ಮುಂದೆ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ; ವಿವಿಧ ಪಕ್ಷದ ನಾಯಕರು ಕಾಂಗ್ರೆಸ್​ನತ್ತ ಬರುತ್ತಿದ್ದಾರೆ: ಸಿದ್ದರಾಮಯ್ಯ

Siddaramaiah: ಹಲವು ತಿಂಗಳಿಂದ ನರೇಗ ಯೋಜನೆಯಡಿ ಕೂಲಿ ಹಣ ಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಮಂಜೂರಾದ ಮನೆಗಳಿಗೆ ಇನ್ನೂ ಅನುದಾನ ಕೊಟ್ಟಿಲ್ಲ. ಎಲ್ಲವನ್ನೂ ಲಾಕ್ ಮಾಡಿದ್ದಾರೆ. ಈ ಬಗ್ಗೆ ಯಾರು ಬೇಕಾದರೂ ಪರಿಶೀಲನೆ ಮಾಡಬಹುದು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮುಂದೆ ಕರ್ನಾಟಕದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ; ವಿವಿಧ ಪಕ್ಷದ ನಾಯಕರು ಕಾಂಗ್ರೆಸ್​ನತ್ತ ಬರುತ್ತಿದ್ದಾರೆ: ಸಿದ್ದರಾಮಯ್ಯ
ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಮಂಡ್ಯ: ಮುಂದೆ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ವಿವಿಧ ಪಕ್ಷಗಳ ಹಲವಾರು ನಾಯಕರು ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ. ಈಗಾಗಲೇ ಹಲವರು ಬರುತ್ತಿದ್ದಾರೆ. ಇನ್ನು ಹಲವರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಕಂಟ್ರಾಕ್ಟರ್ ಅಸೋಸಿಯೇಷನ್ ಪ್ರಧಾನಿಗೆ ಪತ್ರ ಬರೆದಿದೆ. ಈ ಸರ್ಕಾರ 40 ಪರ್ಸೆಂಟ್ ಲಂಚ ಪಡೆಯುತ್ತಿದೆ ಅಂತಾ ಆರೋಪಿಸಿದೆ. 78 ಪರ್ಸೆಂಟ್ ಹಣ ಕೆಲಸವಿಲ್ಲದೇ ಖರ್ಚಾಗ್ತಿದೆ. 20-22 ಪರ್ಸೆಂಟ್ ಹಣ ಕೆಲಸಕ್ಕೆ ಬಳಕೆ ಆಗ್ತಿರೋದು. ಹೀಗಾದರೆ ಏನು ಅಭಿವೃದ್ಧಿ ಮಾಡಲು ಸಾಧ್ಯ? ಇದನ್ನ ಹೇಳಿದ್ರೆ ಕಾಂಗ್ರೆಸ್ ಅವಧಿಯಲ್ಲೂ ಇತ್ತು ಅಂತಾರೆ. ಹಾಗಾದರೆ ನಮ್ಮದನ್ನೂ ಸೇರಿಸಿ, ತನಿಖೆ ಮಾಡಿಸಿ ಎಂದು ಮಂಡ್ಯದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಶೂನ್ಯ. ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಬಿಜೆಪಿ, ಜೆಡಿಎಸ್ ಕೊಡುಗೆ ಶೂನ್ಯ. ಸ್ಥಳೀಯ ಸಂಸ್ಥೆಗಳಿಗೆ ಬಲ ಕೊಟ್ಟಿದ್ದು ಕಾಂಗ್ರೆಸ್. ಎಲ್ಲಾ ವರ್ಗಗಳಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ, ಬದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇದಕ್ಕೆ ಜೆಡಿಎಸ್, ಬಿಜೆಪಿ ಪಕ್ಷಗಳ ಕೊಡುಗೆ ಏನು? ನರೇಗ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್. ನರೇಗ ಯೋಜನೆಯಿಂದ ಪಂಚಾಯಿತಿಗಳಿಗೆ ಕೋಟಿ ಕೋಟಿ ಅನುದಾನ ನೀಡಲಾಗಿದೆ. ಹಲವು ತಿಂಗಳಿಂದ ನರೇಗ ಯೋಜನೆಯಡಿ ಕೂಲಿ ಹಣ ಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಮಂಜೂರಾದ ಮನೆಗಳಿಗೆ ಇನ್ನೂ ಅನುದಾನ ಕೊಟ್ಟಿಲ್ಲ. ಎಲ್ಲವನ್ನೂ ಲಾಕ್ ಮಾಡಿದ್ದಾರೆ. ಈ ಬಗ್ಗೆ ಯಾರು ಬೇಕಾದರೂ ಪರಿಶೀಲನೆ ಮಾಡಬಹುದು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗ್ರಾಮ ಸಭೆಗಳು ಕೂಡ ನಡೆಯುತ್ತಿಲ್ಲ. ಅಧಿವೇಶನದಲ್ಲಿ ಸಚಿವರು ಹಣ ಇಲ್ಲ ಅಂತಾರೆ. ಮೂರು ವರ್ಷಗಳಿಂದ ಒಂದು ಮನೆ ಕೂಡ ಕೊಟ್ಟಿಲ್ಲ. ಇದುವರೆಗೂ ಅತಿವೃಷ್ಟಿಗೆ ಪರಿಹಾರ ಕೊಡೋಕೆ ಆಗಲಿಲ್ಲ. ರಾಜ್ಯದ ನಾನಾ ಕಡೆ ಬೆಳೆ, ಮನೆಗಳು ಹಾನಿಯಾಗಿವೆ. ಇದುವರೆಗೂ ಸರ್ವೆ ಮಾಡಿಸಿಲ್ಲ, ಪರಿಹಾರ ಕೂಡ ಕೊಟ್ಟಿಲ್ಲ. ಇವರಿಗೆ ಮತ್ಯಾಕೆ ವೋಟ್ ಕೊಡಬೇಕು? ಜನ, ರೈತ ವಿರೋಧಿ ಬಿಜೆಪಿ ಸರ್ಕಾರ. ಕೊರೋನಾ 2ನೇ ಅಲೆಯಲ್ಲಿ ಪೂರ್ವ ಸಿದ್ಧತೆಯೇ ಮಾಡಿರಲಿಲ್ಲ. ಹೀಗಾಗಿ ಲಕ್ಷಾಂತರ ಜನ ಸತ್ತು ಹೋದರು. ಚಾಮರಾಜನಗರ ಒಂದು ಸ್ಪಷ್ಟ ನಿದರ್ಶನ. ಆಕ್ಸಿಜನ್ ಇಲ್ಲದೆ 36 ಜನ ಸತ್ತರು. ಕರ್ನಾಟಕ ಒಂದರಲ್ಲೇ 4 ಲಕ್ಷ ಜನ ಸತ್ತಿದ್ದಾರೆ. ಇದುವರೆಗೂ ಒಬ್ಬರಿಗೂ ಪರಿಹಾರ ಕೊಟ್ಟಿಲ್ಲ. ನಾವು ತಂದ ಎಲ್ಲಾ ಕಾರ್ಯಕ್ರಮಗಳನ್ನ ಬಂದ್ ಮಾಡ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳು ಹೇಳ್ತಾರೆ. ಒಮ್ಮೆ ಅಷ್ಟೇ ಸಿದ್ದರಾಮಯ್ಯ 7 ಕೆಜಿ ಅಕ್ಕಿ ಕೊಟ್ಟಿದ್ದು ಅಂತಾ. ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ ಯೋಜನೆ ಅಂತಾರೆ. ಹಾಗಾದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಅಕ್ಕಿ ಕೊಡ್ತಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.

