂ ಮುನ್ನ ಅಂತಿಮ ದರ್ಶನ ಪಡೆದಿದ್ದಾರೆ. ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಆನಂದ್‌ಕುಮಾರ್. ಅವರನ್ನು ಕಳೆದುಕೊಂಡು ತುಂಬಾ ನೋವು ಉಂಟಾಗಿದೆ. ಆ ಪುಟ್ಟ ಮಕ್ಕಳು ಸಾವನ್ನಪ್ಪಿರುವುದು ಬಹಳ ದುಃಖ ಎನಿಸುತ್ತಿದೆ. ದೇವರು ಯಾಕೆ ಇಷ್ಟು ಬೇಗ ಕರೆದುಕೊಳ್ಳುತ್ತಾನೆ ಎಂದು ನೋವಾಗುತ್ತದೆ ಎಂದು ಅಂತಿಮ ದರ್ಶನದ ಬಳಿಕ ಕುಮಾರಸ್ವಾಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ ಮನೆ ನಿರ್ಮಾಣ: ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಏನಂದ್ರು?
ಇದನ್ನೂ ಓದಿ: ಬಾಗೇಪಲ್ಲಿ ಕ್ಷೇತ್ರಕ್ಕೆ ಟಿಕೆಟ್ ಘೋಷಿಸಿದ ಹೆಚ್ಡಿ ಕುಮಾರಸ್ವಾಮಿ! ಕೂಸು ಹುಟ್ಟೋಕೆ ಮುಂಚೆ ಕುಲಾವಿ ಹೊಲಿಸಿದ ಜೆಡಿಎಸ್ ಮುಖಂಡ
Published On - 3:19 pm, Sun, 5 September 21