AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇಂದು 930 ಜನರಿಗೆ ಕೊರೊನಾ ದೃಢ

ಒಂದೇ ದಿನ ಸಿಲಿಕಾನ್​ ಸಿಟಿಯಲ್ಲಿ 930 ಕೊರೊನಾ ಕೇಸ್​ ಪತ್ತೆಯಾಗಿದೆ. ದಿನ ಸಾಗುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು 930 ಜನರಿಗೆ ಕೊರೊನಾ ದೃಢ
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Mar 18, 2021 | 12:49 PM

ಬೆಂಗಳೂರು: ದಿನೇ ದಿನೇ ಕೊರೊನಾ ಆತಂಕ ಜನರಲ್ಲಿ ಮನೆ ಮಾಡುತ್ತಿದೆ. ಸಿಲಿಕಾನ್​ ಸಿಟಿಯಲ್ಲಿ ಇಂದು 930 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಕುರಿತಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ. ಮಾರ್ಚ್​ ತಿಂಗಳಲ್ಲಿ ಕೊವಿಡ್​ ಸಂಖ್ಯೆ ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಸೂಚನೆಯಂತೆ ಕೊವಿಡ್​ಗೆ ಸಂಬಂಧಿಸಿದ ಕೆಲಸವನ್ನು ಜಾರಿಗೊಳಿಸಲಾಗಿದೆ.

ನಿನ್ನೆ ಮಾರ್ಚ್​ 17 ರಂದು ಬೆಂಗಳೂರಿನಲ್ಲಿ 786 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಕೊರೊನಾ ಕಡಿಮೆಯಾಗಿದೆ ಎಂದು ಜನ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದರು. ಇದೀಗ ಸೋಂಕು ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಕೊವಿಡ್ ಕೇರ್ ಸೆಂಟರ್​ಗಳು ಮತ್ತೆ ಬಾಗಿಲು ತೆರೆಯಲು ಸಿದ್ಧಗೊಳ್ಳುತ್ತಿದೆ. ಅಸಿಂಪ್ಟಮ್ಯಾಟಿಕ್‌ ಸೋಂಕಿತರನ್ನು ಮತ್ತೆ ವಾಪಸ್ ಕೇರ್ ಸೆಂಟರ್​ಗೆ ಕಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೊರೊನಾ ಗುಣಲಕ್ಷಣ ತಿಳಿದು ಬಂದರೆ ಕೂಡಲೇ ಟೆಸ್ಟ್ ಮಾಡಿಸಿ; ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇನ್ನು, ಮುಂದೆ ವಿಳಾಸಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಸಂಪೂರ್ಣ ವಿಳಾಸದ ಜೊತೆ ಪಿನ್ ಕೋಡ್ ಸಹಿತ ಮಾಹಿತಿ ಪಡೆಯಲು ಸೂಚನೆ ಹೊರಡಿಸಲಾಗಿದೆ. 600 ತಂಡಗಳು ಸ್ವ್ಯಾಬ್ ಕಲೆಕ್ಟ್ ಮಾಡಲಿದೆ. ಕೊರೊನಾ ಗುಣಲಕ್ಷಣ ಕಂಡರೆ ಕೂಡಲೇ ಟೆಸ್ಟ್ ಮಾಡಿಸಿ, ರಿಪೋರ್ಟ್ ಬರುವವರೆಗೂ ಹೊರಗಡೆ ಓಡಾಡಬೇಡಿ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.

ಸ್ಲಂಗಳಲ್ಲಿ ಕೇಸ್ ಹೆಚ್ಚು ಕಂಡುಬರುತ್ತಿಲ್ಲ. ವಿದ್ಯಾರ್ಥಿಗಳು ವಾಸಿಸುತ್ತಿರುವ ಹಾಸ್ಟೆಲ್​ಗಳಲ್ಲಿ ಕೇಸ್ ಹೆಚ್ಚಾಗಿ ಕಂಡು ಬರುತ್ತಿದೆ. ಬೇರೆ ಬೇರೆ ರಾಜ್ಯಕ್ಕೆ ಹೋದವರು ಕೊರೊನಾ ಹೊತ್ತು ತರುತ್ತಿದ್ದಾರೆ. ಟ್ರಾವೆಲ್ ಹಿಸ್ಟರಿ ಇದ್ದವರಲ್ಲಿ ಕೊರೊನಾ ಕೇಸ್ ಪತ್ತೆಯಾಗುತ್ತಿದೆ. ಶಿಕ್ಷಣ ಸಂಸ್ಥೆ ಹಾಗೂ ಹಾಸ್ಟೆಲ್​ಗಳಲ್ಲಿ ಕೊರೊನಾ ಟೆಸ್ಟ್ ಪ್ರಾರಂಭಿಸಲಾಗಿದೆ. ಹೋಟೆಲ್ ಸೇರಿದಂತೆ ರೆಸ್ಟೋರೆಂಟ್​ಗಳಲ್ಲಿ 15 ದಿನಕ್ಕೊಮ್ಮೆ ಟೆಸ್ಟ್ ಮಾಡಬೇಕು. ಈ ಕುರಿತಂತೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ನಿಯಮಾವಳಿ ಪಾಲಿಸದಿದ್ದರೆ ಮಾಲೀಕರೇ ಹೊಣೆ ಹೊತ್ತುಕೊಳ್ಳಬೇಕು ಎಂದು ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ‌ ಸೋಂಕಿತರ ಸಂಖ್ಯೆ ಏರಿಕೆ ಮಾರ್ಚ್-8 ನೇ ತಾರೀಖು ಬೆಂಗಳೂರಿನಲ್ಲಿ 283 ಜನರಿಗೆ ಸೋಂಕು ಮಾರ್ಚ್-9 -363 ಸೋಂಕಿತರು ಪತ್ತೆ. 170 ಜನ ಡಿಸ್ಚಾರ್ಜ್ ಮಾರ್ಚ್-10- 488 ಸೋಂಕಿತರು ಪತ್ತೆ ಮಾರ್ಚ್-11-493ಸೋಂಕಿತರು ಪತ್ತೆ ಮಾರ್ಚ್-12-620ಸೋಂಕಿತರು ಪತ್ತೆ ಮಾರ್ಚ್-13-630ಸೋಂಕಿತರು ಪತ್ತೆ ಮಾರ್ಚ್-14-628ಸೋಂಕಿತರು ಪತ್ತೆ ಮಾರ್ಚ್-15-550ಸೋಂಕಿತರು ಪತ್ತೆ ಮಾರ್ಚ್-16 ರಂದು 700 ಜನರಿಗೆ ಸೋಂಕು ಮಾರ್ಚ್-17 ರಂದು 786 ಜನರಿಗೆ ಸೋಂಕು ಮಾರ್ಚ್-18 ರಂದು 930 ಜನರಿಗೆ ಸೋಂಕು ಪತ್ತೆ

ಇದನ್ನೂ ಓದಿ: ಹೆಚ್ಚಿದ ಕೊರೊನಾ ಪ್ರಕರಣ; ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

ಇದನ್ನೂ ಓದಿ: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಣ್ಣು ಕುಕ್ಕಲಿದೆ ಜಾಹೀರಾತುಗಳು

Published On - 12:29 pm, Thu, 18 March 21

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ಮುಳ್ಳು ಬೇಲಿ ಮತ್ತು ಜಾಲಿಮರದ ಕೊಂಬೆಗಳನ್ನು ರಸ್ತೆಗೆ ಅಡ್ಡಹಾಕಿ ಬಂದ್
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​
ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ ವ್ಯಕ್ತಿ, ವಿಡಿಯೋ ವೈರಲ್​