AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿ ದೇಗುಲಕ್ಕೆ ಬೀಗ, ಬೀದಿಯಲ್ಲೇ ಉಳಿದ ಪವಾಡ ಬಸವ

ಟ್ರಸ್ಟ್‌ ಅಧ್ಯಕ್ಷ, ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಗೌಡ ಹಾಗೂ ಗ್ರಾಮಸ್ಥರ ನಡುವೆ ತಿಕ್ಕಾಟ ಜೋರಾಗಿದೆ. ಈ ಎರಡೂ ಗುಂಪುಗಳ ನಡುವಿನ ವೈಷಮ್ಯದಿಂದಾಗಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ದೇವಸ್ಥಾನ ತನ್ನದು ಎಂದು ಬೀಗ ಹಾಕಿರುವುದಾಗಿ ಟ್ರಸ್ಟಿ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿ ದೇಗುಲಕ್ಕೆ ಬೀಗ, ಬೀದಿಯಲ್ಲೇ ಉಳಿದ ಪವಾಡ ಬಸವ
ಮದ್ದೂರು: ಮಾಜಿ ಪೊಲೀಸಪ್ಪನ ಪ್ರತಿಷ್ಠೆ, ದೊಡ್ಡರಸಿನಕೆರೆ ಗ್ರಾಮದಲ್ಲಿದೇವಸ್ಥಾನಕ್ಕೆ ಬೀಗ, ಬೀದಿಯಲ್ಲೇ ಉಳಿದಿರುವ ಪವಾಡ ಬಸವ
TV9 Web
| Edited By: |

Updated on:Sep 28, 2021 | 11:27 AM

Share

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ದೇಗುಲದ ವಿಚಾರವಾಗಿ ಗ್ರಾಮಸ್ಥರು ಹಾಗೂ ದೇವಾಲಯ ಟ್ರಸ್ಟ್ ಮಧ್ಯೆ ವೈಮನಸ್ಸು ತಲೆದೋರಿದೆ. ಎರಡೂ ಗುಂಪುಗಳ ಮಧ್ಯೆ ಪ್ರತಿಷ್ಠೆ ಬೆಳೆದಿದ್ದು, ದೇವರ ಬಸವ ಬೀದಿಗೆ ಬಿದ್ದ ಪ್ರಸಂಗ ನಡೆದಿದೆ. ಕಳೆದ 24 ಗಂಟೆಯಿಂದಲೂ ದೇಗುಲ ಪ್ರವೇಶಕ್ಕೆ ದೇವರ ಬಸವ ಕಾದುಕುಳಿತಿದ್ದಾನೆ.

ಈ ಪ್ರತಿಷ್ಠೆಯ ಫಲವಾಗಿ ಒಂದು ವಾರದಿಂದ ದೇವಾಲಯ ಕ್ಲೋಸ್ ಆಗಿದೆ. ಇದೀಗ ದೇವರ ಬಸವನಿಗೆ ವಾರದ ಪೂಜೆ ನೆರವೇರಿಸಬೇಕಿದೆ. ಆದರೆ ಪೂಜೆ ಸಲ್ಲಿಸುವವರು ಇಲ್ಲದೆ ದೇವರ ಬಸವ ಬೀದಿಯಲ್ಲೇ ಉಳಿಯುವಂತಾಗಿದೆ. ಇನ್ನು, ವಿಚಾರ ತಿಳಿದರೂ ಈ ಬಗ್ಗೆ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.

ಏನಿದು ವೈಮನಸ್ಸಿನ ವೃತ್ತಾಂತ, ಪೊಲೀಸಪ್ಪನ ರಾದ್ಧಾಂತ:

maddur doddarasikere village sannakkiraya swamy temple dispute 2

ದೊಡ್ಡರಸಿನಕೆರೆ ಗ್ರಾಮದ ಸಣ್ಣಕ್ಕಿರಾಯಸ್ವಾಮಿ ದೇಗುಲ: ಏನಿದು ವೈಮನಸ್ಸಿನ ವೃತ್ತಾಂತ, ಪೊಲೀಸಪ್ಪನ ರಾದ್ಧಾಂತ

