MANMUL: ಹಾಲಿನಲ್ಲಿ ರಾಸಾಯನಿಕ ಬೆರಕೆ ಪತ್ತೆ, ಕೆ. ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತ

ಪ್ರತಿ ನಿತ್ಯ ಒಟ್ಟು 35 ಕ್ಯಾನುಗಳಲ್ಲಿ 1374 ಕೆ.ಜಿ ಹಾಲನ್ನು ಸಂಗ್ರಹಣೆ ಮಾಡಿ ಒಕ್ಕೋಟಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಎಲ್ಲಾ ಕ್ಯಾನುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 04 ಕ್ಯಾನುಗಳಲ್ಲಿ ರಾಸಾಯನಿಕೆ ಕಲಬೆರಕೆ ಅಂಶಗಳು ಕಂಡು ಬಂದ ಹಿನ್ನೆಲೆ ಒಕ್ಕೂಟ ನೋಟಿಸ್ ನೀಡಿತ್ತು.

MANMUL: ಹಾಲಿನಲ್ಲಿ ರಾಸಾಯನಿಕ ಬೆರಕೆ ಪತ್ತೆ, ಕೆ. ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತ
ಹಾಲು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 21, 2022 | 9:16 AM

ಮಂಡ್ಯ: ಹಾಲಿಗೆ ನೀರು ಮಿಶ್ರಣ ಆಯ್ತು, ಈಗ ರಾಸಾಯನಿಕ ಬೆರಕೆ ಕೂಡ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಕಳೆದ ವರ್ಷವಷ್ಟೇ ಹಾಲಿಗೆ ನೀರು ಮಿಶ್ರಣ ಹಗರಣ ಬೆಳಕಿಗೆ ಬಂದಿತ್ತು ಈಗ ಮತ್ತೆ ಹಾಲಿನಲ್ಲಿ ರಾಸಾಯನಿಕ ಬೆರಕೆ ಕೂಡ ಪತ್ತೆಯಾಗಿದೆ. ಸದ್ಯ ಈ ಬಗ್ಗೆ ನೋಟಿಸ್ ನೀಡಿದ್ದು ಹಾಲು ಶೇಖರಣೆ ಸ್ಥಗಿತಗೊಳಿಸಲಾಗಿದೆ.

ಮದ್ದೂರು ತಾಲೂಕಿನ ಕೆ.ಹೊನ್ನಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಪತ್ತೆಯಾಗಿದೆ. ಟ್ಯಾಂಕರ್ ನೊಳಗೆ ಮತ್ತೊಂದು ಬೇಬಿ ಟ್ಯಾಂಕ್ ನಿರ್ಮಿಸಿ ಕೋಟಿ ಕೋಟಿ ವಂಚಿಸಲಾಗುತ್ತಿತ್ತು. ನೀರು ಮಿಶ್ರಣ ಪ್ರಕರಣ ಸಿಐಡಿ ತನಿಖೆಯಲ್ಲಿರುವಾಗಲೇ ರಾಸಾಯನಿಕ ಕಲಬೆರಕೆ ಹಗರಣ ಬೆಳಕಿಗೆ ಬಂದಿತ್ತು. ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ಹೆಚ್ಚು ತೋರಿಸುವಂತೆ ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಹಾಲಿಗೆ ನೀರು ಹಾಕಿದಾಗ ಕಡಿಮೆ ಕೊಬ್ಬಿನಾಂಶ ತೋರಬಾರದೆಂದು ರಾಸಾಯನಿಕ ಬೆರಕೆ ಮಾಡಲಾಗುತ್ತಿತ್ತು. ಅಧಿಕಾರಿಗಳು ಉಪ್ಪಿನಾಂಶದ ರಾಸಾಯನಿಕ ಕಲಬೆರಕೆ ಪತ್ತೆ ಹಚ್ಚಿದ್ದಾರೆ.

ಪ್ರತಿ ನಿತ್ಯ ಒಟ್ಟು 35 ಕ್ಯಾನುಗಳಲ್ಲಿ 1374 ಕೆ.ಜಿ ಹಾಲನ್ನು ಸಂಗ್ರಹಣೆ ಮಾಡಿ ಒಕ್ಕೋಟಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಎಲ್ಲಾ ಕ್ಯಾನುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 04 ಕ್ಯಾನುಗಳಲ್ಲಿ ರಾಸಾಯನಿಕೆ ಕಲಬೆರಕೆ ಅಂಶಗಳು ಕಂಡು ಬಂದ ಹಿನ್ನೆಲೆ ಒಕ್ಕೂಟ ನೋಟಿಸ್ ನೀಡಿತ್ತು. ಸದ್ಯ ಮನ್ಮುಲ್ ಆಡಳಿತ ಮಂಡಳಿ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆ ಸ್ಥಗಿತಗೊಳಿಸಿದೆ.

ಇದನ್ನೂ ಓದಿ: ಕುಂಡಲಿನಿ ಚಕ್ರ ಪ್ರೇರಿತ ಉಡುಪು ಧರಿಸಿ ನವದೀಪ್ ಕೌರ್ ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಅತ್ಯುತ್ತಮ ರಾಷ್ಟ್ರೀಯ ಉಡುಗೆ ಪ್ರಶಸ್ತಿ ಗೆದ್ದರು

Published On - 9:04 am, Fri, 21 January 22

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