ಕೊನೆಗೂ ಫಲಿಸಿದ ಪೂಜೆ; 120 ಅಡಿ ಸನಿಹಕ್ಕೆ ತಲುಪಿದ ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ

ಅಕ್ಟೋಬರ್ 1ರಂದು ಕೆಆರ್​ಎಸ್​ ನೀರಿನ ಮಟ್ಟ 112.72 ಅಡಿಗೆ ಕುಸಿದಿತ್ತು. ಇದರಿಂದ ಡ್ಯಾಂ ಅಚ್ಟುಕಟ್ಟು ಪ್ರದೇಶದಲ್ಲಿ ರೈತರಿಗೆ ಆತಂಕ ತರಿಸಿತ್ತು. ಬೆಂಗಳೂರಿಗೂ ನೀರಿನ ಕೊರತೆ ಭೀತಿ ಎದುರಾಗಿತ್ತು.

ಕೊನೆಗೂ ಫಲಿಸಿದ ಪೂಜೆ; 120 ಅಡಿ ಸನಿಹಕ್ಕೆ ತಲುಪಿದ ಕೆಆರ್​ಎಸ್​ ಡ್ಯಾಂ ನೀರಿನ ಮಟ್ಟ
ಕೆಆರ್​ಎಸ್​ ಡ್ಯಾಂ

ಮಂಡ್ಯ: ಕಾವೇರಿ ಜಲಾಶಯ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್​ಎಸ್​ (KRS) ನೀರಿನ ಮಟ್ಟ 120 ಅಡಿ ಸನಿಹಕ್ಕೆ ತಲುಪಿದೆ. ಮಳೆಯಿಂದ ನಿಧಾನವಾಗಿ ಡ್ಯಾಂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ನೀರಿನ ಮಟ್ಟ ಏರಿಕೆಯಿಂದಾಗಿ ರೈತರ ಮೊಗದಲ್ಲಿ ಸಂತಸ ಮೂಡಿದೆ. ಈ ವರ್ಷ 121 ಅಡಿ ತುಂಬಿದ್ದೇ ಗರಿಷ್ಠ ಮಟ್ಟವಾಗಿತ್ತು. ಮಳೆ ಕಡಿಮೆಯಾಗಿದ್ದರಿಂದ ಒಳಹರಿವು ಇಳಿಮುಖವಾಗಿತ್ತು. ತಮಿಳುನಾಡು ಹಾಗೂ ರೈತರ ಬೆಳೆಗಳಿಗೆ ನೀರು ಹರಿಸಿದ ಪರಿಣಾಮ ಡ್ಯಾಂ ನೀರಿನ ಮಟ್ಟ ಕುಸಿದಿತ್ತು.

ಅಕ್ಟೋಬರ್ 1ರಂದು ಕೆಆರ್​ಎಸ್​ ನೀರಿನ ಮಟ್ಟ 112.72 ಅಡಿಗೆ ಕುಸಿದಿತ್ತು. ಇದರಿಂದ ಡ್ಯಾಂ ಅಚ್ಟುಕಟ್ಟು ಪ್ರದೇಶದಲ್ಲಿ ರೈತರಿಗೆ ಆತಂಕ ತರಿಸಿತ್ತು. ಬೆಂಗಳೂರಿಗೂ ನೀರಿನ ಕೊರತೆ ಭೀತಿ ಎದುರಾಗಿತ್ತು. ಕಾವೇರಿ ನದಿ ಪಾತ್ರದಲ್ಲಿ ಮತ್ತೆ ಮಳೆಯಾಗುತ್ತಿರುವ ಹಿನ್ನೆಲೆ ಡ್ಯಾಂ ನೀರಿನ ಮಟ್ಟ 119.78 ಅಡಿಗೆ ಏರಿಕೆಯಾಗಿದೆ. ಡ್ಯಾಂ ಭರ್ತಿಗಾಗಿ ಇತ್ತೀಚೆಗೆ ವಿಶೇಷ ಪೂಜೆ ನೆರವೇರಿತ್ತು. ನೀರಿನ ಮಟ್ಟ ಏರಿಕೆಯಿಂದ ರೈತರಿಗೆ ಖುಷಿ ತಂದಿದೆ.

ಕೆಆರ್​ಎಸ್​ನ ಕಾವೇರಿ ಪ್ರತಿಮೆ ಬಳಿ ಪರ್ಜನ್ಯ ಜಪ ನಡೆದಿತ್ತು. ಖ್ಯಾತ ಜೋತಿಷಿ ಬಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಪರ್ಜನ್ಯ ಜಪ ನಡೆದಿತ್ತು. ಪೂಜೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಪೂಜೆ ಬಳಿಕ ಕೆಆರ್​ಎಸ್​ ನೀರಿನ ಮಟ್ಟ ಭರ್ತಿಯತ್ತ ಸಾಗಿದೆ.

ಇಂದಿನ ನೀರಿನ ಮಟ್ಟ
ಗರಿಷ್ಠ ನೀರಿನ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 119.78 ಅಡಿ
ಒಳಹರಿವು: 19785 ಕ್ಯೂಸೆಕ್
ಹೊರಹರಿವು: 5167 ಕ್ಯೂಸೆಕ್

ಇದನ್ನೂ ಓದಿ

Ajinkya Rahane: ಮುಂಬೈ ತಂಡಕ್ಕೆ ಹೊಸ ನಾಯಕನ ಘೋಷಣೆ: ಕ್ಯಾಪ್ಟನ್ ಪಟ್ಟತೊಟ್ಟ ಅಜಿಂಕ್ಯಾ ರಹಾನೆ

Shocking Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ 8 ತಿಂಗಳ ಗರ್ಭಿಣಿ

Click on your DTH Provider to Add TV9 Kannada