ಪೂಜೆ ಮಾಡುವ ಅರ್ಚಕರ ವಿಚಾರಕ್ಕೆ ಆರಂಭವಾದ ವೈಮನಸ್ಸು ಗ್ರಾಮಸ್ಥರು ಹಾಗೂ ದೇವಾಲಯ ಟ್ರಸ್ಟ್ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ. ಹಿಂದಿನಿಂದಲೂ ಗ್ರಾಮದ ಸಣ್ಣಕ್ಕಿರಾಯಸ್ವಾಮಿಗೆ ಕುರುಬ ಸಮುದಾಯದ ಅರ್ಚಕರು ಪೂಜೆ ನೆರೆವೇರಿಸುತ್ತಿದ್ದರು. ಆದರೆ ದೇವಾಲಯ ಜೀರ್ಣೋದ್ಧಾರ ನಂತರ ರಚಿಸಲ್ಪಟ್ಟ ಟ್ರಸ್ಟ್ ಅಧ್ಯಕ್ಷರಿಂದ ಕುರುಬ ಅರ್ಚಕರನ್ನು ಪೂಜೆ ಮಾಡದಂತೆ ತಡೆದಿರುವ ಆರೋಪ ಕೇಳಿಬಂದಿದೆ. ಈ ಮಧ್ಯೆ, ಹಿಂದಿನ ಅರ್ಚಕರನ್ನ ತೆಗೆದು ಹೊಸ ಅರ್ಚಕರ ನೇಮಕ ವಿಚಾರದಲ್ಲಿ ಗೊಂದಲ ಶುರುವಾಗಿದೆ.

ಟ್ರಸ್ಟ್‌ ಅಧ್ಯಕ್ಷ ಜಯಪ್ರಕಾಶ್ ಗೌಡ ಹಾಗೂ ಗ್ರಾಮಸ್ಥರ ನಡುವೆ ತಿಕ್ಕಾಟ ಜೋರಾಗಿದೆ. ಈ ಎರಡೂ ಗುಂಪುಗಳ ನಡುವಿನ ವೈಷಮ್ಯದಿಂದಾಗಿ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ. ದೇವಸ್ಥಾನ ತನ್ನದು ಎಂದು ಬೀಗ ಹಾಕಿರುವುದಾಗಿ ಟ್ರಸ್ಟಿ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಜಿರ್ಣೋದ್ಧಾರದ ವೇಳೆ ನಿಧಿ ಆಸೆಗೆ ಮೂಲ ಲಿಂಗ ಕಿತ್ತು ಹಾಕಿದ್ದರು ಎಂಬ ಆರೋಪವೂ ಕೇಳಿಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಗೌಡ ವಿರುದ್ಧ ಈ ಗಂಭೀರ ಆರೋಪ ಮಾಡಲಾಗಿದೆ. ಒಂದು ವಾರದಿಂದ ದೇವಸ್ಥಾನ ಬಂದ್ ಆಗಿದ್ದು, ಪೊಲೀಸಪ್ಪನಿಂದಾಗಿ ದೇವಸ್ಥಾನದ ಒಳಗೆ ಸಣ್ಣಕ್ಕಿರಾಯ ಸ್ವಾಮಿಯ ಬಂಧನವಾಗಿದೆ.

ವಾರದ ಪೂಜೆಗೆ ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ಬಂದ ಪವಾಡ ಬಸವ ನಿನ್ನೆಯಿಂದ ದೇವರ ದರ್ಶನಕ್ಕಾಗಿ ಗೇಟ್ ಮುಂದೆಯೇ ಠಿಕಾಣಿ ಹೂಡಿದ್ದಾನೆ. ದೇವರ ದರ್ಶನವಿಲ್ಲದೆ ವಾಪಸ್ಸಾಗಲು ಬಸವಪ್ಪ ನಕಾರ ತೋರಿದ್ದಾನೆ ಎಂದೂ ಗ್ರಾಸ್ಥರು ಹೇಳುತ್ತಿದ್ದಾರೆ. ಪಟ್ಟು ಬಿಡದೆ 24 ಗಂಟೆಯಿಂದ ಕೂತಲ್ಲೆ ಕೂತಿದ್ದಾನೆ ಪವಾಡ ಬಸವಪ್ಪ. ಗ್ರಾಮಸ್ಥರ ಮನವೊಲಿಕೆಗೂ ಜಗ್ಗದೆ ಬಸವಪ್ಪ ಕುಳಿತುಬಿಟ್ಟಿದ್ದಾನೆ. ವಿಚಾರ ತಿಳಿದರೂ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಗ್ರಾಮಸ್ಥರು, ದೇವಾಲಯ ಟ್ರಸ್ಟ್ ಮಧ್ಯೆ ವೈಮನಸ್ಸು, ಬೀದಿಗೆ ಬಿದ್ದ ದೇವರ ಬಸವ |GodBasava|Tv9kannada

(maddur doddarasikere village sannakkiraya swamy temple dispute)

Published On - 9:03 am, Tue, 28 September 21

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್