ಇಂದು ಕರ್ನಾಟಕದಲ್ಲಿ ಮೋದಿ ಮೇನಿಯಾ: ಇಲ್ಲಿದೆ ಪ್ರಧಾನಿಯ ಪ್ರವಾಸದ ಸಂಪೂರ್ಣ ಮಾಹಿತಿ

ಮಂಡ್ಯಕ್ಕೆ ಪ್ರಧಾನಿ ಬರುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಹದ್ದಿನಕಣ್ಣಿಡಲಾಗಿದೆ. ಇನ್ನು ಬೆಳಗ್ಗೆ 7 ಗಂಟೆಯಿಂದಲೇ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರ ಬಂದ್‌ ಆಗಲಿದೆ.

ಇಂದು ಕರ್ನಾಟಕದಲ್ಲಿ ಮೋದಿ ಮೇನಿಯಾ: ಇಲ್ಲಿದೆ ಪ್ರಧಾನಿಯ ಪ್ರವಾಸದ ಸಂಪೂರ್ಣ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ
Follow us
ಆಯೇಷಾ ಬಾನು
|

Updated on:Mar 12, 2023 | 7:26 AM

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಕೌಂಟ್‌ಡೌನ್‌ ಶುರುವಾಗಿದೆ. ಇದ್ರ ಬೆನ್ನಲ್ಲೇ ರಾಜ್ಯಕ್ಕೆ ದಾಂಗುಡಿ ಇಡ್ತಿರೋ ಪ್ರಧಾನಿ ನರೇಂದ್ರ ಮೋದಿ(Narendra Modi) ಇಂದು(ಮಾರ್ಚ್ 12) ಸಕ್ಕರೆ ನಾಡಲ್ಲೇ ಅಬ್ಬರಿಸಲಿದ್ದಾರೆ. ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯೇ(Bengaluru Mysuru Expressway) ಬಿಜೆಪಿ ಮತಶಿಕಾರಿಗೆ ದಾರಿಯಾಗಿದ್ದು, ರಾಜ್ಯದ ಮಹತ್ವಕಾಂಕ್ಷಿ ಯೋಜನೆ ಇಂದು ಲೋಕಾರ್ಪಣೆಯಾಗಲಿದೆ. ಬೆಳಗ್ಗೆ 8.05ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಯಾಣಿಸಲಿದ್ದು ಬೆಳಗ್ಗೆ 10.55ಕ್ಕೆ ಮೈಸೂರು ಏರ್‌ಪೋರ್ಟ್‌ಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಹೆಲಿಕಾಪ್ಟರ್‌ನಲ್ಲಿ ಮಂಡ್ಯದ ಪಿಇಎಸ್ ಕಾಲೇಜಿನತ್ತ ಪ್ರಯಾಣಿಸಲಿದ್ದು ಬೆಳಗ್ಗೆ 11.20ಕ್ಕೆ ಪಿಇಎಸ್‌ ಕಾಲೇಜು ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ.

ಬಳಿಕ ಮಂಡ್ಯದ ಪ್ರವಾಸಿಮಂದಿರ ವೃತ್ತದಿಂದ ನಂದ ಸರ್ಕಲ್‌ವರೆಗೆ ರೋಡ್‌ಶೋ ನಡೆಯಲಿದೆ. ನರೇಂದ್ರ ಮೋದಿ ಬೆಳಗ್ಗೆ 11.40ಕ್ಕೆ ಹನಕೆರೆಯಲ್ಲಿ 118 ಕಿ.ಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 8479 ಕೋಟಿ ರೂಪಾಯಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್‌ ಹೈವೇ ನಿರ್ಮಿಸಲಾಗಿದೆ. ಹೈವೇ ಉದ್ಘಾಟನೆ ನಂತರ ಹನಕೆರೆಯಲ್ಲಿ ಕೆಲಕಾಲ ಹೈವೇ ವೀಕ್ಷಿಸಲಿದ್ದಾರೆ. ಬಳಿಕ ಮಧ್ಯಾಹ್ನ 12.15ರಿಂದ ಮಧ್ಯಾಹ್ನ 1.15ರವರೆಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಕಾಲೋನಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದಾದ ನಂತರ4128.92 ಕೋಟಿ ವೆಚ್ಚದ ಒಟ್ಟು 92.33 ಕಿ.ಮೀ ಉದ್ದದ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿಗೆ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ.

