AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್‌ಕುಮಾರ್‌ಗೆ ಗುಂಡಿಕ್ಕಲಿ; ಸಚಿವ ಚಲುವರಾಯಸ್ವಾಮಿ

ದೇಶದ್ರೋಹಿ ಹೇಳಿಕೆ ನೀಡಿದ ಸಂಸದ  ಡಿಕೆ ಸುರೇಶ್​ಗೆ  ಗುಂಡಿಕ್ಕಬೇಕು ಎಂಬ ಮಾಜಿ ಸಚಿವ ಕೆಎಸ್​ ಈಶ್ವರಪ್ಪ(KS Eshwarappa) ಹೇಳಿಕೆಗೆ ಈಗಾಗಲೇ ಎಫ್​ಐಆರ್​ ದಾಖಲಿಸಲಾಗಿದೆ. ಈ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ‘ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಡಿಕೆ ಸುರೇಶ್ ಮಾತನಾಡಿದ್ದಾರೆ. ಅದನ್ನು ತಿಳಿದುಕೊಳ್ಳಲಾಗದೆ ಮಾತನಾಡಿದ ಈಶ್ವರಪ್ಪರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯವರು ಮೊದಲು ಈಶ್ವರಪ್ಪ, ಅನಂತ್‌ಕುಮಾರ್‌ಗೆ ಗುಂಡಿಕ್ಕಲಿ; ಸಚಿವ ಚಲುವರಾಯಸ್ವಾಮಿ
ಸಚಿವ ಚಲುವರಾಯಸ್ವಾಮಿ
ಪ್ರಶಾಂತ್​ ಬಿ.
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 10, 2024 | 2:59 PM

Share

ಮಂಡ್ಯ, ಫೆ.10: ‘ದೇಶ ವಿಭಜನೆಯ ಹೇಳಿಕೆ ಕೊಡುವವರನ್ನು ಗುಂಡಿಕ್ಕಿ ಕೊಲ್ಲಬೇಕು’ ಎಂಬ ಕೆಎಸ್​.ಈಶ್ವರಪ್ಪ (KS Eshwarappa) ಹೇಳಿಕೆಗೆ ಸಚಿವ ಚಲುವರಾಯಸ್ವಾಮಿ(Chaluvaraya Swamy) ಕಿಡಿಕಾರಿದ್ದಾರೆ. ಕೆಆರ್ ಪೇಟೆಯಲ್ಲಿ  ಮಾತನಾಡಿದ ಅವರು ‘ಬಿಜೆಪಿಯವರು ಮೊದಲು ಈಶ್ವರಪ್ಪ ಹಾಗೂ ಅನಂತ್‌ಕುಮಾರ್‌ಗೆ ಗುಂಡಿಕ್ಕಲಿ ಎಂದಿದ್ದಾರೆ. ಕೇಸರಿ ಧ್ವಜವನ್ನ ರಾಷ್ಟ್ರ ಧ್ವಜ ಮಾಡುತ್ತೇನೆ ಎಂದು ಈಶ್ವರಪ್ಪ ಹೇಳಿದರೆ. ಇತ್ತ ಸಂವಿಧಾನ ಬದಲಾಯಿಸಬೇಕು ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದರು. ಅವರ ಪಾರ್ಟಿಯವರು ಅವರಿಗೆ ಗುಂಡಿಕ್ಕಲಿ ಅಮೇಲೆ ನೋಡೋಣ ಎಂದು ವಾಗ್ದಾಳಿ ನಡೆಸಿದರು.

ಈಶ್ವರಪ್ಪರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ

ಬಿಜೆಪಿಯವರಂತೆ ಕಾಂಗ್ರೆಸ್ ಶಾಸಕರು, ಸಂಸದರು ರಾಷ್ಟ್ರ ಸಂವಿಧಾನಕ್ಕೆ ಅವಮಾನ ಮಾಡಿಲ್ಲ. ರಾಜ್ಯಕ್ಕೆ ಆದ ಆರ್ಥಿಕ ಅನ್ಯಾಯದ ಬಗ್ಗೆ ಡಿಕೆ ಸುರೇಶ್ ಮಾತನಾಡಿದ್ದಾರೆ. ಅದನ್ನು ತಿಳಿದುಕೊಳ್ಳಲಾಗದೆ ಮಾತನಾಡಿದ ಈಶ್ವರಪ್ಪರ ಮೆದುಳಿಗೂ, ನಾಲಿಗೆಗೂ ಕನೆಕ್ಷನ್ ಕಟ್ ಆಗಿದೆ. ಆದ್ದರಿಂದ ಈಶ್ವರಪ್ಪಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ರಾಷ್ಟ್ರ, ರಾಜ್ಯ ಹಿತ ಕಾಯುವ ಪ್ರಶ್ನೆಗೆ ಉತ್ತರ ಕೊಡ್ತೀನಿ. ರಾಜಕಾರಣಕ್ಕಾಗಿ ನಾಲಿಗೆ ಹರಿಬಿಟ್ಟರೆ ಉತ್ತರ ಕೊಡಲ್ಲ.

