80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್​​ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?

Name change: ಅಜ್ಜಿಗೆ 1999ರಲ್ಲಿ ತಮ್ಮ ಹಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೆವೈಸಿ (KYC) ರಗಳೆ ಇರಲಿಲ್ಲವಂತೆ. ಎಲೆಕ್ಷನ್ ಕಾರ್ಡ್​, ಪಾನ್​ ಕಾರ್ಡ್ ಮುಂತಾದವುಗಳ ಗೋಜು​ ಇರಲಿಲ್ಲವಂತೆ. ಅಂತಹ ಯಾವುದೇ ದಾಖಲೆಗಳು ಇಲ್ಲದೆ, ಸರಳವಾಗಿ ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆಗೆದಿದ್ದರಂತೆ ಪ್ರಭಾ ಸೂದ್!

80 ವರ್ಷದ ಅಜ್ಜಿ ಹೆಸರು ಬದಲಿಸಿಕೊಂಡು, ಭಾರತ ಸರ್ಕಾರದ ಗೆಜೆಟ್​​ನಲ್ಲಿ ಪ್ರಕಟಿಸುವಂತೆ ಪಟ್ಟು ಹಿಡಿದಿದ್ದಾರೆ! ಯಾಕೆ?
ದೆಹಲಿ ಕೋರ್ಟ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 08, 2022 | 6:10 AM

ನವದೆಹಲಿ: ಸುಮಾರು 80 ವರ್ಷದ ಅಜ್ಜಿಯೊಬ್ಬರು (woman) ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದು, ಅದನ್ನು ಭಾರತ ಸರ್ಕಾರದ ಗೆಜೆಟ್​​ನಲ್ಲಿ (Official Gazette of India) ಅಧಿಕೃತವಾಗಿ ಪ್ರಕಟಿಸುವಂತೆ ವರಾತ ತೆಗೆದಿದ್ದಾರೆ! ಅಷ್ಟೇ ಅಲ್ಲ ಈ ಸಂಬಂಧ ದೆಹಲಿ ಹೈಕೋರ್ಟ್ (Delhi High Court)​ ಮೆಟ್ಟಿಲೇರಿದ್ದಾರೆ. ಈ ಇಳಿವಯಸ್ಸಿನಲಿ ಇದೇನು ಅಜ್ಜಿಯ ಪಡಿಪಾಟಲು ಎಂದು ನೋಡಿದಾಗ… ಅಜ್ಜಿ ಪತಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದಾರೆ. ಆಕೆಗೆ ಸದ್ಯಕ್ಕೆ ತಮ್ಮ ಹೆಸರಿನಲ್ಲಿ ಒಂದು ಗುರುತಿನ ಚೀಟಿ (photo identity card) ಬೇಕಾಗಿದೆ. ತಮ್ಮ ಬಳಿಯಿರುವ ಉಳಿತಾಯದ ಹಣ ಮತ್ತು ಹೂಡಿಕೆಯಿಂದ ಬರುವ ಹಣವನ್ನು ತಮ್ಮ ಹೆಸರಿನಲ್ಲಿ ಜೋಪಾನ ಮಾಡಿಕೊಳ್ಳುವುದು ಆಕೆಯ ಸದ್ಯದ ಜರೂರತ್ತು ಆಗಿದೆ. ಅದಕ್ಕಾಗಿ ಅಜ್ಜಿ ಈ ಇಳಿವಯಸ್ಸಿನಲಿ ಕೋರ್ಟ್ ಮೆಟ್ಟಿಲೇರಿ ಹೋರಾಟ ಮಾಡುತ್ತಿದ್ದಾರೆ. ಇದನ್ನು ಆಲಿಸಿದ ದೆಹಲಿ ಹೈಕೋರ್ಟ್​ನ ಜಸ್ಟೀಸ್ ವಿ ಕಾಮೇಶ್ವರ್ ರಾವ್​ ಅವರು ತತ್​ಕ್ಷಣ ಅಜ್ಜಿಗೆ ನೆರವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೊದಲು ಒಂದು ಅಫಿಡವಿಟ್​ ಸಲ್ಲಿಸುವಂತೆ ಅಜ್ಜಿಗೆ ಸೂಚಿಸಿದ ಕೋರ್ಟ್, ಅದಕ್ಕೆ ತಕ್ಷಣ ಸ್ಪಂದಿಸಿ ಸರ್ಟಿಫಿಕೇಟ್​ ನೀಡುವಂತೆ ಆಜ್ಞಾಪಿಸಿದ್ದಾರೆ.