ಮಧ್ಯಾಹ್ನ 12.40ರಿಂದ 1.15ರವರೆಗೆ ಪ್ರಧಾನಿ ನರೇಂದ್ರಮೋದಿ ಭಾಷಣ ಮಾಡಲಿದ್ದು ಮಧ್ಯಾಹ್ನ 1.15ಕ್ಕೆ ಮಂಡ್ಯದಿಂದ ನಿರ್ಗಮಿಸಲಿದ್ದಾರೆ. ಮಧ್ಯಾಹ್ನ 1.20ಕ್ಕೆ ಗೆಜ್ಜಲಗೆರೆ ಹೆಲಿಪ್ಯಾಡ್​ ತಲುಪಿ ಮಧ್ಯಾಹ್ನ 1.25ಕ್ಕೆ ಗೆಜ್ಜಲಗೆರೆ ಹೆಲಿಪ್ಯಾಡ್​​ನಿಂದ ಮೈಸೂರಿನತ್ತ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.50ಕ್ಕೆ ಮೈಸೂರು ಏರ್‌ಪೋರ್ಟ್‌ ತಲುಪಿ ಮಧ್ಯಾಹ್ನ 1.55ಕ್ಕೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿಯತ್ತ ತೆರಳಲಿದ್ದಾರೆ. ಮಧ್ಯಾಹ್ನ 2.55ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್​ಗೆ ಬಂದಿಳಿದು ಮಧ್ಯಾಹ್ನ 3 ಗಂಟೆಗೆ ಹೆಲಿಕಾಪ್ಟರ್‌ನಲ್ಲಿ ಧಾರವಾಡದತ್ತ ತೆರಳಿ ಮಧ್ಯಾಹ್ನ 3.20ಕ್ಕೆ ಐಐಟಿ ಮೈದಾನದ ಹೆಲಿಪ್ಯಾಡ್​ ತಲುಪಲಿದ್ದಾರೆ. ಮಧ್ಯಾಹ್ನ 3.25ಕ್ಕೆ ರಸ್ತೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಪ್ರಯಾಣಿಸಲಿದ್ದು ಮಧ್ಯಾಹ್ನ 3.30ಕ್ಕೆ ಐಐಟಿ ಆಡಳಿತ ಭವನ ತಲುಪಿ ಮಧ್ಯಾಹ್ನ 3.30ರಿಂದ ಮಧ್ಯಾಹ್ನ 3.45ರವರೆಗೆ ಐಐಟಿ ಕಟ್ಟಡ ವೀಕ್ಷಿಸಲಿದ್ದಾರೆ. ಮಧ್ಯಾಹ್ನ 3.50ಕ್ಕೆ ಐಐಟಿ ಆಡಳಿತ ಭವನದಿಂದ ರಸ್ತೆ ಮೂಲಕ ಪ್ರಯಾಣಿಸಿ ಮಧ್ಯಾಹ್ನ 3.55ಕ್ಕೆ ಸಾರ್ವಜನಿಕ ಸಮಾವೇಶದ ಸ್ಥಳಕ್ಕೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಂಜೆ 5.05 ನಿಮಿಷಕ್ಕೆ ಸಮಾವೇಶದ ಸ್ಥಳದಿಂದ ರಸ್ತೆ ಮೂಲಕ ಪ್ರಯಾಣಿಸಿ ಸಂಜೆ 5.10ಕ್ಕೆ ಧಾರವಾಡ ಐಐಟಿ ಹೆಲಿಪ್ಯಾಡ್‌ಗೆ ಆಗಮಿಸಿ ಸಂಜೆ 5.15ಕ್ಕೆ ಧಾರವಾಡ ಐಐಟಿ ಹೆಲಿಪ್ಯಾಡ್‌ನಿಂದ ತೆರಳಲಿದ್ದಾರೆ. ಸಂಜೆ 5.35ಕ್ಕೆ ಹುಬ್ಬಳ್ಳಿ ಏರ್‌ಪೋರ್ಟ್‌ ತಲುಪಿ ಸಂಜೆ 5.40ಕ್ಕೆ ಹುಬ್ಬಳ್ಳಿಯ ಏರ್‌ಪೋರ್ಟ್‌ನಿಂದ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಕೊನೆಗೆ ರಾತ್ರಿ 8.10ಕ್ಕೆ ನವದೆಹಲಿ ಏರ್‌ಪೋರ್ಟ್‌ ತಲುಪಲಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಮಂಡ್ಯದ ವಿಶೇಷ ಆರ್ಗಾನಿಕ್ ಬೆಲ್ಲವನ್ನ ಕೊಡುತ್ತೇನೆ: ಸಂಸದೆ ಸುಮಲತಾ

