ಶವ ಸಂಸ್ಕಾರದ ವೇಳೆ ಹೆಜ್ಜೇನು ದಾಳಿ: 40ಕ್ಕೂ ಹೆಚ್ಚು ಜನರಿಗೆ ಗಾಯ
ಶವ ಸಂಸ್ಕಾರದ ವೇಳೆ ಏಕಾ ಏಕಿ ಹೆಜ್ಜೇನು ದಾಳಿ ಮಾಡಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.
ಮಂಡ್ಯ: ಶವ ಸಂಸ್ಕಾರದ ವೇಳೆ ಏಕಾ ಏಕಿ ಹೆಜ್ಜೇನು ದಾಳಿ (bee attack) ಮಾಡಿದ್ದು, 40ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವಂತಹ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ. ಅನಾರೋಗ್ಯದ ಹಿನ್ನಲೆ ಹಾರೋಹಳ್ಳಿಯ ಧರ್ಮರಾಜ್ ಮೃತ ಪಟ್ಟಿದ್ದರು. ಹಾಗಾಗಿ ಇಂದು ಮಧ್ಯಾಹ್ನ ಧರ್ಮರಾಜ್ರ ಶವ ಸಂಸ್ಕಾರ ಕಾರ್ಯವಿತ್ತು. ಈ ಹಿನ್ನಲೆ ಶವವನ್ನ ತೆಗೆದುಕೊಂಡು ಹೋಗುವ ವೇಳೆ ಹೆಜ್ಜೇನು ದಾಳಿ ನಡೆಸಿವೆ. ಸದ್ಯ ಗಾಯಾಳುಗಳನ್ನ ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗಿದೆ.
ವಿದ್ಯುತ್ ಪ್ರವಹಿಸಿ ರೈತ ಸಾವು
ನೆಲಮಂಗಲ: ವಿದ್ಯುತ್ ಪ್ರವಹಿಸಿ ರೈತ ಸಾವನ್ನಪ್ಪಿರುವಂತಹ ಘಟನೆ ನೆಲಮಂಗಲ ತಾಲೂಕಿನ ತೋಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸಿದ್ಧಪ್ಪ (65) ಮೃತ ದುರ್ದೈವಿ. ಮೇವು ತರಲು ತೆರಳಿದ್ದ ವೇಳೆ ಅವಘಡ ನಡೆದಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತ ಸಾವು ಎಂದು ಆರೋಪಿಸಿದ್ದು, ನೆಲಮಂಗಲ ಬೆಸ್ಕಾಂ ಕಛೇರಿ ಎದುರು ಮೃತನ ಕುಟುಂಬಸ್ಥರಿಂದ ಪ್ರತಿಭಟನೆ ಮಾಡಲಾಗಿದೆ. ನಿರ್ಲ್ಯಕ್ಷ ತೋರಿದ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ವಿಜಯಪುರ ಇಟ್ಟಂಗಿಹಾಳ ಗ್ರಾಮದ ಬಳಿ ಜಮೀನಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ಸಂತೋಷ್ ಕಾಳೆ (24) ಮೃತ ಯುವಕ. ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಕಸ್ಮಿಕ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತಗಡಿನ ಶೆಡ್ ಭಸ್ಮ
ವಿಜಯಪುರ: ಆಕಸ್ಮಿಕ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತಗಡಿನ ಶೆಡ್ ಸುಟ್ಟ ಭಸ್ಮವಾಗಿರುವಂತಹ ಘಟನೆ ವಿಜಯಪುರ ತಾಲೂಕಿನ ಜಾಲಗೇರಿ ಗ್ರಾಮದಲ್ಲಿ ನಡೆದಿದೆ. ಭೀಮಶಿ ತಳವಾರ ಎಂಬುವರಿಗೆ ಸೇರಿದ ಶೆಡ್ ಸುಟ್ಟು ಭಸ್ಮವಾಗಿದೆ. ಶೆಡನಲ್ಲಿದ್ದ ಸಾವಿರಾರು ರೂಪಾಯಿ ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳು ಭಸ್ಮವಾಗಿವೆ. ವಿಜಯಪುರ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:21 pm, Wed, 2 November 22