ಮಂಡ್ಯದಲ್ಲಿ ಬಿರುಗಾಳಿ ಸಹಿತ ಮಳೆಗೆ 90ಕ್ಕೂ ಹೆಚ್ಚು ತೆಂಗಿನ ಮರಗಳು ನೆಲಸಮ! ರೈತ ಮಹಿಳೆ ಕಣ್ಣೀರು
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಹಿರಜಮ್ಮ ಎಂಬುವವರಿಗೆ ಸೇರಿದ ಮರಗಳು ನಾಶವಾಗಿದೆ. ರೈತ ಮಹಿಳೆ ಹಿರಜಮ್ಮ ತೆಂಗಿನ ಮರಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.
ಮಂಡ್ಯ: ರಾಜ್ಯದಲ್ಲಿ ಹಲವು ಕಡೆ ಕಳೆದ ವಾರದಿಂದ ಗಾಳಿ ಸಹಿತ ಮಳೆಯಾಗುತ್ತಿದೆ. ಭಾರಿ ಮಳೆಗೆ (Heavy Rain) ಅವಾಂತರ ಸೃಷ್ಟಿಯಾಗಿದ್ದು, ರೈತರು (Farmers) ಆತಂಕಗೊಂಡಿದ್ದಾರೆ. ರಾತ್ರಿ ಸುರಿದ ಮಳೆಗೆ 90ಕ್ಕೂ ಹೆಚ್ಚಿನ ಮರಗಳು ನೆಲಕ್ಕೆ ಉರುಳಿವೆ. ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಅಂಚನಹಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಹಿರಜಮ್ಮ ಎಂಬುವವರಿಗೆ ಸೇರಿದ ಮರಗಳು ನಾಶವಾಗಿದೆ. ರೈತ ಮಹಿಳೆ ಹಿರಜಮ್ಮ ತೆಂಗಿನ ಮರಗಳನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ನೆಲಸಮಗೊಂಡ ತೆಂಗಿನ ಮರದಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ನಷ್ಟವನ್ನು ನೆನೆದು ಮಹಿಳೆ ಕಣ್ಣೀರು ಹಾಕಿದ್ದಾರೆ.
ಧರೆಗುರುಳಿದ ದೊಡ್ಡ ಮರ: ವಿಜಯನಗರದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದ ಹೊಸಪೇಟೆಯ ಚಿತ್ತವಾಡ್ಗಡಿಯಲ್ಲಿ ದೊಡ್ಡ ಮರ ಧರೆಗುರುಳಿದೆ. ಕೂಡ್ಲಿಗಿ ತಾಲೂಕಿನ ನಿಂಬಳಗೇರೆಯಲ್ಲಿ ಬಾಳೆ ಬೆಳೆ ನೆಲಸಮವಾಗಿದೆ. ವಿದ್ಯುತ್ ತಂತಿ ತಗುಲಿ ತೆಂಗಿನ ಮರ ದಿಢೀರ್ ಹೊತ್ತಿ ಉರಿದಿದೆ.
ಇನ್ನು ಅತ್ತಿಬೆಲೆ, ಸರ್ಜಾಪುರ, ಚಂದಾಪುರದ ಬಳಿ ಎತ್ತರದ ಜಾಹೀರಾತು ಹೋರ್ಡಿಂಗ್ಸ್ ಧರೆಗುರುಳಿದೆ. ಪರವಾನಗಿ ಪಡೆದುಕೊಳ್ಳದ ಜಾಹಿರಾತು ಹೋರ್ಡಿಂಗ್ಸ್ ನೆಲಕ್ಕೆ ಉರುಳಿವೆ. ಸರಕಾರಕ್ಕೆ ತೆರಿಗೆ ಕಟ್ಟದೇ ಫಲಕಗಳನ್ನ ನಿರ್ಮಾಣ ಮಾಡಿದ್ದರು. ರಾತ್ರಿ ಬೀಸಿದ ಗಾಳಿಗೆ ಜಾಹಿರಾತು ಕಂಬ ಅಂಗಡಿಗಳ ಮೇಲೆ ಬಿದ್ದಿದೆ. ಪಿಡಬ್ಲ್ಯೂಡಿ ಇಲಾಖೆ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
4 ದಿನ ಬಾರಿ ಮಳೆ ಸಾಧ್ಯತೆ: ಕರಾವಳಿ, ಮಲೆನಾಡಿನಲ್ಲಿ ಕೂಡ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಮತ್ತು ಕರಾವಳಿ ಪ್ರದೇಶಗಳಲ್ಲಿ ಕೂಡ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದ ಉತ್ತರ ಒಳನಾಡಿನಲ್ಲಿ ಬಿಸಿಲು ಹೆಚ್ಚಾಗಿ, ಉಷ್ಣ ಅಲೆ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಇಂದಿನಿಂದ 4 ದಿನ ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮಳೆ ಹೆಚ್ಚಾಗಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಕೊಡಗು, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.
ಇದನ್ನೂ ಓದಿ
Published On - 11:15 am, Mon, 9 May 22