ಎಲ್ಲೆಲ್ಲೂ ಹದ್ದಿನಕಣ್ಣು, ರಾಷ್ಟ್ರೀಯ ಹೆದ್ದಾರಿ ಬಂದ್‌

ಮಂಡ್ಯಕ್ಕೆ ಪ್ರಧಾನಿ ಬರುತ್ತಿರುವ ಹಿನ್ನೆಲೆ ಎಲ್ಲೆಲ್ಲೂ ಹದ್ದಿನಕಣ್ಣಿಡಲಾಗಿದೆ. ಇನ್ನು ಬೆಳಗ್ಗೆ 7 ಗಂಟೆಯಿಂದಲೇ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನ ಸಂಚಾರ ಬಂದ್‌ ಆಗಲಿದ್ದು, ಸಮಾವೇಶಕ್ಕೆ ಬರೋ ವಾಹನಗಳಿಗೆ ಮಾತ್ರ ಬೆಳಗ್ಗೆ 9.30 ರವರೆಗೆ ಪ್ರವೇಶ ಇರಲಿದೆ.

ಮೈಸೂರು-ಬೆಂಗಳೂರು ಮಾರ್ಗದ ವಾಹನಗಳಿಗೆ ಬದಲಿ ಮಾರ್ಗ ಮಾಡಲಾಗಿದೆ. ಮೈಸೂರಿನಿಂದ ಸಂಚರಿಸುವ ವಾಹನಗಳು ಬನ್ನೂರು, ಕಿರುಗಾವಲು, ಮಳವಳ್ಳಿ, ಹಲಗೂರು, ಕನಕಪುರ ಮೂಲಕ ಬೆಂಗಳೂರಿಗೆ ಎಂಟ್ರಿ ಕೊಡಬೇಕಿದೆ. ಮೈಸೂರಿನಿಂದ ಮಂಡ್ಯ ಮೂಲಕ ತುಮಕೂರಿಗೆ ಹೋಗುವ ವಾಹನಗಳು ಮೈಸೂರಿನಿಂದ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ, ಬೆಳ್ಳೂರು ಕ್ರಾಸ್ ಮೂಲಕ ತುಮಕೂರಿಗೆ ಹೋಗಲು ಅವಕಾಶವಿದೆ. ಬೆಂಗಳೂರು ನಗರದಿಂದ ಮೈಸೂರಿಗೆ ತೆರಳುವ ವಾಹನಗಳು ಬೆಂಗಳೂರಿನಿಂದ ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕಿರುಗಾವಲು, ಬನ್ನೂರು ಮೂಲಕ ಮೈಸೂರಿಗೆ ತೆರಳಬಹುದು. ಬೆಂಗಳೂರಿನಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವಾಹನಗಳು, ಬೆಂಗಳೂರಿನಿಂದ ಚನ್ನಪಟ್ಟಣ, ಹಲಗೂರು, ಮಳವಳ್ಳಿ, ಕೊಳ್ಳೇಗಾಲ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಬಹುದು.

