ಹಲವೆಡೆ ದರೋಡೆ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಡಕಾಯಿತರ ತಂಡದ 9 ಮಂದಿ ಮಂಗಳೂರಿನಲ್ಲಿ ಬಲೆಗೆ

| Updated By: ganapathi bhat

Updated on: Apr 03, 2021 | 3:17 PM

ತಂಡದ ನಾಯಕ ಅಬ್ದುಲ್ ರವೂಫ್ (24), ರಾಮಮೂರ್ತಿ(23), ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಎನ್.ಶೆಟ್ಟಿ(48), ಸುಮನ್ (24), ಸಿದ್ದಿಕ್(27) ಹಾಗೂ ಅಲಿಕೋಯ ಎನ್ನುವವರನ್ನು ಬಂಧಿಸಲಾಗಿದೆ.

ಹಲವೆಡೆ ದರೋಡೆ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಡಕಾಯಿತರ ತಂಡದ 9 ಮಂದಿ ಮಂಗಳೂರಿನಲ್ಲಿ ಬಲೆಗೆ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಹಾಸನ ಸೇರಿದಂತೆ ಹಲವೆಡೆ ದರೋಡೆ ನಡೆಸುತ್ತಿದ್ದ ಡಕಾಯಿತರ ತಂಡದ 9 ಮಂದಿಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಸುಮಾರು 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಮಾಡಿದ್ದ ಈ ಖತರ್ನಾಕ್ ಗ್ಯಾಂಗ್​ನಲ್ಲಿ ಒಟ್ಟು 30 ಜನರಿದ್ದಾರೆ ಎಂದು ಹೇಳಲಾಗುತ್ತಿದ್ದು, ಆ ಪೈಕಿ ಒಂಬತ್ತು ಜನರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮೂಡಬಿದ್ರೆ, ಉಡುಪಿ, ವೇಣೂರಿನಲ್ಲಿ ಡಕಾಯಿತಿಗೆ ಯೋಜನೆ ರೂಪಿಸಿದ್ದ ಈ ಖದೀಮರ ತಂಡದಿಂದ ಕಾರು, ಬೈಕ್, ಮೊಬೈಲ್, ಚಿನ್ನಾಭರಣ, ಏರ್ ಗನ್ ಜಪ್ತಿ ಮಾಡಿಕೊಳ್ಳಲಾಗಿದೆ. ತಂಡದ ನಾಯಕ ಅಬ್ದುಲ್ ರವೂಫ್ (24), ರಾಮಮೂರ್ತಿ(23), ಅಶ್ರಫ್ ಪೆರಾಡಿ(27), ಸಂತೋಷ್(24), ನವೀದ್(36), ರಮಾನಂದ ಎನ್.ಶೆಟ್ಟಿ(48), ಸುಮನ್ (24), ಸಿದ್ದಿಕ್(27) ಹಾಗೂ ಅಲಿಕೋಯ ಎನ್ನುವವರನ್ನು ಬಂಧಿಸಲಾಗಿದೆ.

ಇದುವರೆಗೆ ಸುಮಾರು 12 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ಕೃತ್ಯದಲ್ಲಿ ಪಾಲ್ಗೊಂಡಿದ್ದ ಇವರಿಂದ ಒಟ್ಟು ₹32 ಲಕ್ಷ ಮೌಲ್ಯದ ಕಳವು ಮಾಲು ವಶಪಡಿಸಿಕೊಳ್ಳಲಾಗಿದೆ. ಇದೇ ತಂಡ ದಕ್ಷಿಣ ಕನ್ನಡ ಜಿಲ್ಲೆ, ಬೆಂಗಳೂರು, ಹಾಸನ ಜಿಲ್ಲೆಯಲ್ಲಿಯೂ ದರೋಡೆ ನಡೆಸಿತ್ತು ಎಂದು ತಿಳಿದುಬಂದಿದೆ. ಅಲ್ಲದೇ, ಕಳೆದ ಡಿಸೆಂಬರ್ 20ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕೊಕ್ಕಡದ ತುಕ್ರಪ್ಪ ಶೆಟ್ಟಿ ಎನ್ನುವವರ ಮನೆಗೆ ನುಗ್ಗಿ ದರೋಡೆ ನಡೆಸಿದ್ದ ಖದೀಮರು ತುಕ್ರಪ್ಪ ಶೆಟ್ಟಿಯವರ ಪತ್ನಿ ಕುತ್ತಿಗೆಗೆ ಇರಿದು ಪರಾರಿಯಾಗಿದ್ದರು. ಸದ್ಯ ಮೂಡಬಿದ್ರೆ, ಉಡುಪಿ, ವೇಣೂರಿನಲ್ಲಿ ಇದೇ ರೀತಿ ಡಕಾಯಿತಿಗೆ ಸ್ಕೆಚ್ ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

92.27 ಲಕ್ಷ ರೂಪಾಯಿ ಮೌಲ್ಯದ 1.993 ಕೆಜಿ ಚಿನ್ನ ಜಪ್ತಿ
ದುಬೈನಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ, ಮಂಗಳೂರು ಏರ್‌ಪೋರ್ಟ್‌ನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಉಳ್ಳಾಲ ಮೂಲದ ಮೊಹಮ್ಮದ್ ಆಸೀಫ್ ಸಿಕ್ಕಿಬಿದ್ದಿದ್ದು, 92.27 ಲಕ್ಷ ರೂಪಾಯಿ ಮೌಲ್ಯದ 1.993 ಕೆಜಿ ಚಿನ್ನ ಜಪ್ತಿ ಮಾಡಲಾಗಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Mangaluru police arrests 9 criminals involved in Notorious Robbery team)

ಇದನ್ನೂ ಓದಿ:
ಕಿಡ್ನಾಪ್ ಮಾಡಿ ಕೋಟಿಗೆ ಬೇಡಿಕೆ ಇಟ್ಟಿದ್ದ ಖತರ್ನಾಕ್ ಖದೀಮರು ಅರೆಸ್ಟ್.. ಐವರಿಗಾಗಿ ಮುಂದುವರೆದ ಶೋಧ 

ಪ್ರಿಯತಮನೇ ದರೋಡೆ ಮಾಡಿದ್ದ, ತಿಳಿಯದೆ ಗರ್ಲ್​ಫ್ರೆಂಡೇ ದೂರು ನೀಡಿದ್ದಳು!