ಜೆಡಿಎಸ್ ಸೆಕ್ಯುಲರ್ ಅಂತಾ ಹೇಳ್ತಾರೆ. ಆದರೆ, 2005ರಿಂದ ಜೆಡಿಎಸ್ ಬಿಜೆಪಿ ಜೊತೆ ಸೇರಿಕೊಂಡಿದೆ ಕಾಂಗ್ರೆಸ್ ಮತ್ತು ಬಿಜೆಪಿ 25 ಸ್ಥಾನಗಳಿಗೂ ಅಭ್ಯರ್ಥಿ ಹಾಕಿಲ್ಲ. ನಾವು ಮತ್ತು ಬಿಜೆಪಿ 20 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದೇವೆ. ಜೆಡಿಎಸ್ 6 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಎರಡು ಕ್ಷೇತ್ರ ಇರುವ ಕಡೆಯೂ ನಾವು ಒಂದೊಂದು ಅಭ್ಯರ್ಥಿ ಮಾಡಿದ್ದೇವೆ. ಇದರಲ್ಲಿ ಕನಿಷ್ಠ 15 ಕ್ಷೇತ್ರ ಗೆಲ್ಲುವ ವಿಶ್ವಾಸ ಇದೆ. ಮಂಡ್ಯದಲ್ಲೂ ನೂರಕ್ಕೆ ನೂರು ನಮ್ಮ ಅಭ್ಯರ್ಥಿ ಗೆಲ್ತಾರೆ. ನಾವು ಯಾರ ಮೇಲು ಅವಲಂಬನೆ ಆಗದೆ, ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇವೆ. ಆದರೆ ಜೆಡಿಎಸ್- ಬಿಜೆಪಿ ಒಟ್ಟಿಗೆ ಸೇರಿ ಚುನಾವಣೆ ಮಾಡ್ತಿವೆ. ನಾವು ಸೆಕ್ಯುಲರ್, ಸಂವಿಧಾನದಲ್ಲಿ ನಂಬಿಕೆ ಇರುವವರು. ಎಂದೂ ನಾವು ಕೋಮುವಾದಿಗಳ ಜೊತೆ ಸೇರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿ ಮಾತನಾಡಿದ್ದಾರೆ.

