AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿಮ್ಸ್ ಆಸ್ಪತ್ರೆಯಲ್ಲಿ ಮತ್ತೆ ಯಡವಟ್ಟು: ಬಡ ರೋಗಿಗಳಿಗೆ ವಿತರಣೆಯಾಗಬೇಕಿದ್ದಔಷಧಗಳು 10 ವರ್ಷದಿಂದ ಗೋದಾಮಿನಲ್ಲಿವೆ!

ಎಕ್ಸ್ ಪೈರಿಯಾದ(Expiry Medicine) ಮೆಡಿಸನ್ ಡಿಸ್ಟ್ರ್ಯಾಯ್ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು 10 ವರ್ಷದಿಂದ ಎಕ್ಸ್ ಪೈರಿಯಾದ ಮಾತ್ರೆಗಳನ್ನ ಸಿಬ್ಬಂದಿ ಇಟ್ಟು ಕೊಂಡಿದ್ದಾರೆ. ಗೋಧಾಮು ತುಂಬಾ ಅವಧಿ ಮುಗಿದ ಔಷಧಗಳು ತುಂಬಿವೆ.

ಮಿಮ್ಸ್ ಆಸ್ಪತ್ರೆಯಲ್ಲಿ ಮತ್ತೆ ಯಡವಟ್ಟು: ಬಡ ರೋಗಿಗಳಿಗೆ ವಿತರಣೆಯಾಗಬೇಕಿದ್ದಔಷಧಗಳು 10 ವರ್ಷದಿಂದ ಗೋದಾಮಿನಲ್ಲಿವೆ!
ಎಕ್ಸ್ ಪೈರಿಯಾದ ಮೆಡಿಸನ್
TV9 Web
| Edited By: |

Updated on:Jun 15, 2022 | 5:36 PM

Share

ಮಂಡ್ಯ: ಜಿಲ್ಲೆಯ ಮಿಮ್ಸ್(MIMS) ಆಸ್ಪತ್ರೆಯ ವಿರುದ್ಧ ಪದೇ ಪದೇ ಎಡವಟ್ಟುಗಳ ಸುರಿಮಳೆಯೇ ಹೇಳಿ ಬರುತ್ತಿದೆ. ಭಾನುವಾರ ಮಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿಕಲಚೇತನ ರೋಗಿ (Patient) ಬಲಿಯಾಗಿರುವಂತಹ ದಾರುಣ ಘಟನೆ ನಡೆದಿತ್ತು. ಆದ್ರೆ ಇದೀಗ ಮತ್ತೊಂದು ಎಡವಟ್ಟು ಬಯಲಾಗಿದೆ. ಎಕ್ಸ್ ಪೈರಿಯಾದ(Expiry Medicine) ಮೆಡಿಸನ್ ಡಿಸ್ಟ್ರ್ಯಾಯ್ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು 10 ವರ್ಷದಿಂದ ಎಕ್ಸ್ ಪೈರಿಯಾದ ಮಾತ್ರೆಗಳನ್ನ ಸಿಬ್ಬಂದಿ ಇಟ್ಟು ಕೊಂಡಿದ್ದಾರೆ. ಗೋಧಾಮು ತುಂಬಾ ಅವಧಿ ಮುಗಿದ ಔಷಧಗಳು ತುಂಬಿವೆ.

ಕೋವಿಡ್ ಸಮಯದಲ್ಲಿ ವಿತರಣೆಯಾಗದೆ ಇದ್ದ ಔಷಧಗಳು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಡಿಸಿನ್ ಡೇಟ್ ಎಕ್ಸ್ ಪೈರಿಯಾಗಿದೆ. ಗೋಧಾಮು ತುಂಬಾ 10 ವರ್ಷಕ್ಕೂ ಹಳೆಯ ಔಷಧಗಳು ತುಂಬಿವೆ. ಸದ್ಯ ಈ ಬಗ್ಗೆ ಈಗ ಮಿಮ್ಸ್ ನಿರ್ದೇಶಕ ಹರೀಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೊರೊನಾ ಸಂಬಂಧಪಟ್ಟ ಮಾತ್ರೆಗಳಷ್ಟೆ ಬಿಕರಿಯಾದ ಹಿನ್ನಲೆ ಕೋವಿಡ್ ಹೊರೆತಾದ ಔಷಧಗಳು ಖಾಲಿಯಾಗದೆ ಸಾಕ್ಟ್ ಉಳಿದಿತ್ತು. ಈ ಹಿನ್ನಲೆ ಮಿಮ್ಸ್ ನಿರ್ದೇಶಕ ಹರೀಶ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ದಾಸ್ತಾನಿನಲ್ಲಿರು ಅವಧಿ ಮುಗಿದ ಔಷಧಗಳನ್ನ ತೆರವು ಮಾಡುವಂತೆ ಪತ್ರ ಬರೆದಿದ್ದು ಸದ್ಯ ಸರ್ಕಾರದ ಆದೇಶಕ್ಕಾಗಿ ಮಿಮ್ಸ್ ವೈದ್ಯಕೀಯ ಸಿಬ್ಬಂದಿ ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಮಂಡ್ಯ ಮಿಮ್ಸ್​​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿಕಲಚೇತನ ಮಹಿಳೆ ಬಲಿ: ಕುಟುಂಬಸ್ಥರ ಆಕ್ರೋಶ

