ಕುಡಿಯುವ ನೀರಿನಲ್ಲಿ ವಿಷಬೆರೆಸಿ ಪತ್ನಿ, ಇಬ್ಬರು ಮಕ್ಕಳಿಗೆ ಕುಡಿಸಿ ಕೊಂದ ಪಾಪಿ!

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನೋ ಮಾತು ಈಗ ಹಳೆಯದಾಗಿದೆ. ಈಗೀಗ ಗಂಡ ಹೆಂಡತಿ ಜಗಳ ಹೊಸ ರೂಪ ತಾಳಿದೆ. ಅನುಮಾನ, ಕ್ಷುಲ್ಲಕ ವಿಷಯಗಳಿಗೆ ಪ್ರಾರಂಭವಾಗಿ ಅದೇ ದೊಡ್ಡದಾಗಿ ಮನೆ ದಿನನಿತ್ಯ ರಣರಂಗವಾಗುತ್ತಿದೆ. ಅಲ್ಲದೇ ಜಗಳಗಳು ಕೊಲೆಯಲ್ಲಿ ಅಂತ್ಯವಾಗಿ ಎದೆಷ್ಟೋ ಪ್ರಕರಣಗಳು ಇವೆ. ಅದರಂತೆ ಮಂಡ್ಯದಲ್ಲಿ ಗಂಡ-ಹೆಂಡ್ತಿ ನಡುವಿನ ಜಗಳದಲ್ಲಿ ಮೂವರು ಬಲಿಯಾಗಿರುವ ಘನ ಘೋರ ಘಟನೆಯೊಂದು ನಡೆದು ಹೋಗಿದೆ.

ಕುಡಿಯುವ ನೀರಿನಲ್ಲಿ ವಿಷಬೆರೆಸಿ ಪತ್ನಿ, ಇಬ್ಬರು ಮಕ್ಕಳಿಗೆ ಕುಡಿಸಿ ಕೊಂದ ಪಾಪಿ!
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Apr 18, 2024 | 5:45 PM

ಮಂಡ್ಯ, (ಏಪ್ರಿಲ್ 18): ಕೌಟುಂಬಿಕ ಕಲಹದಿಂದ(family dispute )ಮಹಿಳೆಯೊಬ್ಬರು ತಾನು ಹೆತ್ತ ಮೂರು ಮಕ್ಕಳಿಗೆ ವಿಷ ಉಣಿಸಿ ಕೊಲೆ ಮಾಡಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಇಂದೇ ಅದೇ ಮಂಡ್ಯ ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣ ನಡೆದಿದೆ. ಕೌಟುಂಬಿಕ ಕಲಹದಿಂದ ವ್ಯಕ್ತಿಯೋರ್ವ, ಪತ್ನಿ ಹಾಗೂ ತನ್ನಿಬ್ಬರ ಮಕ್ಕಳಿಗೆ ವಿಷದ ನೀರು ಕುಡಿಸಿ ಹತ್ಯೆ ಮಾಡಿದ್ದಾನೆ.  ಹೌದು…ಹೆಂಡತಿ ಮೇಲಿನ ಸಿಟ್ಟಿನಿಂದ ಪತಿ ನೀರಿನಲ್ಲಿ ವಿಷಬೆರೆಸಿ ಏನು ಅರಿಯದ ಮಕ್ಕಳಿಗೆ ಕುಡಿಸಿ ಕೊಂದಿರುವ ಈ ಅಮಾನವೀಯ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ(nagamangala) ಪಟ್ಟಣದಲ್ಲಿ ನಡೆದಿದೆ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನರಸಿಂಹ ಎನ್ನುವಾತ ಮನೆಯಲ್ಲಿನ ಕುಡಿಯುವ ನೀರಿಗೆ ವಿಷಬೆರೆಸಿದ್ದಾನೆ. ಬಳಿಕ ಆ ನೀರನ್ನು ಹೆಂಡತಿ ಹಾಗೂ ತನ್ನಿಬ್ಬರ ಮಕ್ಕಳಿಗೆ ಕುಡಿಸಿದ್ದಾನೆ. ಇದರಿಂದ ಪತ್ನಿ ಕೀರ್ತನಾ(23), ಮಕ್ಕಳಾದ ಜಯಸಿಂಹ (4), ರಿಷಿಕಾ(1) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ತನ್ನಿಬ್ಬರು ಮಕ್ಕಳಿಗೆ ವಿಷಹಾಕಿ ಕೊಂದ ತಾತಿ, ಬಿಸ್ಕತ್ತು ತಿಂದು ಮಗು ಅಸ್ವಸ್ಥ 

ನರಸಿಂಹ ಹಾಗೂ ಕೀರ್ತನಾ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಇತ್ತು. ಸಂಸಾರ ಚೆನ್ನಾಗಿತ್ತು. ಆದ್ರೆ, ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ನರಸಿಂಹನಿಗೆ ಬೇರೆ ಅಕ್ರಮ ಸಂಬಂಧ ಇತ್ತು ಎಂದು ಹೆಂಡತಿ ಆರೋಪಿಸಿದ್ದಾಳೆ. ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಪದೇ ಪದೇ ಗಲಾಟೆಯಾಗುತ್ತಲೇ ಇತ್ತು.ಬಳಿಕ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟ ನರಸಿಂಹ, ಕುಡಿಯುವ ನೀರಿಗೆ ಕ್ರಿಮಿನಾಶಕ ಹಾಕಿದ್ದಾನೆ. ಬಳಿಕ ಆ ನೀರನ್ನು ತನ್ನಿಬ್ಬರು ಮಕ್ಕಳು ಮತ್ತು ಪತ್ನಿಗೆ ಕುಡಿಸಿದ್ದಾನೆ. ನಂತರ ತಾನೂ ಸಹ ಅದೇ ನೀರು ಸೇವಿಸಿದ್ದಾನೆ. ನಂತರ ತಾನು ಅದೇ ನೀರು ಕುಡಿದ ನರಸಿಂಹ

ನೀರು ಕುಡಿದ ಕೆಲವೇ ಕ್ಷಣಗಳಲ್ಲಿ ಗಂಡ-ಹೆಂಡತಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಅಸ್ವಸ್ಥಗೊಂಡಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಎರೆಡು ಸಾವನ್ನಪ್ಪಿವೆ. ಇನ್ನು ಆಸ್ಪತ್ರೆಗೆ ಹೋದ ಬಳಿಕ ಪತ್ನಿ ಕೀರ್ತನಾ ಸಹ ಮೃತಪಟ್ಟಿದ್ದು, ಸದ್ಯ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