ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಪ್ರಧಾನಿ ಮೋದಿಗೆ ಅಭಿನಂದನಾ ಪತ್ರ
Ayodhya Ram Mandir: ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಈ ಸುದಿನಕ್ಕಾಗಿ ಇಡೀ ದೇಶವೇ ಕಾದು ಕುಳಿತಿತ್ತು. ಜಗತ್ತಿನಾದ್ಯಂತ ಇರುವ ಹಿಂದುಗಳ ಐದು ಶತಮಾನಗಳ ಕನಸು ನನಸು ಮಾಡಿದ ನರೇಂದ್ರ ಮೋದಿಯವರ ಗಟ್ಟಿ ಹಾಗೂ ದೃಢ ನಿರ್ಧಾರಕ್ಕೆ ಸದ್ಯ ವಿವಿ ನಗರದ ಪೋಸ್ಟ್ ಆಫೀಸ್ ಬಳಿ ಬಿಜೆಪಿ ಮುಖಂಡ ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಪತ್ರ ಸಲ್ಲಿಸಲಾಗಿದೆ.
ಮಂಡ್ಯ, ಫೆಬ್ರವರಿ 7: ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾನ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಲು ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಅಭಿನಂದನಾ ಪತ್ರ ಬರೆದಿದ್ದಾರೆ. ವಿವಿ ನಗರದ ಪೋಸ್ಟ್ ಆಫೀಸ್ ಬಳಿ ಬಿಜೆಪಿ ಮುಖಂಡ ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪತ್ರಗಳನ್ನ ಬರೆದು ಅಂಚೇ ಮೂಲಕ ಕಳುಹಿಸಿಕೊಟ್ಟಿದ್ದಾರೆ. ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ.
ಜಗತ್ತಿನಾದ್ಯಂತ ಇರುವ ಹಿಂದುಗಳ ಐದು ಶತಮಾನಗಳ ಕನಸು ನನಸು ಮಾಡಿದ ನರೇಂದ್ರ ಮೋದಿಯವರ ಗಟ್ಟಿ ಹಾಗೂ ದೃಢ ನಿರ್ಧಾರಕ್ಕೆ ಅಭಿನಂದನ ಪತ್ರ ಅಭಿಯಾನ ಮಾಡುತ್ತಿದ್ದೇವೆ. ಮತಷ್ಟು ಹಿಂದೂ ದೇವಾಲಯಗಳು ಪ್ರತಿಷ್ಟಾಪನೆಯಾಗಲಿ. ಹಿಂದೂಗಳ ಕನಸು ನನಸು ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಅಭಿನಂದನೆಗಳನ್ನು ಕಾರ್ಯಕರ್ತರು ತಿಳಿಸಿದ್ದಾರೆ.
ಯೋಗಿರಾಜ್ ಕೆತ್ತೆನೆ ಮಾಡಿರುವ ಮತ್ತೊಂದು ಮೂರ್ತಿ ಸಹಾ ಪ್ರತಿಷ್ಠಾಪನೆ
ದೇಶದ ಕೋಟಿ ಕೋಟಿ ಜನರು ಕಾತುರದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಮಂದಿರ ಅದ್ದೂರಿಯಾಗಿ ಉದ್ಗಾಟನೆಗೊಂಡಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಇದಕ್ಕಾಗಿಯೇ ದೇಶದ ಕೋಟಿ ಕೋಟಿ ಜನರು ಕಾದು ಕುಳಿತಿದ್ದರು. ಕೋಟಿ ಕೋಟಿ ಜನರ ಕನಸು ಕೂಡ ಇದು. ವಿಶೇಷವೆಂದರೇ ರಾಮಲಲ್ಲಾನ ಮೂರ್ತಿಯನ್ನ ನಮ್ಮ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ.
