ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ: ಮಂಡ್ಯ ಜನತೆಗೆ ಪರಿ ಪರಿಯಾಗಿ ಬೇಡಿಕೊಂಡ ಕುಮಾರಸ್ವಾಮಿ
ಇಂದು(ಮಾ.01) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದು, ‘ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾವಿಡಿ ಎಂದು ಮಂಡ್ಯ ಜನಗಳಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.
ಮಂಡ್ಯ, ಏ.01: ಲೋಕಸಭಾ ಚುನಾವಣೆ(Lok sabha election) ಹತ್ತಿರವಾಗುತ್ತಿದ್ದಂತೆ ಪ್ರಚಾರಕ್ಕೆ ಇಳಿದ ಉಭಯ ಪಕ್ಷಗಳು, ಒಬ್ಬರ ಮೇಲೊಬ್ಬರು ಕಿಡಿಕಾರುತ್ತಿದ್ದಾರೆ. ಅದರಂತೆ ಇಂದು(ಮಾ.01) ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದು, ‘ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ ವಿಶ್ವಾವಿಡಿ ಎಂದು ಮಂಡ್ಯ ಜನಗಳಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ. ಇನ್ನು ಈಗಾಗಲೇ ನನ್ನ ಮೇಲೆ ಮಂಡ್ಯ ಜನರು ವಿಶ್ವಾಸ ಇಟ್ಟಿದ್ದೀರಾ. ಯಾವ ರಾಜಕೀಯ ನಾಯಕರು ಮಂಡ್ಯ ಜಿಲ್ಲೆಯಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ. ಹಲವು ಜಿಲ್ಲೆಗಳಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಸಾಕಷ್ಟು ಕಡೆ ನಾನು ಹೋಗಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.
ಡಿಕೆಶಿಗೆ ಟಾಂಗ್
ಜೆಡಿಎಸ್ ಈಗ ಮುಗಿದೇ ಹೋಯ್ತು ಎಂದು ಕೆಲವರು ಹೇಳುತ್ತಾರೆ. ನಮ್ಮ ಕಾರ್ಯಕರ್ತರು ನಮಗೆ ಯಾರು ಅನ್ಯಾಯ ಮಾಡಿಲ್ಲ. ಎಲ್ಲರಿಗೂ ನಮ್ಮ ಪಕ್ಷದ ಪರ ಒಲವು ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ 4 ಕ್ಷೇತ್ರಗಳನ್ನಾದರೂ ಗೆಲ್ಲುತ್ತಿದ್ದೋ. ನಮ್ಮ ಸ್ವಯಂ ಕೃತ ಅಪಾರಾಧಗಳಿಂದ ಸೋತಿದ್ದೇವೆ. ನನ್ನ ಕನಕಪುರ ಸ್ನೇಹಿತ ನನಗೆ ಅಮೃತ ಹಾಕಿದ್ದೇನೆ ಎಂದು ಹೇಳಿದ್ದಾರೆ. ಅದ್ಯಾವ ಅಮೃತ ಹಾಕಿದ್ದಾನೋ ಗೊತ್ತಿಲ್ಲ. ಇಂದು ಮಂಡ್ಯಗೆ ಬಂದು ಏನ್ ಏನೋ ಹೇಳಿದ್ದಾರೆ. ಏನು ಹೇಳ್ತಾರೋ ಹೇಳಲಿ, ಜನರು ಉತ್ತರ ಕೊಡುತ್ತಾರೆ ಎನ್ನುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ:ವರುಣಾದಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿಗೆ ಸಿದ್ದರಾಮಯ್ಯ ಗಾಳ; ಮಂಡ್ಯದಲ್ಲಿ ಎಚ್ಡಿಕೆ ಅಲರ್ಟ್
ನೀರಾವರಿ ವಿಚಾರದಲ್ಲಿನ ಅನ್ಯಾಯ ಸರಿಪಡಿಸಲು ಮೈತ್ರಿ
ಮೇಕೆದಾಟು ಯೋಜನೆ ಏನ್ ಆಯ್ತು. ಕಾಂಗ್ರೆಸ್ನವರು ಈಗ ಬಿಜೆಪಿ ಸಂಸದರ ಕಡೆ ಬೆಟ್ಟು ಮಾಡಿ ತೋರುತ್ತಾರೆ. ದೇವೇಗೌಡರು ಇನ್ನೂ ಸಹ ಬದುಕಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಎರಡು ಮೂರು ಕ್ಷೇತ್ರ ಗೆಲ್ಲಲು ಅಲ್ಲ. ನಮ್ಮ ರಾಜ್ಯಕ್ಕೆ ಆಗಿರುವ ನೀರಾವರಿ ವಿಚಾರದಲ್ಲಿನ ಅನ್ಯಾಯವನ್ನು ಸರಿ ಪಡಿಸಲು. ನೀರಾವರಿ ವಿಚಾರದಲ್ಲಿ ಇನ್ನೂ ಅಭಿವೃದ್ಧಿ ಮಾಡುತ್ತೇವೆ. ಕನಕಪುರದ ನನ್ನ ಸ್ನೇಹಿತ ಜೆಡಿಎಸ್ ಮುಳುಗಿದೆ, ಕೊನೆ ಆಯ್ತು ಎನ್ನುತ್ತಾರೆ. ಜೆಡಿಎಸ್ ಮುಳುಗಿಲ್ಲ, ಈಗ ಎಳುತ್ತಾ ಇದೆ. ಜೆಡಿಎಸ್‌ನ ತೆನೆ ಹೊತ್ತ ಮಹಿಳೆ, ಹಸಿರಿನಿಂದ ಮೆರೆಯುತ್ತಾರೆ. ಆ ಸ್ನೇಹಿತನಿಗೆ ಜನರೇ ಉತ್ತರ ಕೊಡುತ್ತಾರೆ ಎಂದು ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್‌ಡಿಕೆ.
ಇನ್ನು ನಾವು ನುಡಿದಂತೆ ನಡೆದಿದ್ದೇವೆ ಅಂತಾರೆ. ಎರಡು ಸಾವಿರದಲ್ಲಿ ಏನು ಮಾಡ್ತೀರಾ. ಅದು ಯಾರ ದುಡ್ಡು, ಆ ದುಡ್ಡು ನಿಮ್ಮದೆ. ಈ ಉಚಿತ ಯೋಜನೆಯಿಂದ ಹೊಸ ಯೋಜನೆ ಮಾಡುವುದಕ್ಕೆ ಆಗುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲದಕ್ಕೂ ಹಣ ಕೊಡಲು ರೆಡಿ ಇದೆ. ಇವರು ಯೋಜನೆಯನ್ನು ಸಿದ್ದಪಡಿಸಿಲ್ಲ, ಯೋಜನೆ ಇಲ್ಲದೇ ಕೇಂದ್ರ ಹೇಗೆ ಹಣ ನೀಡುತ್ತೆ. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ. ನಿಮಗಾಗಿ ದುಡಿಯಲು ಇನ್ನೊಮ್ಮೆ ಅವಕಾಶ ನೀಡಿ ಎನ್ನುವ ಮೂಲಕ ಮಂಡ್ಯ ಜನರ ಬಳಿ ಮತಯಾಚನೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