ಅಷ್ಟಕ್ಕೂ ಆ ಮಹಿಳೆ ಯಾರು, ಆಕೆಯ ವೃತ್ತಾಂತ ಏನು ಎಂದು ನೋಡಿದಾಗ 80 ವರ್ಷದ ಮಹಿಳೆ ಪ್ರಭಾ ಸೂದ್​ ಪಂಜಾಬ್​ನ ಹೋಷಿಯಾರ್​ಪುರದವರು. 2002ರಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿ ತಮ್ಮ ವಕೀಲರಾದ ಕೈ ಪ್ರಕಾಶ್ ತೆಹಲಾನಿ ಮೂಲಕ ದೆಹಲಿ ಹೈಕೋರ್ಟ್​ಗೆ ಅರ್ಜಿ ಹಾಕಿಕೊಂಡಿದ್ದಾರೆ. ‘1941ರಲ್ಲಿ ಜನಿಸಿರುವ ಪ್ರಭಾ ಸೂದ್ ಎಂಬ ತಮ್ಮ ಅರ್ಜಿದಾರರು 1963ರಲ್ಲಿ ರಾಮ್​ ಪ್ರಕಾಶ್ ಸೂದ್​ ಅವರನ್ನು ವಿವಾಹವಾದರು. ಆದರೆ ಅವರ ಪತಿ 2009ರಲ್ಲಿ ಮೃತಪಟ್ಟರು. ಅಲ್ಲಿಂದೀಚೆಗೆ ಅವರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಪತಿಯ ಹೆಸರಿನಲ್ಲಿ ಜಮಾ ಆಗಿರುವ ಹಣವನ್ನು ತಾನು ಬಳಸಿಕೊಳ್ಳಲು ಗುರುತಿನ ಚೀಟಿ ಅಡ್ಡಗೋಡೆಯಾಗಿ ಪರಿಣಮಿಸಿದೆ’ ಎಂದು ಪ್ರಭಾ ಸೂದ್ ಅವರ ವಕೀಲರು ಕೋರ್ಟ್​ಗೆ ಅಲವತ್ತುಕೊಂಡಿದ್ದಾರೆ.

ಜೊತೆಗೆ ಪ್ರಭಾ ಸೂದ್ ಅವರು 1999 ರಲ್ಲಿ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದರಂತೆ. ಷೇರು ಮತ್ತಿತರ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿದ್ದರಂತೆ. ಆದರೆ ಅವರು ಶಶಿ ಸೂದ್ ತಮ್ಮ ಹಿಂದಿನ ಹೆಸರಿನಲ್ಲಿ ಈ ಎಲ್ಲಾ ಖಾತೆಗಳನ್ನು ನಿರ್ವಹಿಸತೊಡಗಿದರಂತೆ. ಆ ಕಾಲಕ್ಕೆ, ಅಂದರೆ 1999ರಲ್ಲಿ ಹಳೆಯ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಕೆವೈಸಿ (KYC) ರಗಳೆ ಇರಲಿಲ್ಲ. ಎಲೆಕ್ಷನ್ ಕಾರ್ಡ್​, ಪಾನ್​ ಕಾರ್ಡ್ ಮುಂತಾದವುಗಳ ಗೋಜು​ ಇರಲಿಲ್ಲವಂತೆ. ಅಂತಹ ಯಾವುದೇ ದಾಖಲೆಗಳು ಇಲ್ಲದೆ, ಸರಳವಾಗಿ ತಮ್ಮ ಹೆಸರಿನಲ್ಲಿ ಖಾತೆಗಳನ್ನು ತೆಗೆದಿದ್ದರಂತೆ ಪ್ರಭಾ ಸೂದ್!

2012ರಲ್ಲಿ ಹೋಷಿಯಾರ್​ಪುರದ ಜಿಲ್ಲಾಧಿಕಾರಿ ಪ್ರಭಾ ಸೂದ್ ಹೆಸರಿನಲ್ಲಿ ಆಕೆಯ ಪತಿ ರಾಮ್​ ಪ್ರಕಾಶ್ ಸೂದ್​ ಅವರ ವಾರಸುದಾರರನ್ನಾಗಿ ಗುರುತಿಸಿ, ಸರ್ಟಿಫಿಕೇಟ್​ ಇಶ್ಯೂ ಮಾಡಿದ್ದರಂತೆ. ಆದರೆ ತಮ್ಮ ಖಾತೆ ಶಶಿ ಸೂದ್ ಹೆಸರಿನಲ್ಲಿದ್ದು, ವಾರಸುದಾರಿಕೆ ಪ್ರಮಾಣ ಪತ್ರ ಪ್ರಭಾ ಸೂದ್ ಹೆಸರಿನಲ್ಲಿ ಇದೆ. ಇದೇ ಈಗ ಪೀಕಲಾಟಕ್ಕೆ ಇಟ್ಟುಕೊಂಡಿರುವುದು. ಯಾವುದೇ ಹಣ ತಮ್ಮ ಕೈಗೆ ಬರುತ್ತಿಲ್ಲ. ಜೀವನ ನಡೆಸುವುದು ಸಾಕಾಗಿದೆ. ದಯವಿಟ್ಟು ಇದಕ್ಕೆ ಏನದರೂ ಒಂದು ವ್ಯವಸ್ಥೆ ಮಾಡಿಕೊಡಿ ಎಂದು ದೆಹಲಿ ಹೈಕೋರ್ಟ್​ ಕದತಟ್ಟಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ತಮ್ಮ ಬಳಿಯಿರುವ ಎಲ್ಲಾ ದಾಖಲೆಗಳನ್ನು ಅವರು ಅರ್ಜಿಯೊಂದಿಗೆ ಗುಜರಾಯಿಸಿದ್ದಾರೆ.

Published On - 3:26 pm, Sat, 5 February 22

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