ಜೆಡಿಎಸ್ ಸೆಕ್ಯುಲರ್ ಅಂತಾ ಹೇಳ್ತಾರೆ. ಆದರೆ, 2005ರಿಂದ ಜೆಡಿಎಸ್ ಬಿಜೆಪಿ ಜೊತೆ ಸೇರಿಕೊಂಡಿದೆ. ಜಾತ್ಯಾತೀತ ತತ್ವದಡಿ ನಂಬಿಕೆ ಇರುವ ಎಲ್ಲರೂ ಕಾಂಗ್ರೆಸ್ ಬೆಂಬಲಿಸಲು ತೀರ್ಮಾನ ಮಾಡಬೇಕು. ಈ ಚುನಾವಣೆಯಲ್ಲಿ ಜಿ.ಪಂ., ತಾ.ಪಂ. ಸದಸ್ಯರು ಮತ ಹಾಕ್ತಿಲ್ಲ. ಚುನಾವಣೆ ಸೋಲಿನ ಭಯದಿಂದ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ಇಲ್ಲದ ನೆಪ ಹೇಳಿ ಬಿಜೆಪಿಯಿಂದ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ಸರ್ಕಾರದ ನಡೆ ವಿರುದ್ಧ ಚುನಾವಣಾ ಆಯೋಗ ನ್ಯಾಯಾಲಯದಲ್ಲಿ ಛಾಲೆಂಜ್ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದಲ್ಲಿ 4,025 ಮತದಾರರಿದ್ದಾರೆ. ಮೂರು ಪಕ್ಷಗಳು ಜಿಲ್ಲೆಯಲ್ಲಿ ಸ್ಪರ್ಧೆ ಇದೆ. ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ಮಾತ್ರ ಫೈಟ್ ಇದೆ. ರಾಜ್ಯದಲ್ಲಿ ಇವತ್ತು ಎಲ್ಲಾ ಕಡೆ ಬಿಜೆಪಿ ವಿರುದ್ಧವಾದ ಗಾಳಿ ಬೀಸಲು ಶುರುವಾಗಿದೆ. ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಶುರುವಾಗಿದೆ. ಅಭಿವೃದ್ಧಿ, ಶೂನ್ಯ, ಭ್ರಷ್ಟಾಚಾರ, ಭರವಸೆ ಈಡೇರಿಸದ ಬಿಜೆಪಿ. ಹೀಗಾಗಿ ಜನ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ. ಜೆಡಿಎಸ್ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಪಕ್ಷ ಎಂದು ಸಿದ್ದರಾಮಯ್ಯ ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಈ ಬಾರಿ ಸುವರ್ಣಸೌಧದಲ್ಲೇ ಅಧಿವೇಶನ- ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

ಇದನ್ನೂ ಓದಿ: ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು: ಬಿಬಿ ಚಿಮ್ಮನಕಟ್ಟಿ ಭಾಷಣ; ಸಿದ್ದರಾಮಯ್ಯಗೆ ಮುಜುಗರ!

Click on your DTH Provider to Add TV9 Kannada