ಮಿಮ್ಸ್ ಮತ್ತದೇ ಎಡವಟ್ಟು: ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ, ಪತ್ನಿಯ ಕೈಗೆ ಕೊಟ್ಟು ಮಣ್ಣು ಮಾಡುವಂತೆ ಹೇಳಿದ ಆಸ್ಪತ್ರೆ ಸಿಬ್ಬಂದಿ
ಮಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪ್ರಕಾಶ್ ಕಾಲು ಕತ್ತರಿಸಿದ್ದಾರೆ. ಬಳಿಕ ಪತ್ನಿಗೆ ಪತಿಯ ಕತ್ತರಿಸಿದ ಕಾಲು ನೀಡಿ ಅದನ್ನು ಹೂಳುವಂತೆ ತಿಳಿಸಿದ್ದಾರೆ. ದಿಕ್ಕು ತೋಚದೆ ತಬ್ಬಿಬ್ಬಾದ ರೋಗಿ ಪ್ರಕಾಶ್ ಪತ್ನಿ ಭಾಗ್ಯಮ್ಮ ಗಂಡನ ಕಾಲು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತಿದ್ದಾರೆ.
ಮಂಡ್ಯ: ಮಂಡ್ಯ ಮಿಮ್ಸ್ ಆಸ್ಪತ್ರೆ ಸಿಬ್ಬಂದಿ ಮತ್ತೊಂದು ಎಡವಟ್ಟು ಮಾಡಿದ್ದಾರೆ. ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ, ಶಸ್ತ್ರಚಿಕಿತ್ಸೆ ಬಳಿಕ ರೋಗಿಯ ಕಾಲನ್ನು ಪತ್ನಿಗೆ ಹಸ್ತಾಂತರಿಸಿದ್ದಾರೆ. ಗಂಡನ ಕಾಲು ಹಿಡಿದು ವೃದ್ಧೆ ಭಾಗ್ಯಮ್ಮ ಕಣ್ಣೀರು ಹಾಕುವ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ. ಈ ಮೂಲಕ ಮಿಮ್ಸ್ ಆಸ್ಪತ್ರೆ ಪದೇ ಪದೇ ವಿವಾದಗಳ ಕೇಂದ್ರ ಬಿಂದು ಆಗ್ತಿದೆ.
ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ವೃದ್ಧೆ ಭಾಗ್ಯಮ್ಮರ ಪತಿ ಪ್ರಕಾಶ್, ಗ್ಯಾಂಗ್ರೀನ್ ಖಾಯಿಲೆಯಿಂದ ಒಳಲುತ್ತಿದ್ದರು. ಹೀಗಾಗಿ ಪ್ರಕಾಶ್ ಅವರಿಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮೂರ್ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ವೇಳೆ ಮಿಮ್ಸ್ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಪ್ರಕಾಶ್ ಕಾಲು ಕತ್ತರಿಸಿದ್ದಾರೆ. ಬಳಿಕ ಪತ್ನಿಗೆ ಪತಿಯ ಕತ್ತರಿಸಿದ ಕಾಲು ನೀಡಿ ಅದನ್ನು ಹೂಳುವಂತೆ ತಿಳಿಸಿದ್ದಾರೆ. ದಿಕ್ಕು ತೋಚದೆ ತಬ್ಬಿಬ್ಬಾದ ರೋಗಿ ಪ್ರಕಾಶ್ ಪತ್ನಿ ಭಾಗ್ಯಮ್ಮ ಗಂಡನ ಕಾಲು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತಿದ್ದಾರೆ. ಅಲ್ಲದೆ ಆಸ್ಪತ್ರೆ ಮಂದಿಯೇ ಮಣ್ಣು ಮಾಡಲು ಸಾವಿರಾರು ರೂ. ಕೇಳಿದ್ರು ಎಂದು ಭಾಗ್ಯಮ್ಮ ಆರೋಪ ಮಾಡಿದ್ದಾರೆ. ಮಂಡ್ಯ ಮಿಮ್ಸ್ ಸಿಬ್ಬಂದಿ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:11 pm, Tue, 6 September 22