ಇದನ್ನೂ ಓದಿ: ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಾಲಯದ 14 ಎಕರೆ ಭೂಮಿ ಅಕ್ರಮವಾಗಿ ಪರಭಾರೆ ಆರೋಪ
ಅದೇ ಮೂರ್ತಿ ಲೋಕಾಪರ್ಣೆ ಆಗಿದೆ. ಇದು ನಮ್ಮ ಹೆಮ್ಮೆಯ ವಿಚಾರ. ಸಕ್ಕರಿನಗರಿ ಮಂಡ್ಯದಲ್ಲೂ ಕೂಡ ಜಿರ್ಣೋದ್ಧರಗೊಂಡಿರುವ ರಾಮಮಂದಿರ ಕೂಡ ಜ.22 ರಂದು ಲೋಕಾರ್ಪಣೆಗೊಂಡಿದ್ದು, ವಿಶೇಷವೆಂದರೇ ಮಂಡ್ಯದ ಲೇಬರ್ ಕಾಲೋನಿಯಲ್ಲಿರೋ ರಾಮಮಂದಿರಕ್ಕೂ ಕೂಡ ಶಿಲ್ಪಿ ಅರುಣ್ ಯೋಗಿರಾಜ್ ಅವರು ರಾಮನ ಮೂರ್ತಿಯನ್ನ ಕೆತ್ತನೆ ಮಾಡಿದ್ದರು.
ವರ್ಷದ ಹಿಂದೆಯೇ ಮೂರ್ತಿಯನ್ನ ಕೆತ್ತನೆ ಮಾಡಿಕೊಟ್ಟಿದ್ದು, ದೇವಸ್ಥಾನದ ಜೀರ್ಣೋದ್ಧರ ಕಾರ್ಯ ತಡವಾದ ಹಿನ್ನೆಲೆಯಲ್ಲಿ ಪ್ರತಿಷ್ಠಾಪನೆ ಆಗಿರಲಿಲ್ಲ. ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲೇ ಮಂಡ್ಯದಲ್ಲೂ ಕೂಡ ರಾಮಮಂದಿರದಲ್ಲಿ ಶ್ರೀರಾಮ ಪ್ರತಿಷ್ಠಾಪನೆ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ನಡೆದವು. ಬೆಳಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ರಾಮನ ದರ್ಶನ ಪಡೆದುಕೊಂಡಿದ್ದರು.
ಇದನ್ನೂ ಓದಿ: ಮದ್ದೂರಿನಲ್ಲಿ 550 ವರ್ಷ ಹಳೆಯ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಸ್ಥಾಪಿಸಿದವರು ಯಾರು ಗೊತ್ತಾ?
ಶ್ರೀರಾಮನ ಮೂರ್ತಿ ಮೂರು ಕಾಲು ಅಡಿ ಎತ್ತರವಿದ್ದು, ಶ್ರೀರಾಮನ ಜೊತೆಗೆ ಲಕ್ಷಣ, ಸೀತೆ, ಹನುಮನ ವಿಗ್ರಹಗಳು ಸಹಾ ಇರಲಿದ್ದು, ಅವುಗಳನ್ನ ಸಹಾ ಶಿಲ್ಪಿ ಅರುಣ್ ಯೋಗಿರಾಜ್ ಅವರೇ ಕೆತ್ತನೆ ಮಾಡಿದ್ದಾರೆ. ಇನ್ನು ನೂರಾರು ವರ್ಷಗಳ ಇತಿಹಾಸ ಇರುವ ರಾಮಮಂದಿರ ಇದೀಗ ಜೀರ್ಣೋದ್ದರ ಆಗಿದ್ದು, ಲೋಕಾಪರ್ಣೆಗೊಂಡಿದೆ. ರಾಮನಗರ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಮಂಡ್ಯದ ಜನರಲ್ಲಿ ಸಂತಸ ಮನೆ ಮಾಡಿತ್ತು. ಮಂಡ್ಯದ ವಿನೋಬಾ ರಸ್ತೆಯ ರಾಮನ ಮಂದಿರದಲ್ಲೂ ಕೂಡ ಅದ್ದೂರಿಯಾಗಿ ಪೂಜೆ ನೆರವೇರಿಸಲಾಯಿತು. ಭಕ್ತರು ಕೂಡ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:44 pm, Wed, 7 February 24