Manmul: ರೈತರಿಗೆ ಮತ್ತೊಮ್ಮೆ ಶಾಕ್, ಹಾಲು ಖರೀದಿ ದರದಲ್ಲಿ ಲೀಟರ್​ಗೆ 1.75 ರೂ. ಕಡಿತ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ರೈತರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹಾಲಿನ ಖರೀದಿ ದರದಲ್ಲಿ ಲೀಟರ್​ಗೆ 1.75 ರೂ. ಮತ್ತೆ ಕಡಿತಗೊಳಿಸಿದೆ.

Manmul: ರೈತರಿಗೆ ಮತ್ತೊಮ್ಮೆ ಶಾಕ್, ಹಾಲು ಖರೀದಿ ದರದಲ್ಲಿ ಲೀಟರ್​ಗೆ 1.75 ರೂ. ಕಡಿತ
ಮನ್ಮೂಲ್​
Follow us
ದಿಲೀಪ್​, ಚೌಡಹಳ್ಳಿ
| Updated By: ವಿವೇಕ ಬಿರಾದಾರ

Updated on: Jul 16, 2023 | 8:37 AM

ಮಂಡ್ಯ: ಮಂಡ್ಯ ಜಿಲ್ಲಾ ಹಾಲು (Manmul) ಒಕ್ಕೂಟ ರೈತರಿಗೆ ಮತ್ತೊಮ್ಮೆ ಶಾಕ್ ನೀಡಿದೆ. ಹಾಲಿನ (Milk) ಖರೀದಿ ದರದಲ್ಲಿ ಲೀಟರ್​ಗೆ 1.75 ರೂ. ಮತ್ತೆ ಕಡಿತಗೊಳಿಸಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆಡಳಿತ ಮಂಡಳಿ ಜು.13ರಂದು ಸಭೆ ನಡೆಸಿ ರೈತರಿಂದ (Farmers) ಖರೀದಿ ಮಾಡುವ ಹಾಲಿನ ದರದಲ್ಲಿ ಲೀಟರ್​ಗೆ 1.75 ರೂ. ಕಡಿತ ಮಾಡಲು ನಿರ್ಧರಿಸಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಿದೆ. ಮುಂದಿನ ಆದೇಶದವರೆಗೂ ಪರಿಷ್ಕೃತ ದರ ಮುಂದುವರಿಕೆ‌ಯಾಗಲಿದೆ. ಮುಂಗಾರು ಮಳೆ ಆರಂಭ ಹಿನ್ನೆಲೆ ದರ ಕಡಿತ ಎಂದು ಮನ್ಮುಲ್ ಸಮರ್ಥನೆ ನೀಡಿದೆ.

ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಆದರೆ ಇದೀಗ ಹಾಲಿನ ದರದಲ್ಲಿ ಕಡಿತ ಮಾಡಿದ್ದರಿಂದ ಹಾಲು ಉತ್ಪಾದಕರಿಗೆ 32.25 ರೂ. ಬದಲಿಗೆ 30.50 ರೂ. ಸಿಗಲಿದೆ. ಕಳೆದ ತಿಂಗಳು ಜೂನ್​​ನಲ್ಲಿ ಕೂಡ ಮನ್ಮೂಲ್​ 1 ರೂ. ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಈ ನಿರ್ಣಯವನ್ನು ಮೇ.26ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಳ್ಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