ಮಂಡ್ಯ: ಸೈಟ್ ಆಸೆ ತೋರಿಸಿ ಕಾಂಗ್ರೆಸ್ ನಾಯಕನಿಂದ ಪೊಲೀಸರಿಗೆ ವಂಚನೆ (fraud case) ಆರೋಪ ಮಾಡಲಾಗಿದೆ. ದಿ. ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಆರೋಪ ಕೇಳಿಬಂದಿದ್ದು, 2009ರಲ್ಲಿ ಅಮರಾವತಿ ಚಂದ್ರಶೇಖರ್ ಒಡೆತನದ ಅಮರಾವತಿ ಡೆವಲಪರ್ಸ್ ಸೈಟ್ ಹಂಚಿಕೆ ಭರವಸೆ ನೀಡಿದ್ದರು. ಪೊಲೀಸ್ ಗೃಹ ನಿರ್ಮಾಣ ಸಹಕಾರ ಸಂಘ ಮಂಡ್ಯದ ಬೂದನೂರು ಬಳಿ 27 ಎಕರೆ ಜಮೀನು ಖರೀದಿಸಲಾಗಿತ್ತು. 507 ಸದಸ್ಯರಿಂದ ತಲಾ 4.20 ಲಕ್ಷ ರೂ.ನಂತೆ 18.82 ಕೋಟಿ ಸಂದಾಯ ಮಾಡಲಾಗಿದೆ. ಲೇಔಟ್ ಅಭಿವೃದ್ಧಿಪಡಿಸಿ 507 ನಿವೇಶನ ಹಂಚಬೇಕಾಗಿತ್ತು. 13 ವರ್ಷಗಳಿಂದ ಇಲ್ಲಸಲ್ಲದ ಕಾರಣ ನೀಡಿ ಸೈಟ್ ಹಂಚಲು ಹಿಂದೇಟು ಹಾಕಿದ್ದಾರೆ.
ಗೃಹನಿರ್ಮಾಣ ಸಹಕಾರ ಸಂಘದ ಗಮನಕ್ಕೆ ತರದೇ ಜಮೀನಿನ ಮೇಲೆ 5 ಕೋಟಿ ಸಾಲ ಪಡೆದು ವಂಚಿಸಿರುವ ಆರೋಪ ಮಾಡಿದ್ದಾರೆ. ನಿವೇಶನ ಸಿಗದೆ ಹಾಲಿ, ನಿವೃತ್ತ ಪೊಲೀಸ್ ಅಧಿಕಾರಿಗಳು ಪರದಾಡುವಂತಾಗಿದೆ. ಸೈಟ್ ನೀಡುವಂತೆ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದಿಂದ ಆಗ್ರಹಿಸಲಾಗಿದೆ. ಲೇ ಔಟ್ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಮಾರ್ಚ್ ವೇಳೆಗೆ ಸೈಟ್ಗಳ ಹಂಚಿಕೆ ಮಾಡುವುದಾಗಿ ಅಮರಾವತಿ ಚಂದ್ರಶೇಖರ್ ಈ ಮುಂಚೆಯೂ ಹೇಳಿದ್ದರು. ಈಗಲೂ ಅದೇ ರೀತಿ ಹುಸಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪ: ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR
ದೇವನಹಳ್ಳಿ: ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ ವಿರುದ್ಧ ಇತ್ತೀಚೆಗೆ ವಂಚನೆ ಆರೋಪ ಕೇಳಿಬಂದಿದ್ದು, ಲಕ್ಷ ಲಕ್ಷ ಹಣ ನೀಡದೆ ಅಶ್ಲೀಲ ಪದಗಳಿಂದ ಬೈದು, ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಜೆಡಿಎಸ್ ಅಭ್ಯರ್ಥಿ ಮುನೇಗೌಡ ಮಾತನಾಡಿದ್ದಾರೆ ಎನ್ನಲಾದ ಕೆಲ ಆಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಬಿಜಾಪುರ ಮೂಲದ ಉದ್ಯಮಿಗೆ ಹಣ ನೀಡುವ ವಿಚಾರಕ್ಕೆ ದಮ್ಕಿ ಹಾಕಿ ಬೈಗುಳ ಆರೋಪ ಮಾಡಲಾಗಿತ್ತು. 69 ಲಕ್ಷ ರೂ. ಹಣ ನೀಡದೆ ಮೋಸ ಮಾಡಿ ಬೆದರಿಕೆ ಹಾಕಿದ್ದಾರೆನ್ನಲಾಗಿತ್ತು.
ಬೆಂಗಳೂರು: ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಇತ್ತೀಚೆಗೆ FIR ದಾಖಲು ಮಾಡಲಾಗಿತ್ತು. ಕಂಪನಿ ಪಾರ್ಟನರ್ ಆಗಿರುವ ಪ್ರಭಾವತಿ ಎಂಬುವವರಿಂದ ದೂರು ನೀಡಲಾಗಿತ್ತು. ಪಾರ್ಟನರ್ಗೆ ವಂಚಿಸಿ ಅಕ್ರಮವಾಗಿ 23 ಸೈಟ್ ಮಾರಾಟ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ರೈತರಿಗೆ ಡ್ರ್ಯಾಗನ್ ಫ್ರೂಟ್ ವಂಚನೆ ಆರೋಪ: ಕಂಪನಿ ನೀಡಿದ ಸ್ಪಷ್ಟನೆ ಏನು?
ಆರ್.ಶಂಕರ್ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದು, ಕಂಪನಿ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು. ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿತ್ತು. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.