AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಡ್ರ್ಯಾಗನ್ ಫ್ರೂಟ್ ವಂಚನೆ ಆರೋಪ: ಕಂಪನಿ ನೀಡಿದ ಸ್ಪಷ್ಟನೆ ಏನು?

ದಾವಣಗೆರೆ ಮೂಲದ ಭರಣಿ ಆಗ್ರೊ ಟೆಕ್ ಕಂಪನಿ ರಾಯಚೂರು ಮೂಲದ ರೈತರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಭರಣಿ ಕಂಪನಿಯಿಂದ ರೈತರಿಗೆ ಮೋಸವಾಗಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ರೈತರಿಗೆ ಡ್ರ್ಯಾಗನ್ ಫ್ರೂಟ್ ವಂಚನೆ ಆರೋಪ: ಕಂಪನಿ ನೀಡಿದ ಸ್ಪಷ್ಟನೆ ಏನು?
ಭರಣಿ ಆಗ್ರೊ ಟೆಕ್ ಕಂಪನಿ ಮುಖ್ಯಸ್ಥೆ ನಯನಾ
TV9 Web
| Edited By: |

Updated on:Feb 22, 2023 | 3:36 PM

Share

ರಾಯಚೂರು: ಯುಟ್ಯೂಬ್​ನಲ್ಲಿನ ವಿಡಿಯೋ ನೋಡಿ ಡ್ರಾಗನ್ ಫ್ರೂಟ್ ಆಫರ್ ನಿಂದ ಹಣ ಕಳೆದುಕೊಂಡಿದ್ದಾಗಿ ರೈತರು ಮಾಡಿರೊ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಭರಣಿ ಆಗ್ರೊ ಟೆಕ್ ಕಂಪನಿ ಎಚ್ಚೆತ್ತುಕೊಂಡಿದೆ. ದಾವಣಗೆರೆ ಮೂಲದ ಭರಣಿ ಆಗ್ರೊ ಟೆಕ್ ಕಂಪನಿ ರಾಯಚೂರು ಮೂಲದ ರೈತರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಭರಣಿ ಕಂಪನಿಯಿಂದ ರೈತರಿಗೆ ಮೋಸವಾಗಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

ಭರಣಿ ಆಗ್ರೊ ಟೆಕ್ ಕಂಪನಿ ಮುಖ್ಯಸ್ಥೆ ನಯನಾ ಅನ್ನೋರು ತಮ್ಮ ಕಂಪನಿ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ಮಾಡಿದ್ದಾರೆ. ರಾಯಚೂರು ಮೂಲದ ರೈತರ ಜೊತೆ ಡ್ರಾಡ್ರಾಗನ್ ಫ್ರೂಟ್ ಸಂಬಂಧ ಒಪ್ಪಂದ ಮಾಡಿಕೊಂಡಿದ್ದಾರೆ. ಅವರು ಆರೋಪಿಸಿದಂತೆ ನಮ್ಮ ಕಂಪನಿಯಿಂದ ಯಾವುದೇ ಮೋಸವಾಗಿಲ್ಲ. ರೈತರ ಜೊತೆ ಡ್ರಾಗನ್ ಫ್ರೂಟ್ ಸಸಿ ಹಾಗೂ ಕಂಬಗಳನ್ನ ನೀಡೊ ಒಪ್ಪಂದ ಆಗಿತ್ತು ಅಂತ ಭರಣಿ ಕಂಪನಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ: Dragon fruit: ಯೂಟ್ಯೂಬ್​​ ವಿಡಿಯೋ ನೋಡಿ ಕೃಷಿ ಮಾಡೋಕ್ಕೆ ಹೋದ ರೈತರು ಕೈ ಸುಟ್ಟುಕೊಂಡರು!

ಇನ್ನು ಸಸಿ ಮೆಂಟನನ್ಸ್ ಗೆ ತಂತಿಗಳನ್ನ ಡಿಲವರಿ ಮಾಡಲು ಹೆಚ್ಚು ಖರ್ಚಾಗುವ ಬಗ್ಗೆಯೂ ಸೂಚಿಸಲಾಗಿತ್ತು.ಆರೋಪ ಮಾಡಿರೊ ರಾಯಚೂರು ಮೂಲದ ರೈತರು ಕೇವಲ 60% ಹಣ ಮಾತ್ರ ನೀಡಿದ್ದಾರೆ. ಇನ್ನೂ40% ರಷ್ಟು ಹಣ ಬಾಕಿಯಿದೆ. ತಂತಿಗಳನ್ನ ನೀಡಲು ಹೆಚ್ಚುವರಿ ಖರ್ಚಾಗುತ್ತೆ ಅಂತ ತಿಳಿಸಲಾಗಿತ್ತು. ಆದರೆ ಆ ರೈತರು ಉಚಿತವಾಗಿ ತಂತಿಗಳನ್ನ ನೀಡಿ ಅಂತ ಒತ್ತಾಯಿಸಿದ್ದರು. ಅದಕ್ಕೆ ಕಂಪೆನಿ ಒಪ್ಪದೇ ಇದ್ದಾಗ ಈ ರೀತಿ ರೈತರು ಆರೋಪ ಮಾಡಿದ್ದಾರೆ ಅಂತ ಭರಣಿ ಆಗ್ರೊ ಟೆಕ್ ಕಂಪನಿ ಮುಖ್ಯಸ್ಥೆ ನಯನಾ ಸ್ಪಷ್ಟನೆ ನೀಡಿದ್ದಾರೆ.

ರಾಯಚೂರು ತಾಲ್ಲೂಕಿನ ಸಗಮಕುಂಟಾ ಗ್ರಾಮದ ರೈತರು ಭರಣಿ ಅನ್ನೋ ಕಂಪನಿಯವ್ರನ್ನ ಭೇಟಿಯಾಗಿದ್ದರು. ಕಂಪನಿಯವರು ಎಕರೆಗೆ 3 ಲಕ್ಷ ಕಟ್ಟಲು ಹೇಳಿ, ಸಸಿ ನಮ್ದು, ಬಂಬಗಳು ನಮ್ಮವೇ, ಅವುಗಳನ್ನ ಇನ್ಸ್ಟಾಲ್ ಕೂಡ ನಾವೇ ಮಾಡಿ ಕೊಡ್ತಿವಿ ಅಂತ ಹೇಳಿ ಲಕ್ಷ-ಲಕ್ಷ ಹಣ ಕಟ್ಟಿಸಿಕೊಂಡಿದ್ದಾರೆ. ಸುರೇಶ್ ಅನ್ನೊ ರೈತರು ತನ್ನ ಎರಡು ಎಕರೆಯಲ್ಲಿ ಡ್ರಾಗನ್ ಫ್ರುಟ್ ಬೆಳೆಯಲು 6 ಲಕ್ಷ ಕಟ್ಟಿದ್ರೇ, ಬಡೇಸಾಬ್ ಒಂದು ಎಕರೆಗೆ 2.5 ಲಕ್ಷ ಕಟ್ಟಿದ್ರು. ನಂತರ ಒಪ್ಪಂದಂತೆ ಕಂಪೆನಿ ಅವ್ರು ಮೊದಮೊದಲು ಸಸಿಗಳನ್ನು ಕೊಟ್ಟಿದ್ದರು.ನಂತರ ಕಂಬಗಳು, ತಂತಿಗಳನ್ನ ಕೊಟ್ಟಿಲ್ಲ. ಆಗ ರೈತರೇ ಹೆಚ್ಚುವರಿ ಖರ್ಚು ಮಾಡಿ ಕಂಬಗಳನ್ನ ಹಾಕಿಸಿದ್ದಾರಂತೆ. ನಂತರ ಸಸಿಗಳ ಕೊರತೆ ಉಂಟಾಗಿದೆ.ಒಂದು ಸಾಲಿಗೆ 100 ಸಸಿಗಳ ಕೊರತೆ ಇದೆ.ಅವುಗಳನ್ನ ಕೊಡಿ ಅಂತ ಭರಣಿ ಕಂಪೆನಿ ಅವರನ್ನ ಕೇಳಿದರೇ, ಈಗ ಬರ್ತಿವಿ ನಾಳೆ ಬರ್ತಿವಿ ಅಂತ ಈಗ ಒಂಬತ್ತು ತಿಂಗಳು ಕಾಯಿಸಿ ಮೋಸ ಮಾಡಿದ್ದಾರೆ ಅಂತ ರಾಯಚೂರು ಮೂಲದ ಈ ರೈತರು ಆರೋಪಿಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:31 pm, Wed, 22 February 23

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್