ಮಂಡ್ಯದಲ್ಲಿ ಆಸ್ತಿಗಾಗಿ ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ, ಮೊಮ್ಮಕ್ಕಳು
ಬೋರೇಗೌಡ ಮತ್ತು ನಿಂಗಮ್ಮ ದಂಪತಿಗೆ ಮಕ್ಕಳಿಲ್ಲದ ಕಾಣರ ಸಿದ್ದರಾಮೇಗೌಡ ಎಂಬುವವರನ್ನು ದತ್ತು ತೆಗೆದುಕೊಂಡಿದ್ದರು. ಬೋರೇಗೌಡ ತಮ್ಮನ ಮಗ ಸಿದ್ದರಾಮೇಗೌಡಗೆ 16 ವರ್ಷವಿದ್ದಾಗಲೇ ದತ್ತು ಪಡೆದುಕೊಂಡಿದ್ದರು.
ಮಂಡ್ಯ: ಆಸ್ತಿಗಾಗಿ (Property) ಮನೆಯವರು ಅಜ್ಜಿಯನ್ನು ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ಮಂಡ್ಯ (Mandya) ತಾಲೂಕಿನ ಕೊಣನಹಳ್ಳಿಯಲ್ಲಿ ನಡೆದಿದೆ. ಕೋಟಿ-ಕೋಟಿ ಆಸ್ತಿ ಹೊಂದಿದ್ದ ನಿಂಗಮ್ಮ (85) ಎಂಬ ಅಜ್ಜಿ ಬೀದಿ ಪಾಲಾಗಿದ್ದಾರೆ. ಅಜ್ಜಿಗೆ ಆಸ್ತಿ ಎಲ್ಲಾ ನಮಗೆ ಬರಿ ಎಂದು ಸಹಿ ಹಾಕಲು ಸೊಸೆ ಮೊಮ್ಮಕ್ಕಳು ಹಠ ಮಾಡಿದ್ದಾರಂತೆ. ಆದರೆ ನಾನು ಸಹಿ ಹಾಕಲ್ಲ ಅಂತ ಅಜ್ಜಿ ಹೇಳಿದಕ್ಕೆ ಮಾನವೀಯತೆ ಮರೆತು ಮನೆಯಿಂದ ಹೊರಗೆ ಹಾಕಿದ್ದಾರೆ.
ಬೋರೇಗೌಡ ಮತ್ತು ನಿಂಗಮ್ಮ ದಂಪತಿಗೆ ಮಕ್ಕಳಿಲ್ಲದ ಕಾಣರ ಸಿದ್ದರಾಮೇಗೌಡ ಎಂಬುವವರನ್ನು ದತ್ತು ತೆಗೆದುಕೊಂಡಿದ್ದರು. ಬೋರೇಗೌಡ ತಮ್ಮನ ಮಗ ಸಿದ್ದರಾಮೇಗೌಡಗೆ 16 ವರ್ಷವಿದ್ದಾಗಲೇ ದತ್ತು ಪಡೆದುಕೊಂಡಿದ್ದರು. 24 ವರ್ಷಕ್ಕೆ ಸಿದ್ದರಾಮೇಗೌಡಗೆ ಬೋರೇಗೌಡ ಮತ್ತು ನಿಂಗಮ್ಮ ಮದುವೆ ಮಾಡಿದ್ದರು. ಶಿವಹಳ್ಳಿಯ ನಾಗಮಣಿ ಜೊತೆ ಮದುವೆ ಮಾಡಿದ್ದಾರೆ. ಮದುವೆಯಾದ 20 ವರ್ಷದ ನಂತರ ಸಿದ್ದರಾಮೇಗೌಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಿಕ ಬೋರೇಗೌಡ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.
ಸಾಯುವ ಮುನ್ನ ಎಲ್ಲರಿಗೂ ಸರಿಯಾಗಿ ನ್ಯಾಯ ಸಿಗಬೇಕು ಅಂತ ಬೋರೇಗೌಡ ವಿಲ್ ಮಾಡಿದ್ದರು. ಸೊಸೆ, ಮೊಮ್ಮಕ್ಕಳು, ಅಣ್ಣ-ತಮ್ಮಂದಿರಿಗೆ ಆಸ್ತಿಯಲ್ಲಿ ಸಮಪಾಲು ಮಾಡಿದ್ದರು. ಇದೀಗ ಆಸ್ತಿಯೆಲ್ಲಾ ನಮಗೆ ಬೇಕು ಅಂತ ಸೊಸೆ, ಮೊಮ್ಮಕ್ಕಳು ಹೇಳುತ್ತಿದ್ದಾರಂತೆ. ಅಜ್ಜಿಗೆ ಆಸ್ತಿ ಎಲ್ಲಾ ನಮಗೆ ಬರಿ ಎಂದು ಸಹಿ ಹಾಕಲು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಅಜ್ಜಿ ನಾನು ಸಹಿ ಹಾಕಲ್ಲ ಎಂದಿದ್ದಾರೆ. ಹತ್ತಾರು ಎಕರೆ ಜಮೀನು, 15 ಸೈಟ್, ಏಳೆಂಟು ಮನೆ, ಮಂಡ್ಯ ನಗರ ಭಾಗದಲ್ಲಿ ಬಿಲ್ಡಿಂಗ್ ಇದ್ದರೂ ಅಜ್ಜಿ ಬೀದಿಗೆ ಬಂದಿದ್ದಾರೆ.
ಹೊಟ್ಟೆ-ಬಟ್ಟೆ ಕಟ್ಟಿ ಆಸ್ತಿ ಮಾಡಿದ್ದರೂ ಹೀಗೆ ಮಾಡುತ್ತಾ ಇದ್ದಾರೆ ಎಂದು ಅಜ್ಜಿ ಕಣ್ಣೀರು ಹಾಕಿದ್ದಾರೆ. ನನ್ನ ಗಂಡ ಎಲ್ಲರಿಗೂ ನ್ಯಾಯ ಕೊಡಿಸಬೇಕೆಂದು ವಿಲ್ ಮಾಡಿದ್ದಾರೆ. ಈಗ ಇವರು ನನ್ನ ಗಂಡನ್ನ ಬೈಯ್ದುಕೊಂಡು ನನ್ನ ಬೀದಿ ಪಾಲು ಮಾಡಿದ್ದಾರೆ. ನಾನು ಆ ಮನೆಗೆ ಹೋಗಲ್ಲ, ನನ್ನ ಗಂಡ ಮಾಡಿರುವುದು ಸರಿ ಇದೆ ಅಂತ ಅಜ್ಜಿ ಹೇಳುತ್ತಿದ್ದಾರೆ.
ಇದನ್ನೂ ಓದಿ
80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?
ಫ್ಲೈ ಓವರ್ ಮೇಲೆ ಬೈಕ್ ವಿಲ್ಹಿಂಗ್ ಮಾಡುತ್ತಿದ್ದ ಪುಂಡರನ್ನು ಬಂಧಿಸಿದ ಬೆಂಗಳೂರು ಪೊಲೀಸ್
Published On - 4:28 pm, Sat, 5 February 22