ಇದನ್ನೂ ಓದಿ:ಡಿಕೆ ಸುರೇಶ್​ಗೆ ಗುಂಡಿಕ್ಕಬೇಕು: ಈಶ್ವರಪ್ಪ ಹೇಳಿಕೆಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಎಚ್​ಕೆ ಪಾಟೀಲ್

ಇದೇ ವೇಳೆ ಸುಮಲತಾ-ಬಿಜೆಪಿ ವರಿಷ್ಠರ ಭೇಟಿ ವಿಚಾರ‌, ‘ಸುಮಲತಾ ಅವರು ಬಿಜೆಪಿ ಟಿಕೆಟ್ ಕೇಳುತ್ತಿರುವುದು ಕನ್ಫರ್ಮ್ ಆಯ್ತಲ್ವಾ?, ಸುಮಲತಾ ಬಿಜೆಪಿಯಲ್ಲಿರೋದು ಖಚಿತವಾಗಿದೆ. ಕಾಂಗ್ರೆಸ್‌ಗೆ ಅವರನ್ನ ಯಾರು ಕರೆದರೂ ಎಂದು ಸುಮಲತಾ ಹೇಳಬೇಕು. ಅವರು ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಇದಕ್ಕೂ ಅವರಿಗೂ ಸಂಬಂಧ ಇಲ್ಲ. ಬಿಜೆಪಿ ಬೆಂಬಲಿತ ಸಂಸದೆ ಸುಮಲತಾ. ಈಗ ಬಿಜೆಪಿ ಟಿಕೆಟ್‌ ಕೇಳಿದ್ದಾರೆ. ಅವರ ಬಗ್ಗೆ ನಾವು ಮಾತನಾಡುವುದು ಸೂಕ್ತ ಅಲ್ಲ. ಅವರಿಗೆ ಕಾಂಗ್ರೆಸ್ ಬಾಗಿಲೂ ಮುಚ್ಚಿದೆಯಾ? ಇಲ್ವಾ? ಅವರನ್ನೇ ಕೇಳಿ.ಇನ್ನೊಂದು ವಾರದಲ್ಲಿ ಬಹುತೇಕ ಅಭ್ಯರ್ಥಿ‌ಗಳು ಫೈನಲ್ ಆಗುತ್ತಾರೆ ಎಂದರು.

ಇನ್ನು ಕೆರಗೋಡು ಹನುಮ ಧ್ವಜ ಹೋರಾಟದಲ್ಲಿ ಜೆಡಿಎಸ್‌ ತಟಸ್ಥವಾಗಿರುವುದಕ್ಕೆ ಮಾತನಾಡಿ, ‘ವಿವಾದ ಪ್ರಾರಂಭ ಮಾಡಿದ್ದು ಯಾರು?, ಜೊತೆಗೆ ಯಾಕೆ ನ್ಯೂಟ್ರಲ್ ಆದರು, ನಿನ್ನೆ ಹೋರಾಟಕ್ಕೆ ಯಾಕೆ ಬರಲಿಲ್ಲ?. ಜಿಲ್ಲೆಯ ಜನ ಇದಕ್ಕೇಲ್ಲ ಒಪ್ಪಲ್ಲ ಎಂದು ಅವರಿಗೆ ಗೊತ್ತಾಗಿದೆ. ಕೆರಗೋಡು ಯುವಕರು ಸ್ವಯಂ ಅಪರಾಧ ಅಲ್ಲ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಕೇಸರಿ ಶಾಲು ಹಾಕಿ ತಪ್ಪು ಮಾಡಿದ್ರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಅದನ್ನು ಹೆಚ್‌ಡಿಡಿ ಅವನ್ನು ಕೇಳಿ ಎಂದು ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