ಮಂಡ್ಯ ಮಿಮ್ಸ್ ನಡೆ ಸಾಕಷ್ಟು ಅನುಮಾನದ ಕಡೆಗೆ ಇನ್ನು ಮತ್ತೊಂದು ಕಡೆ ಮಿಮ್ಸ್ ವಿರುದ್ಧ ಬಡ ರೋಗಿಗಳು ಗಂಭೀರ ಆರೋಪ ಮಾಡಿದ್ದಾರೆ. ಬಡ ರೋಗಿಗಳಿಗೆ ವಿತರಣೆಯಾಗಬೇಕಿದ್ದ ಔಷಧಿಗಳು ಮಣ್ಣು ಪಾಲಾಗಿವೆಯಂತೆ. ಇದು ಮಂಡ್ಯ ಮೆಡಿಕಲ್ ಕಾಲೇಜಿನ ಮತ್ತೊಂದು ಕರ್ಮಕಾಂಡ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಡಿಸಿನ್ ಡೇಟ್ ಎಕ್ಸ್ಪೈರ್ ಆಗಿದೆ. ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವಿತರಣೆಯಾಗದೇ ಗೋಡೋನ್ ನಲ್ಲೇ ಅವಧಿ ಮೀರಿದ ಮೆಡಿಸಿನ್ ಉಳಿದಿವೆ. ಅವಧಿ ಮೀರುವ ಮುನ್ನ ವಿತರಣೆಗೆ ಅಧಿಕಾರಿಗಳು ಕ್ರಮ ವಹಿಸಬೇಕಿತ್ತು. ಇಲ್ಲ ಮೆಡಿಸಿನ್ ಖಾಲಿಯಾಗದಿದ್ರೆ ಡೇಟ್ ಎಕ್ಸ್ಪೈರ್ ಮುನ್ನ ಮತ್ತೊಂದು ಆಸ್ಪತ್ರೆಗೆ ತಲುಪಿಸಬೇಕಿತ್ತು. ಮೂರ್ನಾಲ್ಕು ವರ್ಷದಿಂದ ವಿತರಣೆಯಾಗದೇ ಬಡವರ ಔಷಧಿ ನಿರುಪಯುಕ್ತವಾಗಿದೆ ಎಂದು ಮಿಮ್ಸ್ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯತೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಮಿಮ್ಸ್ ನಲ್ಲಿ ಉಚಿತವಾಗಿ ಸಿಗುವ ಔಷಧಿ ಬಿಟ್ಟು ಖಾಸಗಿ ಮೆಡಿಕಲ್ನಲ್ಲಿ ಸಿಗುವ ಮೆಡಿಸನ್ ಬರೆಯುತ್ತಾರೆ. ಮಿಮ್ಸ್ ನಲ್ಲಿ ಸಿಗಲ್ಲ, ಹೊರಗೆ ತೆಗೆದುಕೊಳ್ಳಿ ಎಂದು ವೈದ್ಯರು ಸ್ಲಿಪ್ ನೀಡುತ್ತಾರೆ. ಖಾಸಗಿ ಮೆಡಿಕಲ್ ಗಳಿಗೆ ಸ್ಲಿಪ್ ಕೊಟ್ಟು ಕಳಿಸ್ತಿರೋದಕ್ಕೆ ವಿತರಣೆಯಾಗಬೇಕಿದ್ದ ಔಷಧಿ ಉಳಿತ ಇದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸತತ 8ನೇ ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಹೊರಟ್ಟಿ ಅಯ್ಕೆಯಾದ ಬಳಿಕ ಬೆಂಬಲಿಗರು ಸಂಭ್ರಮಿಸಿದರು

ಹೊಸ ಔಷಧಿ ನೀಡಿ ಅವಧಿ ಮೀರಿದ ಮೆಡಿಸಿನ್ ಇಲ್ಲೆ ಬಿಟ್ಟಿದ್ದಾರೆ ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡ್ಯ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಹರೀಶ್ ಸ್ಪಷ್ಟನೆ ನೀಡಿದ್ದಾರೆ. ಅವಧಿ ಮೀರಿದ ಔಷಧಿ ಬದಲಿ ಮತ್ತೊಂದು ಔಷಧಿ ಬಂದಿದೆ. ಹೊಸ ಔಷಧಿ ನೀಡಿ ಅವಧಿ ಮೀರಿದ ಮೆಡಿಸಿನ್ ಇಲ್ಲೆ ಬಿಟ್ಟಿದ್ದಾರೆ. ಅವಧಿ ಮೀರುವ 6 ತಿಂಗಳು ಮುಂಚಿತವಾಗಿಯೇ ಏಜೆನ್ಸಿಗೆ ಪತ್ರ ಬರೆಯುತ್ತೇವೆ. ಅದರಂತೆ ಬದಲಿ ಔಷಧಿ ನಮಗೆ ಪೂರೈಕೆಯಾಗಿದೆ. 10 ವರ್ಷದಿಂದ ಅವಧಿ ಮೀರಿದ ಔಷಧಿ ಆಡಿಟ್ ಆಗಿಲ್ಲ. ಈಗ ಆಡಿಟ್ ಮಾಡಿ ನಿಯಮಾನುಸಾರ ನಾಶ ಮಾಡಲು ಮುಂದಾಗಿದ್ದೇವೆ. ಔಷಧಿ ಉಳಿದಿರೋದ್ರಿಂದ ಮೆಡಿಕಲ್ ಕಾಲೇಜಿಗೆ ಹಣ ನಷ್ಟವಾಗಿಲ್ಲ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:36 pm, Wed, 15 June 22

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್