ಮೋದಿ ಸಂಚರಿಸುವ ಮಾರ್ಗದಲ್ಲಿ ಡ್ರೋನ್​​ ಹಾರಾಟ ನಿಷೇಧ

ಹೈವೇ ಲೋಕಾರ್ಪಣೆ ವೇಳೆ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಮೋದಿ ಸಂಚರಿಸುವ ಮಾರ್ಗದಲ್ಲಿ ಡ್ರೋನ್​​ ಹಾರಾಟ ನಿಷೇಧಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಮೋದಿ ಸಂಚರಿಸುವ ಮಾರ್ಗದ ಸುತ್ತ 15 ಕಿ.ಮೀ.ವ್ಯಾಪ್ತಿಯಲ್ಲಿ ಮಾನವರಹಿತ ಎಲೆಕ್ಟ್ರಾನಿಕ್ಸ್​ ವಸ್ತು, ಡ್ರೋನ್​​​, ಹೆಲಿಕ್ಯಾಮ್​​ ಹಾರಾಟಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru Mysuru Expressway: ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​ ವೇ; ದಶಪಥ ಹೆದ್ದಾರಿಯ ವಿಶೇಷಗಳಿವು

ವಿದ್ಯಾಕಾಶಿಯಲ್ಲೂ ‘ನಮೋ’ ಗರ್ಜನೆ

ಧಾರವಾಡದಲ್ಲಿ ಬರೋಬ್ಬರಿ 535 ಎಕರೆ ಜಾಗದಲ್ಲಿ ನಿರ್ಮಾಣನಾಗಿರೋ ಭಾರತೀಯ ತಂತ್ರಜ್ಞಾನ ಸಂಸ್ಥೆ ಅಂದ್ರೆ ಐಐಟಿಯನ್ನ ಲೋಕಾರ್ಪಣೆ ಮಾಡಲಿದ್ದಾರೆ. 852 ಕೋಟಿ ವೆಚ್ಚದಲ್ಲಿ ಬೃಹತ್‌ ಕಟ್ಟಡ ನಿರ್ಮಾಣವಾಗಿದ್ದು, ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಹೀಗಾಗೇ ಇದನ್ನ ದೇಶದ ಮೊದಲ ಹಸಿರು ಐಐಟಿ ಎನ್ನಲಾಗ್ತಿದೆ. ಐಐಟಿ ಉದ್ಘಾಟಿಸಿದ ಬಳಿಕ ಇನ್ನೂ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಧಾರವಾಡದಲ್ಲಿ ಪೊಲೀಸ್ ಭದ್ರತೆ

ಧಾರವಾಡಕ್ಕೆ ಇಂದು ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಐಐಟಿ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಐವರು ಎಸ್​​​​​​ಪಿ, 8 ಹೆಚ್ಚುವರಿ ಎಸ್​​ಪಿ, 28 ಡಿವೈಎಸ್​​ಪಿ, 63 ಪೊಲೀಸ್ ಇನ್ಸ್​​ಪೆಕ್ಟರ್​​​, 134 ಪೊಲೀಸ್ ಸಬ್​ಇನ್ಸ್​ಪೆಕ್ಟರ್, 158 ಎಎಸ್​ಐ, 1484 ಪೊಲೀಸ್ ಕಾನ್ಸ್​​ಟೇಬಲ್​​​​ಗಳ ನಿಯೋಜಿಸಲಾಗಿದೆ. ಸಮಾರಂಭ ವೇದಿಕೆ, ಪಾರ್ಕಿಂಗ್​, ಐಐಟಿ ಸುತ್ತಮುತ್ತ ಹೈಅಲರ್ಟ್ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:21 am, Sun, 12 March 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