ನಮಗೆ ರಾಮ, ಕೃಷ್ಣರಂತೆ ಬದುಕುವುದು ಗೊತ್ತು, ನರಸಿಂಹನಂತೆ ಅವತಾರ ತಾಳುವುದೂ ಗೊತ್ತು: ಸರ್ಕಾರಕ್ಕೆ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ

| Updated By: ವಿವೇಕ ಬಿರಾದಾರ

Updated on: Oct 28, 2022 | 5:10 PM

ಎಸ್​​.ಸಿ, ಎಸ್​.ಟಿ ಸಮುದಾಯಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ, ಒಕ್ಕಲಿಗ ಸಮುದಾಯಕ್ಕೂ ಕೂಡ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಒಕ್ಕಲಿಗ ಸಮುದಾಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ

ನಮಗೆ ರಾಮ, ಕೃಷ್ಣರಂತೆ ಬದುಕುವುದು ಗೊತ್ತು, ನರಸಿಂಹನಂತೆ ಅವತಾರ ತಾಳುವುದೂ ಗೊತ್ತು: ಸರ್ಕಾರಕ್ಕೆ  ನಂಜಾವಧೂತ ಸ್ವಾಮೀಜಿ ಎಚ್ಚರಿಕೆ
ಶ್ರೀ ನಂಜಾವಧೂತ ಸ್ವಾಮೀಜಿ
Follow us on

ಮಂಡ್ಯ: ಎಸ್​​.ಸಿ, ಎಸ್​.ಟಿ ಸಮುದಾಯಕ್ಕೆ ಮೀಸಲಾತಿ (Reservation) ಪ್ರಮಾಣ ಹೆಚ್ಚಿಸಿದ ಬೆನ್ನಲ್ಲೇ, ಒಕ್ಕಲಿಗ ಸಮುದಾಯಕ್ಕೂ ಕೂಡ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಒಕ್ಕಲಿಗ ಸಮುದಾಯ (Vokkaliga Community) ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ (Nanjavadutha swamiji) ಮಾತನಾಡಿ ರಾಜ್ಯ ಸರ್ಕಾರ (Karnataka Government) ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ನಮಗೆ ರಾಮ ಹಾಗೂ ಕೃಷ್ಣರಂತೆ ಬದುಕುವುದು ಗೊತ್ತು. ನರಸಿಂಹನಂತೆ ಅವತಾರ ತಾಳುವುದೂ ಗೊತ್ತು ಎಂದು ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸರ್ಕಾರಕ್ಕೆ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ಒಕ್ಕಲಿಗ ಸಮುದಾಯಕ್ಕೂ ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಹೋರಾಟಕ್ಕೆ ಮದ್ದೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲಾ ಸಮುದಾಯಗಳ ಹಿತ ಬಯಸುವವರು ಒಕ್ಕಲಿಗರು. ಒಕ್ಕಲಿಗರ ಮೀಸಲಾತಿಯಲ್ಲಿ ತಾರತಮ್ಯ ಆಗಿದೆ. ಉದ್ಯೋಗ, ಶೈಕ್ಷಣಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಮುಂದೆ ಹೋರಾಟ ಯಾವ ರೂಪ ಬೇಕಾದರೂ ತಾಳಬಹುದು ಎಂದರು.

ಚುನಾವಣೆಗೂ ಒಕ್ಕಲಿಗ ಮೀಸಲಾತಿ ಹೋರಾಟಕ್ಕೂ ಸಂಬಂಧವಿಲ್ಲ. ನಮ್ಮದು 30 ವರ್ಷಗಳ ಹಿಂದಿನ ಬೇಡಿಕೆ. ನಾವು 16 ಪ್ರತಿಶತದಷ್ಟು ಇದ್ದರೂ ತಾರತಮ್ಯ ಆಗುತ್ತಿದೆ. 3A ಅಡಿ 4 ಪ್ರತಿಶತ ನೀಡಿದ್ದಾರೆ ಆದರೆ 3A ಅಡಿ ಬೇರೆ ಸಮುದಾಯಗಳನ್ನು ಸೇರಿಸಲಾಗಿದೆ. ಆ 4 ಪ್ರತಿಶತ ಕೂಡ ಒಕ್ಕಲಿಗರಿಗೆ ಬಳಸಿಕೊಳ್ಳಲು ಆಗುತ್ತಿಲ್ಲ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

3A ಮೀಸಲಾತಿಯನ್ನು 4 ಪ್ರತಿಶತದಿಂದ 12 ಪ್ರತಿಶತಕ್ಕೆ ಹೆಚ್ಚಿಸಿ. ನಗರಪ್ರದೇಶದಲ್ಲಿರುವ ಒಕ್ಕಲಿಗರಿಗೆ OBC ಮೀಸಲಾತಿ ನೀಡಿ. ಬೇರೆಬೇರೆ ಸಮುದಾಯಕ್ಕೆ ನೀಡಿದ ಮೀಸಲಾತಿಯನ್ನು ಸ್ವಾಗತಿಸುತ್ತೇವೆ. ಆದರೆ ನಮಗೂ ನಮ್ಮ ಪಾಲು ನೀಡಬೇಕು. ಒಕ್ಕಲಿಗರಲ್ಲಿ ಎಲ್ಲಾ ದೇವರ ಅಂಶವಿದೆ. ಎಲ್ಲಾ ಪಕ್ಷಗಳಿಗೂ ಸಮುದಾಯ ಒತ್ತು ನೀಡಿದೆ. ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು. ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು. ಇದು ಸಣ್ಣ ಕಿಡಿ ಈ ಕಿಡಿ ಅನ್ನವನ್ನು ಬೇಯಿಸುತ್ತದೆ. ಅಥವಾ ಬೇರೆ ರೀತಿಯಲ್ಲೂ ಕಿಡಿ ಹೊತ್ತಿ ಉರಿಯಬಹುದು ಎಂದು ಖಡಕ್​ ಸಂದೇಶ ರವಾನಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 5:10 pm, Fri, 28 October 22